udupixpress
Home Trending ಇವರು ತಯಾರಿಸೋ ಕ್ರಿಕೆಟ್ ಬ್ಯಾಟ್ ಗೆ ಭಾರೀ ಡಿಮ್ಯಾಂಡ್: ನೆಲ್ಲಿಕಾರಿನ ಚಂದ್ರಶೇಖರ್ ಆಚಾರ್ಯರು ಮಾಡೋ ಬ್ಯಾಟ್...

ಇವರು ತಯಾರಿಸೋ ಕ್ರಿಕೆಟ್ ಬ್ಯಾಟ್ ಗೆ ಭಾರೀ ಡಿಮ್ಯಾಂಡ್: ನೆಲ್ಲಿಕಾರಿನ ಚಂದ್ರಶೇಖರ್ ಆಚಾರ್ಯರು ಮಾಡೋ ಬ್ಯಾಟ್ ಕ್ರಿಕೆಟ್ ಪ್ರೇಮಿಗಳ ಅಚ್ಚುಮೆಚ್ಚು

ಇವರು ತಯಾರಿಸೋ ಕ್ರಿಕೆಟ್ ಬ್ಯಾಟ್ ಗೆ ಭಾರೀ ಡಿಮ್ಯಾಂಡಿದೆ.ದೀರ್ಘ ಬಾಳಿಕೆ ಬರುವ ಇವರು ತಯಾರಿಸೋ ಬ್ಯಾಟ್ ಗಾಗಿ ಹುಡುಕಿಕೊಂಡು ಬರುವ ಕ್ರಿಕೆಟ್ ಪ್ರೇಮಿಗಳಿದ್ದಾರೆ, ಹೌದು. ಕ್ರಿಕೆಟ್ ಬ್ಯಾಟ್ ತಯಾರಿಕೆ ಮಾಡುವ ನೆಲ್ಲಿಕಾರಿನ ಚಂದ್ರಶೇಖರ್ ಆಚಾರ್ಯ ತುಳುನಾಡಿನ ಜನರ ಮನಗೆದ್ದಿದ್ದಾರೆ ಕಳೆದ ಹತ್ತೊಂಬತ್ತು ವರ್ಷಗಳ ಬ್ಯಾಟ್ ಸೇರಿದಂತೆ ಮರದ ಕೆಲಸಗಳಲಕ್ಲಿ ತೊಡಗಿರುವ ಇವರು ಬ್ಯಾಟ್ ತಯಾರಿಸುವಲ್ಲಿ ಸಿದ್ಧಹಸ್ತರು.

ಇವರು ತಯಾರಿಸುವ ಬ್ಯಾಟ್ ಗಳಿಗೆ ಪುತ್ತೂರು ಮಂಗಳೂರು ಉಡುಪಿ ಬೆಳ್ತಂಗಡಿ ದಾವಣಗೆರೆಯಾದ್ಯಂತ ಭಾರಿ ಬೇಡಿಕೆ, ಕ್ರಿಕೆಟ್ ಪ್ರೇಮಿಗಳ ಬೇಡಿಕೆಗೆ ಅನುಗುಣವಾಗಿ ಡಿಸೈನ್ ಕೂಡ ಮಾಡುತ್ತಾರೆ ಆಚಾರ್ಯರು. ತಮ್ಮ ರಸ್ತೆಯ ಬದಿ ಸಣ್ಣ ಗೂಡಂಗಡಿ ಕಟ್ಟಿಕೊಂಡು ಗೂಡಂಗಡಿ ಒಳಗೆ ಕೂತು ಬ್ಯಾಟ್ ಅಚ್ಚುಕಟ್ಟಾಗಿ ತಯಾರಿಸುತ್ತಾರೆ. ಇವರ ಕೈಯಲ್ಲಿ ಅರಳಿದ ಬ್ಯಾಟ್ಗೆ ಕ್ರಿಕೆಟ್ ಪ್ರೇಮಿಗಳು ದೂರದಿಂದ ಅರಸಿಕೊಂಡು ಬರುತ್ತಾರೆ.

 

ಸಂಪಿಗೆ, ದೂಪ, ಹೊನ್ನೆ ಮರ, ಹೀಗೆ ವಿವಿಧ ಮರಗಳಿಂದ ಬ್ಯಾಟ್ ತಯಾರಿಸಿ ತಮ್ಮ ಗೂಡಂಗಡಿಯಲ್ಲಿಯೆ ಮಾರಾಟಮಾಡುತ್ತಾರೆ . ಕಾರ್ಕಳ-ಧರ್ಮಸ್ಥಳಕ್ಕೆ ಸಾಗುವ ರಸ್ತೆಯಲ್ಲಿ ಅನೇಕ ಪ್ರವಾಸಿಗರು ಯಾತ್ರಿಕರು ಭೇಟಿ ನೀಡಿ ಖರೀದಿಸುತ್ತಾರೆ.

ಶೋರೂಂಗಳಲ್ಲಿ ಸಿಗುವ ಸಾವಿರಾರು ರೂಪಾಯಿ ವ್ಯಯಿಸಿ ಖರೀದಿಸುವ ಬ್ಯಾಟ್ ಗಳಿಗಿಂತ ಚಂದ್ರಶೇಖರ್ ಅವರಲ್ಲಿ ಕಡಿಮೆಯಲ್ಲಿಯೆ ಸಿಗುತ್ತವೆ ನಾನೊಬ್ಬ ಆಟಗಾರನಾಗಿ ಅವರ ಕಲಾತ್ಮಕ ಬ್ಯಾಟ್ಗಗಳನ್ನು ಇಷ್ಟಪಡುತ್ತೆನೆ ಎನ್ನುತ್ತಾರೆ ಕ್ರಿಕೆಟ್ ಪ್ರೇಮಿ ಗಂಗಾಧರ್ ಈದು.

ವಿವಿಧ ಆಕಾರದ ಬ್ಯಾಟ್ ಮಾತ್ರವಲ್ಲದೆ ಗೆಂದಳೆ, ಊರಿನ ಸಿಯಾಳಗಳನ್ನು ಮಾರಾಟಕ್ಕಿಟ್ಟು ತಮ್ಮ ನಿತ್ಯದ ವ್ಯವಹಾರವನ್ನು ನಡೆಸುತ್ತಿದ್ದಾರೆ. ಟೇಬಲ್ ಸೆಟ್ , ಕಾಟ್ ಆರ್ಡರ್ ಮರದ ಕುರ್ಚಿಗಳಿಗೆ ಬೇಡಿಕೆ ಬಂದರೆ ತಮ್ಮ ತಮ್ಮನಿಗೆ ವಹಿಸಿಕೊಡುತ್ತಾರೆ.ಆದರೆ ಕ್ರಿಕೆಟ್‌ ಬ್ಯಾಟ್ ಮಾತ್ರ ಇವರೇ ತಯಾರಿಸಿ ಇದೀಗ ಕ್ರಿಕೆಟ್ ಪ್ರೇಮಿಗಳ ಮನಸ್ಸು ಗೆದ್ದಿರುವುದು ಸುಳ್ಳಲ್ಲ

→ ರಾಮ್ ಅಜೆಕಾರು

ಆಚಾರ್ಯರ ಸಂಪರ್ಕ ಸಂಖ್ಯೆ 9611943687