ರಂಗದಲ್ಲಿ ಮೋಹಕವಾಗಿ ಕುಣಿತಾರೆ, ಈ ಯಕ್ಷತಾರೆ : ನಾಟ್ಯಮಯೂರಿ, ಯಕ್ಷ ಕುವರಿ ಮಣಿಪಾಲದ ಸಂಧ್ಯಾ ನಾಯಕ್

◊ ದೀಪಕ್ ಕಾಮತ್ ಎಳ್ಳಾರೆ ಬಾಲ್ಯದಿಂದಲೇ ಯಕ್ಷಗಾನ ಅಂದರೆ ಅತೀವ ಪ್ರೀತಿ. ಯಕ್ಷಗಾನದ ಮಾತುಗಾರಿಕೆ, ಕುಣಿತ ನೋಡಿ ಆಕರ್ಷಣೆಗೆ ಒಳಗಾದ ಸಂಧ್ಯಾ  ಯಕ್ಷಗಾನವನ್ನು ಕಲಿತು ಯಕ್ಷರಂಗದಲ್ಲಿ ಇಂದು ಸಾಧನೆ ಮಾಡುತ್ತಿರುವ ಯುವ ಪ್ರತಿಭೆ. ಉಡುಪಿ ಜಿಲ್ಲೆಯ ಮಣಿಪಾಲದ ಸದಾನಂದ ನಾಯಕ್ ಮತ್ತು ನಂದಿನಿ ನಾಯಕ್ ದಂಪತಿಗಳ ಮಗಳಾದ ಸಂಧ್ಯಾ ನಾಯಕ್ ಚಿಕ್ಕಂದಿನಿಂದಲೇ ಯಕ್ಷಗಾನ ಕಲೆಯಿಂದ ಪ್ರಭಾವಿತಗೊಂಡು ಇಂದ್ರಾಳಿಯ ಯಕ್ಷಗಾನ ಕೇಂದ್ರದಲ್ಲಿ ಖ್ಯಾತ ಭಾಗವತ ಪ್ರಸಾದ್ ಮೊಗೆಬೆಟ್ಟು ಇವರಲ್ಲಿ ಯಕ್ಷರಂಗದ ಪ್ರಾಥಮಿಕ ಶಿಕ್ಷಣವನ್ನು ಪಡೆದರು. MPUC ಯಲ್ಲಿ ಕಲಿಯುತ್ತಿರುವಾಗ […]

ಯಾವ ಬಿರುದು, ಸಮ್ಮಾನವನ್ನೂ ಬಯಸದೆ ಶೈಕ್ಷಣಿಕ ಕ್ರಾಂತಿ ಮಾಡ್ತಿದ್ದಾರೆ ಉಡುಪಿಯ ಡಾ. ಮಹಾಬಲೇಶ್ವರ ರಾವ್

ಐದು ಕೃತಿಗಳಿಗೆ ಐದು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಡಾ. ಎ.ಎಸ್. ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿನಿಧಿ ಪುರಸ್ಕಾರ (ಇದೊಂದು ದಾಖಲೆ. ಯಾರಿಗೂ ಹೀಗೆ ಕಳೆದ ಏಳೆಂಟು ವರ್ಷಗಳಲ್ಲಿ ಕಸಾಪದ ದತ್ತಿನಿಧಿ ಬಹುಮಾನ ಬಂದಿಲ್ಲ), ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಟ್ರಸ್ಟಿನ ಜೀವಮಾನ ಸಾಧನೆ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ, ಡಾ.ಹಿರೇಮಲ್ಲೂರು ಈಶ್ವರನ್ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ, ರಾಜ್ಯಮಟ್ಟದ ಉಪಾಧ್ಯಾಯ ಸಮ್ಮಾನ್ ಗೌರವ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಡಾ.ಹಾ.ಮಾ.ನಾ. ದತ್ತಿನಿಧಿ ಪುರಸ್ಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪುಸ್ತಕ ಸೊಗಸು ಬಹುಮಾನ, […]

ಕಲರ್ ಫುಲ್ ಲೋಕದ ಕನಸು ಹಿಡಿಯಲು ಹೊರಟ್ರು ಕರಾವಳಿಯ ಕ್ರೀಡಾ ಚತುರ ವಿಘ್ನೇಶ್ ಶೆಟ್ಟಿ

◊ ರಮ್ಯ ಬೋಳಂತೂರು ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಹಲವಾರು ಮಂದಿ ಇಂದು ಬಣ್ಣದ ಲೋಕದಲ್ಲಿ ತೊಡಗಿಸಿಕೊಂಡು‌ ಮಿಂಚುತ್ತಿದ್ದಾರೆ. ಅದರಲ್ಲಿಯೂ ಕರಾವಳಿಯ ಪ್ರತಿಭೆಗಳು ಸಿನಿಮಾ ರಂಗದಲ್ಲಿ ತಮ್ಮದೇ ಆದ ಹೆಜ್ಜೆಯನ್ನಿರಿಸಿ‌ ಮುಂದೆ ಸಾಗುತ್ತಿದ್ದಾರೆ. ಎಳೆವೆಯಲ್ಲಿ ಕ್ರೀಡಾ ಕ್ಷೇತ್ರವನ್ನು ಹಚ್ಚಿಕೊಂಡು ಸೈನಿಕನಾಗಬೇಕೆಂದು ಕನಸ್ಸು ಕಂಡಿದ್ದ ವಿಘ್ನೇಶ್ ಶೆಟ್ಟಿ ಪ್ರಸ್ತುತ ಕನ್ನಡ ಚಲನಚಿತ್ರರಂಗದಲ್ಲಿ ನಿರ್ದೇಶಕ, ಛಾಯಾಗ್ರಹಣ, ಕ್ಯಾಮರ ಮ್ಯಾನ್, ಕ್ಯಾಮರ ಫೋಕಸ್ ಪಿಲ್ಲರ್ ಆಗಿ ಬಣ್ಣದ ಲೋಕದಲ್ಲಿ ಒಂದಷ್ಟು ಸಾಧನೆ ಮಾಡುವ ಕನಸು‌‌ ಹೊತ್ತುಕೊಂಡು ಸಾಗುತ್ತಿದ್ದಾರೆ. ಕ್ರೀಡೆಯಲ್ಲಿ ಮಾಸ್ಟರ್ ವಿಘ್ನೇಶ್ ಪಿಯುಸಿಯಲ್ಲಿ […]

