ಕುಕ್ಕರ್ ಬಳಕೆಗೂ ಮುನ್ನ ಈ ವಿಚಾರ ತಿಳಿದಿರಲಿ: ಇಲ್ಲಾಂದ್ರೆ ಬ್ಲಾಸ್ಟ್ ಆಗೋ ಸಾಧ್ಯತೆಯಿದೆ

ಇತ್ತೀಚಿನ ದಿನಗಳಲ್ಲಿ ಬಹುತೇಕ ಪ್ರತಿಯೊಂದು ಮನೆಯ ಅಡುಗೆಮನೆಯಲ್ಲಿ ಪ್ರೆಶರ್ ಕುಕರ್ Pressure Cooker ಬಳಸಲಾಗುತ್ತಿದೆ. ಕಡಿಮೆ ಸಮಯದಲ್ಲಿ ಅಡುಗೆ ಸಿದ್ಧವಾಗಲು ಇದು ಸಹಾಯಕವಾದರೂ, ಅಜಾಗರೂಕತೆಯಿಂದ ಬಳಸಿದರೆ ಅಪಾಯಕ್ಕೂ ಕಾರಣವಾಗಬಹುದು. ವಿಶೇಷವಾಗಿ ಕೆಲ ಸಾಮಾನ್ಯ ತಪ್ಪುಗಳು ಕುಕ್ಕರ್ ಸ್ಫೋಟಗೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ರಬ್ಬರ್ ಗ್ಯಾಸ್ಕೆಟ್ ಮತ್ತು ಸುರಕ್ಷತಾ ಕವಾಟ ಪರಿಶೀಲನೆ ಅಗತ್ಯ ಕುಕ್ಕರ್ ಬಳಸುವ ಮೊದಲು ಅದರ ರಬ್ಬರ್ ಗ್ಯಾಸ್ಕೆಟ್ ಹಾಗೂ ಸುರಕ್ಷತಾ ಕವಾಟ ಸರಿಯಾದ ಸ್ಥಿತಿಯಲ್ಲಿವೆಯೇ ಎಂದು ಪರಿಶೀಲಿಸಬೇಕು. ಇವು ಕುಕ್ಕರ್‌ನೊಳಗಿನ ಒತ್ತಡವನ್ನು […]

ಟೊಮೆಟೊ ಬೇಗ ಹಾಳಾಗುತ್ತಿದೆಯೇ? ಹೀಗೆ ಮಾಡಿದರೆ ವಾರಗಟ್ಟಲೇ ಫ್ರೆಶ್ ಆಗಿರುತ್ತದೆ!

ಎಲ್ಲರ ಮನೆಗಳಲ್ಲೂ ಟೊಮ್ಯಾಟೋ ಒಂಥರಾ ಆಪದ್ಭಾಂಧವ ಇದ್ದ ಹಾಗೆ. ಬೇರೆ ಯಾವುದೇ ತರಕಾರಿ ಇಲ್ಲದಿದ್ದರೂ ತೊಂದರೆ ಇಲ್ಲ ಟೊಮ್ಯಾಟೋ ಒಂದಿದ್ದರೆ ದಿಢೀರ್ ಅಡುಗೆ ತಯಾರಿಸಬಹುದು. ಹಾಗಾಗೇ ಪ್ರತಿಯೊಬ್ಬರ ಮನೆಯ ಅಡುಗೆಯಲ್ಲೂ ಟೊಮೆಟೊ ಪ್ರಮುಖ ಸ್ಥಾನ ಪಡೆದಿದೆ. ಸಾಂಬಾರ್, ದಾಲ್, ಕರಿ ಸೇರಿದಂತೆ ಬಹುತೇಕ ಎಲ್ಲಾ ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಟೊಮೆಟೊ ಇಲ್ಲದೆ ಅಡುಗೆ ಪೂರ್ಣವಾಗುವುದೇ ಇಲ್ಲ. ಆದರೆ ಗೃಹಿಣಿಯರಿಗೆ ಟೊಮ್ಯಾಟೋ ಕೊಳೆತು ಹೋಗದಂತೆ ವಾರಗಟ್ಟಲೇ ಸಂರಕ್ಷಿಸಿಟ್ಟಿಕೊಳ್ಳುವುದೇ ಒಂದು ದೊಡ್ಡ ತಲೆಬಿಸಿ. ಟೊಮೆಟೊದಲ್ಲಿ ಆರೋಗ್ಯಕ್ಕೆ ಅಗತ್ಯವಾದ ಅನೇಕ […]

