ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಭೂಮಿಕಾ ರಂಗ ಗೌರವ ಸಮರ್ಪಣೆ

ಉಡುಪಿ: ಬ್ರಹ್ಮಾವರದ ಎಸ್‌ಎಂಎಸ್ ಶಿಕ್ಷಣ ಸಂಸ್ಥೆಯ ಮಕ್ಕಳ ಮಂಟಪದಲ್ಲಿ ಮಂಗಳವಾರ ಸಾಂಸ್ಕೃತಿಕ ಸಂಘಟನೆ ಭೂಮಿಕಾ ಹಾರಾಡಿ ಸಂಸ್ಥೆಯ ಹತ್ತನೇ ವರ್ಷದ ನಾಟಕೋತ್ಸವ `ಬಣ್ಣ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ರಂಗ ಗೌರವ ಸಮರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರು, ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಸಮಾಜದ ಕರ್ತವ್ಯವಾಗಬೇಕು ಎಂದರು. ಈ ಮಣ್ಣಿನ ಜಾನಪದ ಕಲೆಗಳನ್ನು ಬೆಳೆಸುವ ಉದ್ದೇಶದಿಂದಲೇ ಹಿರಿಯ […]

ಬ್ರಹ್ಮಾವರ: ಮಹಿಳೆ ನಾಪತ್ತೆ

ಉಡುಪಿ: ಬ್ರಹ್ಮಾವರ ತಾಲೂಕಿನ ಬಾರ್ಕೂರು ನಿವಾಸಿ ಸಲ್ಮಾಭಾನು (38) ಎಂಬ ಮಹಿಳೆಯು ಮಾರ್ಚ್ 10 ರಂದು ಮನೆಯಿಂದ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 122 ಸೆಂ.ಮೀ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಉರ್ದು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಸುಳ್ಳು ಹೇಳುವುದೇ ಅಭ್ಯಾಸವಾಗಿದೆ: ವೆರೋನಿಕಾ ಕರ್ನೇಲಿಯೋ

ಉಡುಪಿ: ಕರಾವಳಿ ಜಿಲ್ಲೆಗಳ ಬಿಪಿಎಲ್ ಕಾರ್ಡ್ ದಾರರಿಗೆ ಕುಚ್ಚಲಕ್ಕಿ ಪೊರೈಕೆ ಮಾಡುವ ವಿಚಾರದಲ್ಲಿ ಸ್ಪಷ್ಟನೆ ನೀಡುವ ಭರದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾದ ಕೋಟ ಶ್ರೀನಿವಾಸ ಪೂಜಾರಿ ಮತ್ತೊಂದು ಸುಳ್ಳು ಹೇಳುವುದರ ಮೂಲಕ ಸುಳ್ಳೇ ಇವರ ಮನೆ ದೇವರು ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ. 2021 ರ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಕರೆದು ನವೆಂಬರ್ ಹೊತ್ತಿಗೆ ಕೆಂಪು ಕುಚ್ಚಲಕ್ಕಿ ಪೂರೈಸಲು ಸರ್ಕಾರದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದು […]

ಚಾಮರ ಫೌಂಡೇಶನ್ ಉಚಿತ ಬೇಸಿಗೆ ಶಿಬಿರ ಆರಂಭ

ಮಂಗಳೂರು: ಚಾಮರ®️ ಫೌಂಡೇಶನ್ ದಿ.ಯತೀಶ್ ವೈ ಶೆಟ್ಟಿ ನೆನಪಿನಲ್ಲಿ ನಡೆಸುವ ಏಳು ದಿನಗಳ ಉಚಿತ ಬೇಸಿಗೆ ಶಿಬಿರ “ಬೇಸಿಗೆಗೊಂದು ಚಾಮರ 2024” ಮಂಗಳೂರಿನ ಕೆಮ್ರಾಲ್ ಪಂಜದಗುತ್ತು ಶಾಂತಾರಾಮ ಶೆಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡಿತು. ಸುಮಾರು 100 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಈ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದರು. ಈ ಬಾರಿಯ ಶಿಬಿರ ಸ್ಥಳೀಯ ವಿನಾಯಕ ಮಿತ್ರ ಮಂಡಳಿ ಹಾಗೂ ವಿನಾಯಕ ಮಹಿಳಾ ಮಂಡಳಿ ಪಕ್ಷಿಕೆರೆ ಇವರ ಸಹಭಾಗಿತ್ವದಲ್ಲಿ ನಡೆಯುತ್ತಿದೆ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ವಿನಾಯಕ ಮಿತ್ರ ಮಂಡಳಿಯ […]

ಇ-ಸ್ಪೋರ್ಟ್ಸ್ ಪ್ರಪಂಚದಲ್ಲಿ ಭಾರತಕ್ಕೆ ಬಲ ನೀಡಲು ಭಾರತೀಯ ಗೇಮರ್ ಗಳನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮೋರ್ಟಲ್, ಥಗ್, ಪಾಯಲ್, ಮಿಥ್‌ಪಾಟ್ ಮತ್ತು ಗೇಮರ್‌ಫ್ಲೀಟ್ ಸೇರಿದಂತೆ ಗೇಮಿಂಗ್ ಪ್ರಪಂಚದ ಪ್ರಮುಖ ವ್ಯಕ್ತಿಗಳೊಂದಿಗೆ ಫಲಪ್ರದ ಚರ್ಚೆ ನಡೆಸಿದರು. ಈ ಸಭೆಯು ಇ-ಸ್ಪೋರ್ಟ್ಸ್ ಉದ್ಯಮದಲ್ಲಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ, ನಾವೀನ್ಯತೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಪ್ರಧಾನಿ ಮೋದಿಯವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಸಭೆಯಲ್ಲಿ, ಪಿಎಂ ಮೋದಿ ಅವರು ತಂತ್ರಜ್ಞಾನ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಶಕ್ತಿಯನ್ನು ಬಳಸಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, ಭಾರತದಲ್ಲಿ ಗೇಮಿಂಗ್ ಭವಿಷ್ಯದ […]