ಇಲ್ಲಿವೆ ನೋಡಿ ಉಡುಪಿXPRESS “ನಿಮ್ ಕ್ಲಿಕ್ ಗೆ ನಮ್ Caption”ಆಯ್ಕೆಯಾದ 30 ಕ್ಲಿಕ್ ಗಳು

ನೀವು ಕ್ಲಿಕ್ಕಿಸಿದ ಫೋಟೋ ಕಳಿಸಿ, ನಿಮ್ ಫೋಟೋಗೆ ನಾವ್ ಕ್ಯಾಪ್ಶನ್ ಕೊಡ್ತೇವೆ ” ಅಂದಾಗ ನಮಗೆ ಬಂದ ಫೋಟೋಗಳು ನೂರಾರು. ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಉಡುಪಿ XPRESS ನೀಡಿದ ಕರೆಗೆ ಫೋಟೋ ಕಳಿಸಿದ ಎಲ್ಲರಿಗೂ ಧನ್ಯವಾದಗಳು. ಆಯ್ದ 30 ಫೋಟೋಗಳನ್ನು ಇಲ್ಲಿ ಪ್ರಕಟಿಸಿದ್ದೇವೆ.

ಜಾಲತಾಣದಲ್ಲಿ ಸದ್ದು ಮಾಡ್ತಿದೆ ಕುಡ್ಲದ ರಾಧೆ- ಕೃಷ್ಣರ ಜೋಡಿ ಫೋಟೋ : ಯಾರು ಈ ಮುದ್ದು ಹುಡುಗೀರು?

ಕಳೆದ ವರ್ಷ ಕೃಷ್ಣ ವೇಷಧಾರಿಯಾಗಿ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಎಲ್ಲ ಮನಸ್ಸು ಗೆದ್ದ ಕೇರಳ ಮೂಲದ ಯುವತಿ ವೈಷ್ಣವ ಕೆ. ಸುನೀಲ್. ಅವರ ಫೋಟೋ ನೋಡಿದ್ದೀರಿ, ಆ ಫೋಟೋದಲ್ಲಿ ವೈಷ್ಣವ ಕೃಷ್ಣನ ಉಡುಪು ಧರಿಸಿ ನೃತ್ಯ ಮಾಡುತ್ತಾ ಮಡಿಕೆ ಒಡೆಯಲು ಯತ್ನಿಸುತ್ತಿದ್ದಳು ಆ ಕೇರಳದ ಯುವತಿ. ಈ ವರ್ಷವೂ ಅದಕ್ಕಿಂತಲೂ ಚೆಂದದ್ದೊಂದು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.    ಮಂಗಳೂರಿನ ರಾಧೆ-ಕೃಷ್ಣರ ಈ ಪೋಟೋ ವೈರಲ್ ಆಗಿದ್ದು ವಾಟ್ಸಾಪ್ ಫೇಸ್‌ಬುಕ್‌ ಗಳ ಸ್ಟೇಟಸ್ ವಾಲ್ ಪೋಸ್ಟ್ […]

ಸಾಮಾಜಿಕ ಜಾಲತಾಣದಲ್ಲಿ ಹೃದಯ ಗೆದ್ದಿತು ಈ ಯುವಕನ ಬಣ್ಣದ ಲೋಕ: ಬಡತನದ ನಡುವೆ ಅರಳಿತು ಶ್ರೀಮಂತ ಚಿತ್ರಕಲೆ!

ಸೌಂದರ್ಯ ಎಲ್ಲರ ಕಣ್ಣನ್ನು ಗೆಲ್ಲುತ್ತೆ. ಪ್ರತಿಭೆ ಎಲ್ಲರ ಹೃದಯವನ್ನು ಗೆಲ್ಲುತ್ತೆ” ಎಂಬ ಮಾತಿದೆ. ಬಡವನೇ ಇರಲಿ, ಶ್ರೀಮಂತನೇ ಆಗಲಿ ಯಾರಲ್ಲಿ ಕಲಾಭಿವ್ಯಕ್ತಿತ್ವ ಇರುತ್ತೋ ಅಂತಹ ಪ್ರತಿ‌ಭೆಯನ್ನು ಸಮಾಜ ಗುರುತಿಸಿಯೇ ಗುರುತಿಸುತ್ತೆ. ಆ ಸಾಲಿಗೆ ವಿದ್ಯಾನಂದ (ವಿಘ್ನೇಶ್ ಕೆ.ಎಸ್) ಎಂಬ ಚಿತ್ರಕಲಾ ಪ್ರತಿಭೆ ಹೊರತಲ್ಲ  ಮನೆಯೊಳಗೆ ಕಡುಬಡತನದ ಬೇಗೆ ಇದ್ದರೂ ತನ್ನ ಕೈಚಳಕದಿಂದ ಮೂಡಿ ಬರುತ್ತಿರುವ ಈತನ ಚಿತ್ರಕಲೆಗೆ ಯಾವುದೇ ಬೇಗೆ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ತಾನು ಬಿಡಿಸಿದ ಕಲಾಚಿತ್ರಗಳನ್ನು ಹರಿಯಬಿಟ್ಟು. ಅಪಾರ ಕಲಾಭಿಮಾನಿಗಳ ಮೆಚ್ಚುಗೆಯನ್ನು ಸಂಪಾದಿಸಿದ್ದಾನೆ. ವಿಘ್ನೇಶ್. […]