ಮಂಡಲ ಕಲಾಚತುರ, ಕ್ರಿಯಾಶೀಲತೆಯಲ್ಲೇ ಬೆರಗಾಗಿಸೋ ಸುಂದರ ಕಲಾಕಾರ “ಮುರಳೀಧರ ಪುತ್ರಾಯ”

ಹಿಂದೂ ಸಂಸ್ಕೃತಿಯಲ್ಲಿ ಪೂಜೆ, ಆಚರಣೆಗಳಿಗೆ ಉನ್ನತ ಸ್ಥಾನವಿದೆ, ಅದರಲ್ಲೂ ಮಂಡಲಗಳ ಮೂಲಕ ವಿಶೇಷವಾದ ಪೂಜ್ಯನೀಯ ಸ್ಥಾನವನ್ನೂ ಕಲ್ಪಿಸಿ ದೇವರನ್ನು ಆಹ್ವಾನಿಸುವ ಕ್ರಮಗಳು ವೈದಿಕ ವಿಧಾನದಲ್ಲಿದೆ. ಆ ಮಂಡಲ ರಚನೆಯೂ ಸಾಮಾನ್ಯವಾದುದಲ್ಲ. ಮಂಡಲ ಕಲೆಯಲ್ಲಿ ನುರಿತರಾದವರೊಬ್ಬರ ಪರಿಚಯ ಮಾಡಿಕೊಡ್ತೇವೆ ನೋಡಿ. ಇವರ ಸಾಧನೆ ಗಮನೀಯ. ಇವರ ಕೈಯಲ್ಲರಳಿದ  ರಂಗೋಲಿಗಳ ಮಂಡಲಗಳು, ಮಂಟಪ ರಚನೆಗಳು ಎಲ್ಲರನ್ನೂ ಹುಬ್ಬೆರಿಸುವಂತೆ ಮಾಡಿದೆ. ಇವರೇ ಕಾರ್ಕಳ ತಾಲೂಕಿನ ಅಜೆಕಾರಿನ ಕುರ್ಸು ಕಟ್ಟೆಯ  ಮುರಳಿಧರ ಪುತ್ರಾಯ. ಇವರು ಬಿಡಿಸಿದ ಮಂಡಲಗಳು ವಿಶೇಷವಾಗಿ ಕಣ್ಸೆಳೆಯುತ್ತವೆ. ಒಂದೊಂದು ಮಂಡಲವೂ […]

ಚೌತಿಗೆ ಎಂಟ್ರಿ ಕೊಟ್ಟ ಶಿವನ ಫ್ಯಾಮಿಲಿ ! ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷರಾದ್ರು ಶಿವ-ಪಾರ್ವತಿ-ಗಣೇಶ!

ಸಾಮಾಜಿಕ ಜಾಲತಾಣದಲ್ಲಿ ಶಿವ-ಪಾರ್ವತಿ-ಗಣೇಶನ ಫೋಟೋ ಸದ್ದು ಮಾಡುತ್ತಿದ್ದು ಎಲ್ಲರ ಗಮನಸೆಳೆದಿದೆ. ಪುಟ್ಟ ಜಲಪಾತ ಧುಮುಕುವಲ್ಲಿ ಶಿವ-ಪಾರ್ವತಿ-ಗಣೇಶ ಕೂತು ಫೋಟೋಗೆ ಫೊಸ್ ಕೊಟ್ಟಿದ್ದು, ಈ ಚೆಂದದ ನೋಟಕ್ಕೆ ಬಹುತೇಕ ಮಂದಿ ಖುಷ್ ಆಗಿದ್ದಾರೆ. ಹೌದು  ಶಿವ, ಪಾರ್ವತಿ ಮತ್ತು ಗಣಪತಿ ವೇಷ ತೊಟ್ಟು ಫೋಟೋಗೆ ಚಂದದ ಫೋಸು ಕೊಟ್ಟು ಈ ಗಣೇಶೋತ್ಸವಕ್ಕೆ ಎಂಟ್ರಿ ಕೊಟ್ಟಿದ್ದಾರೆ ಈ ಮೂರು ಮಂದಿ. ಯಾರಪ್ಪಾ ಇಷ್ಟೊಂದು ಚೆಂದ ವೇಷ ಹಾಕಿ ದೇವರಾಗಿದ್ದು ಅಂತೀರಾ? ಇವರೇ ಬೆಳ್ತಂಗಡಿಯ ಪೂರ್ಣಿಮ ಪೆರ್ಗಣ್ಣ,  ಮಂಗಳೂರಿನ ಪ್ರಗತಿ ಅಮೀನ್ […]