ಮೈದಾ ಮತ್ತು ಗೋಧಿ ಹಿಟ್ಟಿನ ವ್ಯತ್ಯಾಸ ತಿಳಿಯಿರಿ: ನೀವೇ ಮೈದಾ ಬಳಕೆ ಬಿಡ್ತೀರಿ

ಹಲವರು ಮೈದಾ ಕೂಡಾ ಗೋಧಿಯಿಂದಲೇ ತಯಾರಿಸುವುದು ಆದ್ದರಿಂದ ಆರೋಗ್ಯಕ್ಕೆ ಅದು ಅಷ್ಟೇನೂ ಹಾನಿಯನ್ನುಂಟುಮಾಡುವುದಿಲ್ಲ. ಅಲ್ಲದೇ ಮೈದಾ ಬಳಕೆ ಸುಲಭ ಹಾಗೂ ರುಚಿಕರ, ಮೈದಾ ಹಿಟ್ಟಿನಿಂದ ತಯಾರಿಸಿದ ಆಹಾರ ಪದಾರ್ಥಗಳೂ ಚೆನ್ನಾಗಿರುತ್ತವೆ ಎಂಬೆಲ್ಲಾ ಯೋಚನೆಯಿಂದ ಮೈದಾ ಹಿಟ್ಟನ್ನು ಬಳಸುತ್ತಾರೆ. ಆದರೆ ಮೈದಾ ಮತ್ತು ಗೋಧಿ ಹಿಟ್ಟಿಗಿರುವ ವ್ಯತ್ಯಾಸವನ್ನು ಅರಿತರ ಖಂಡಿತಾ ನೀವು ಮೈದಾ ಬಳಕೆಯ ಮುನ್ನ ಆಲೋಚಿಸುತ್ತೀರಿ. 1. ಮೂಲ (Source) 2. ಸಂಸ್ಕರಣೆ (Processing) 3. ಪೋಷಕಾಂಶ (Nutrition) 4. ಆರೋಗ್ಯದ ಪರಿಣಾಮ 5. ಬಳಕೆ (Uses) […]

ಮೊಟ್ಟೆ ಬೇಯಿಸುವಾಗ ನೀರಿಗೆ ಒಂದಿಷ್ಟು ಉಪ್ಪು ಹಾಕಿ! ಇದು ಸ್ಪೆಷಲ್ ಕುಕಿಂಗ್ ಟಿಪ್ಸ್

ಮೊಟ್ಟೆ ಬೇಯಿಸುವಾಗ ನೀರಿಗೆ ಸ್ವಲ್ಪ ಉಪ್ಪು ಸೇರಿಸುವುದು ಬಹುಜನರು ಅನುಸರಿಸುವ ಹಳೆಯ ಅಡುಗೆ ಟ್ರಿಕ್ ಆಗಿದೆ. ಆದರೆ ಇದರ ಹಿಂದೆ ಇರುವ ನಿಜವಾದ ಕಾರಣಗಳು ಏನು ಎಂಬುದು ಹಲವರಿಗೆ ತಿಳಿದಿಲ್ಲ. ಸಿಪ್ಪೆ ಸುಲಭವಾಗಿ ತೆಗೆಯಲು ಸಹಾಯ ಉಪ್ಪು ನೀರಿನಲ್ಲಿ ಮೊಟ್ಟೆ ಕುದಿಸಿದರೆ, ಸಿಪ್ಪೆ ಸುಲಭವಾಗಿ ಬಿಡಿಸಲು ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಹೊಸ ಮೊಟ್ಟೆಗಳ ಸಿಪ್ಪೆ ಬಿಗಿಯಾಗಿ ಅಂಟಿಕೊಂಡಿರುವ ಸಂದರ್ಭದಲ್ಲಿ ಈ ವಿಧಾನ ಉಪಯುಕ್ತವಾಗಬಹುದು. ಒಡೆದ ಮೊಟ್ಟೆಗೆ ರಕ್ಷಣೆ ಮೊಟ್ಟೆ ಕುದಿಸುವಾಗ ಅದು ಒಡೆದರೆ, ಉಪ್ಪು ನೀರು […]

ದೋಸೆ ಹಿಟ್ಟು ಮಾಡಿ ಫ್ರಿಡ್ಜ್‌ನಲ್ಲಿ ಕೆಲವು ದಿನ ಇಟ್ಟು ತಿನ್ನುವ ಅಭ್ಯಾಸ ನಿಮಗಿದ್ಯಾ? ಅದೆಷ್ಟು ಡೇಂಜರ್ ನೋಡಿ

ಬೆಳಗಿನ ಉಪಹಾರದಲ್ಲಿ ದೋಸೆ ಬಹುತೇಕರ ಫೇವರಿಟ್ ಹಾಗೂ ಸುಲಭದ ತಿಂಡಿ. ಆದರೆ ಕೆಲಸದ ಒತ್ತಡದಿಂದ ಹಲವರು ವಾರಕ್ಕೆ ಸಾಕಾಗುವಷ್ಟು ಹಿಟ್ಟನ್ನು ಒಂದೇ ಬಾರಿ ತಯಾರಿಸಿ ಫ್ರಿಡ್ಜ್‌ನಲ್ಲಿ ಇಟ್ಟು ಬಳಸುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಇದೇ ಅಭ್ಯಾಸ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಎಷ್ಟು ದಿನ ಸುರಕ್ಷಿತ? ಸಾಮಾನ್ಯವಾಗಿ ದೋಸೆ ಹಿಟ್ಟನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ 3 ರಿಂದ 4 ದಿನಗಳವರೆಗೆ ಬಳಸಬಹುದು. ಆದರೆ ಅದಕ್ಕಿಂತ ಹೆಚ್ಚು ದಿನ ಇಟ್ಟರೆ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚಾಗಿ ಆಹಾರದ ಗುಣಮಟ್ಟ ಹಾಳಾಗುತ್ತದೆ. […]