ಈ ಯುವತಿಯ ಕೈಯಲ್ಲರಳಿದ ಚಿತ್ರ ನೋಡಿದ್ರೆ ನೀವು ಕ್ಲೀನ್ ಬೋಲ್ಡ್ : ಇದು ಕುಂದಾಪ್ರದ ಕಲಾಚತುರೆ ಪಾವನ ಕತೆ

♦ ಮಂಜುಳಾ . ಜಿ . ತೆಕ್ಕಟ್ಟೆ ಕರುನಾಡೇ ಕಲೆಗಳ ತವರೂರು. ಇಲ್ಲಿ ಕಲಾಮಾತೆಯ ಕಂದಮ್ಮಗಳಾಗಿ ಬೆಳೆದು ಸಾಧಿಸಿದವರಿಗೇನೂ ಕಡಿಮೆ ಇಲ್ಲ. ಎಲೆ ಮರೆಯ ಕಾಯಿಗಳಂತಿದ್ದುಕೊಂಡು ಸಾಧನೆ ಮಾಡಿರುವ ಪ್ರತಿಭಾ ಸಾಧಕರನ್ನು ಹುಡುಕುತ್ತಾ ಹೋದಾಗ ಸಿಕ್ಕಿದ್ದು  ಕುಂದಾಪುರದ ಬೈಲೂರಿನ ಯುವ ಪ್ರತಿಭೆ ಪಾವನಾ. ಚಿತ್ರ ಕಲಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಾ, ಇತರ ಕಲಾವಿದರಿಗೂ ಸ್ಪೂರ್ತಿಯಾಗಿರೋ ಈ ಯುವ ಚಿತ್ರಗಾರ್ತಿಯ ಕತೆ ಕೇಳೊಣ ಬನ್ನಿ. ವ್ಯಕ್ತಿ ಚಿತ್ರ ಕಲಾವಿದೆಯಾಗಿ ಗುರುತಿಸಲ್ಪಟ್ಟು ಈ ಕ್ಷೇತ್ರದಲ್ಲಿ ತನ್ನದೇ ಒಂದು ಮಾರ್ಗ […]

ದುಡಿಮೆಯ ನಡುವೆ ಅರಳುತ್ತಿರೋ ಈ ಹೂವಿಗೆ ಬೇಕಿದೆ ನೆರವಿನ ಕೈಗಳು: ಈ ಪ್ರತಿಭಾವಂತ ಹುಡುಗಿಯ ಪದವಿ ಕನಸು ನನಸು ಮಾಡುವಿರಾ?

ಮನೆಯ ಕಷ್ಟಕ್ಕೆ ಹೆಗಲೆಣೆಯಾಗಿ ದುಡಿಮೆ, ದುಡಿಮೆಯೊಂದಿಗೂ ಉಳಿಸಿಕೊಂಡ ಕಲಿಕೆಯ ಹಂಬಲ. ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ, ಧುತ್ತನೇ ಒದಗಿದ ಕೌಟುಂಬಿಕ ಸಂಕಷ್ಟದ ಸನ್ನಿವೇಶದಲ್ಲಿ ದುಡಿಯಲೇಬೇಕಾದ ಅನಿವಾರ್ಯತೆ  ಈ ಹುಡುಗಿಗೆ. ಆದರೂ ದುಡಿಮೆ ನಡುವೆ ಕಲಿಯುವ ಹಂಬಲ ಕೈಬಿಡದೇ ದುಡಿದ ಇವಳು ಶೇ. 94 ಗಳಿಸಿದ್ದಾಳೆ. ಹೌದು. ಇದು ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯ ಅಶ್ವಿನಿ ಅನ್ನೋ ಪ್ರತಿಭಾವಂತೆ ಹುಡುಗಿಯ ಕತೆ.  ನಾಲ್ಕು ವರ್ಷಗಳ ಕಾಲ ಮುಂಬೈಯಲ್ಲಿ ಮೊಬೈಲ್ ಶಾಪ್ ನ ದುಡಿಮೆಯಲ್ಲೂ ಕಲಿಕೆಯ ಹಂಬಲ ಉಳಿಸಿಕೊಂಡ […]