ಅಂಕೋಲಾದಲ್ಲೂ ಕಾಂತಾರ ಪಂಜುರ್ಲಿ ದೈವದ ಕಲರವ: ಕಲಾವಿದನ ಕೈಯಲ್ಲಿ ಮೂಡಿದ ಸುಂದರ ಕಲಾಕೃತಿ

ಅಂಕೋಲಾ: ಇಲ್ಲಿನ ಅವರ್ಸಾದಲ್ಲಿ ಕಲಾವಿದ ದಿನೇಶ್ ಮೇತ್ರಿಯವರ ಕೈಚಳಕದಲ್ಲಿ ಕಾಂತಾರದ ಪಂಜುರ್ಲಿ-ಗುಳಿಗ ದೈವದ ಕಲಾಕೃತಿಯೊಂದು ಮೂಡಿದ್ದು ಜನಮನ ಸೂರೆಗೊಂಡಿದೆ. ಈ ಕಲಾಕೃತಿಯನ್ನು ಅಮರ್ ನಾಯ್ಕ್ ಎನ್ನುವ ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ.

“ಕಾಂತಾರ” ನಮಗೆ ಕಾಣಿಸಿದ್ದೇನು? “ಕಾಂತಾರ” ಕ್ಕೆ ಸಿಗುವ ದೊಡ್ಡ ಗೆಲುವು ಯಾವುದೆಂದರೆ! :

♦ಪ್ರಸಾದ್ ಶೆಣೈ ಆರ್.ಕೆ ನಮ್ಮ ತುಳುನಾಡಿನ‌ ದೈವಗಳು, ಆ ದೈವಗಳ ಕಾರ್ಣೀಕಗಳು, ಅದರ ರೌದ್ರತೆ, ಅದು ನೀಡುವ ಅಭಯ, ಅದು ಹುಟ್ಟಿಸುವ ಭಯ. ಇವೆಲ್ಲವನ್ನೂ ಇನ್ನಷ್ಟು ಅಚ್ಚರಿ, ನಿಗೂಢತೆ ಬೆರೆಸಿ, ರಸವತ್ತಾದ ಕತೆಯಾಗಿಸಿ‌ ಹಿರಿಯರು ಹೇಳುವಾಗ ನಮ್ಮ ಕಲ್ಪನೆಯ ಹರಿವು ವಿಸ್ತಾರವಾಗುತ್ತಿತ್ತು, ನಮ್ಮ ನೆಲ‌ ಸಂಸ್ಕೃತಿಯ ಅರಿವೂ ಆಗುತ್ತಿತ್ತು. ನಮ್ಮ ಬಾಲ್ಯವನ್ನು ಪೊರೆಯುತ್ತಿದ್ದುದು ಇದೇ ದೈವಗಳ ಕುರಿತ ಕತೆಗಳು. ಈಗಲೂ ನನಗೆ ದೈವಗಳ ಕುರಿತು ಧಾರ್ಮಿಕ ನಂಬಿಕೆಗಿಂತಲೂ ಜಾಸ್ತಿ ಅದೊಂದು ನಿಗೂಢತೆ, ರೋಚಕತೆ, ಬೆರಗುಗಳನ್ನು ತುಂಬಿಕೊಂಡ‌ ಕಾನನದಂತೆಯೇ […]

ಕುಂದಾಪುರದ ಹೆಸರನ್ನು ಬಾನೆತ್ತರಕ್ಕೆ ಹಾರಿಸಿದ ಕುಂದಾಪ್ರ ಕನ್ನಡಿಗರು ನಮ್ಮ ಹೆಮ್ಮೆ ನಮ್ಮ ಆದರ್ಶ: ವಿಶ್ವ ಕುಂದಾಪ್ರ ಕನ್ನಡ ದಿನಕ್ಕೆ ಪ್ರಗತಿ ಬರೆದ ವಿಶೇಷ ಬರಹ..

ಕುಂದಾಪುರ ಎಂದಾಗ ಮೊದಲು ನೆನಪಾಗುವುದು ಇಲ್ಲಿನ ಭಾಷೆ. ಬೇರೆಲ್ಲಾ ಕನ್ನಡಕ್ಕಿಂತ ಕೇಳಲು ಸ್ವಲ್ಪ ಭಿನ್ನಾವಾಗಿಯೇ ಇದೆ. ಕೇಳಲು ಚಿಕ್ಕದಾಗಿ ಚೊಕ್ಕದಾಗಿ ಇರುವ ಭಾಷೆ ಎಂದರೆ ಅದೇ ನಮ್ಮ ಕುಂದಗನ್ನಡ. ಇಲ್ಲಿ ಸಾಕಷ್ಟು ಪ್ರವಾಸಿ ತಾಣಗಳು ಹಾಗೂ ರುಚಿ ರುಚಿಯಾದ ಅಡುಗೆಗಳು ಇಲ್ಲಿನ ವಿಶೇಷತೆ. ಕುಂದಾಪುರದ ಆಹಾರ ಪದಾರ್ಥಗಳಲ್ಲಿ ಬೈಗೆ ಮೀನು ಸಾಂಬಾರು ಹೆಚ್ಚು ರುಚಿಕವಾದ ಅಡುಗೆಯಾಗಿದೆ. ಬೈಗೆ ಮೀನು ಎಂದಾಗಲೇ ಹೆಚ್ಚಿನವರ ಬಾಯಲ್ಲಿ ನೀರು ಬರುವಂತಾಗಿರುತ್ತದೆ. ” ಕೊಚ್ಚಕ್ಕಿ ಕೂಳಿಗೂ ಬೈಗಿ ಮೀನ್ ಹೊಳಿಗೂ ” ಎಂಥಹಾ […]

ಮಹಾತ್ಮರು ನಡೆದಾಡಿದ ಪುಣ್ಯ ಭೂಮಿ ನಮ್‌ ಕುಂದಾಪುರ: ವಿಶ್ವ ಕುಂದಾಪ್ರ ಕನ್ನಡ ದಿನಕ್ಕೆ ಲಾವಣ್ಯ ಬರೆದ ವಿಶೇಷ ಬರಹ

ನಮ್ಮೂರಾದ ಕುಂದಾಪುರವು ತನ್ನ ವಿಶಿಷ್ಟವಾದ ಭಾಷೆ, ಪ್ರಾಕೃತಿಕ ಸೌಂದರ್ಯ, ಧಾರ್ಮಿಕ ಕ್ಷೇತ್ರಗಳು ಮತ್ತು ಆಹಾರ ವೈಶಿಷ್ಟ್ಯತೆಯಿಂದ ಪ್ರವಾಸಿಗರನ್ನು ಆಕರ್ಷಿಸುವುದಲ್ಲದೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಒಳಗೊಂಡು ಕರ್ನಾಟಕ ರಾಜ್ಯದಲ್ಲಿ ಎಲ್ಲರಿಂದಲೂ ಗುರುತಿಸಲ್ಪಡುವ ತಾಲೂಕಾಗಿದೆ. ಇದರ ಜೊತೆಗೆ ವಿಶ್ವ ಕುಂದಾಪುರ ದಿನವನ್ನು ಇಡೀ ದೇಶದಾದ್ಯಂತ ಆಚರಿಸುತ್ತಾರೆ ಎನ್ನುವುದು ನಮಗೆ ಅಭಿಮಾನದ ಸಂಗತಿ. ಹಾಗಾಗಿ ವಿಶ್ವ ಕುಂದಾಪುರ ದಿನದ ಸಲುವಾಗಿ ಈ ಲೇಖನ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿರುವುದಲ್ಲ. ಲಕ್ಷಾಂತರ ಜನರ ತ್ಯಾಗ, ಹೋರಾಟ, ಬಲಿದಾನ ಇದರ […]

ವಸುಧೈವ ಕುಟುಂಬಕಂ’ ನುಡಿಯ ನಿಜವಾದ ಅರ್ಥ ಅರಿತಾಗ: ನಟ ಅನಿರುದ್ಧ್ ಬರೆದ ಬರಹ

ಜನಪ್ರಿಯ ಟಿವಿ ಧಾರಾವಾಹಿ ‘ದಿ ಟ್ವೈಲೈಟ್ ಝೋನ್’ನ ಒಂದು ಕಂತು ‘ಎ ಕೈಂಡ್ ಆಫ್ ಎ ಸ್ಟಾಪ್ ವಾಚ್’ದಲ್ಲಿ (೧೯೬೩). ಒಬ್ಬಾತನಿಗೆ ಸ್ಟಾಪ್ ವಾಚೊಂದನ್ನು ಉಡುಗೊರೆಯಾಗಿ ಕೊಟ್ಟಿರುತ್ತದೆ. ತನ್ನೊಡೆಯನ ಹೊರತಾಗಿ ಬೇರೆಲ್ಲದಕ್ಕೂ ಮತ್ತು ಬೇರೆಲ್ಲರಿಗೂ ಸಮಯವನ್ನೇ ನಿಲ್ಲಿಸಬಲ್ಲದು ಈ ಸ್ಟಾಪ್ ವಾಚ್. ಆ ಮನುಷ್ಯ ಈ ಸ್ಟಾಪ್ ವಾಚನ್ನು ಬ್ಯಾಂಕ್ ದರೋಡೆ ಮಾಡಲು ಉಪಯೋಗಿಸುತ್ತಾನೆ. ಕಂತೆ, ಕಂತೆ ನೋಟುಗಳನ್ನು ಒಯ್ಯುತ್ತಿರುವಾಗ ಆಕಸ್ಮಿಕವಾಗಿ ಸ್ಟಾಪ್ ವಾಚನ್ನು ಕೆಳಗೆ ಬೀಳಿಸಿ, ಒಡೆದು ಹಾಕುತ್ತಾನೆ. ಒಮ್ಮೆಲೇ, ಇಡೀ ಜಗತ್ತಿನ ಜನರು ಮತ್ತು […]