ಎಚ್ಚರ, ರಾಜ್ಯದಲ್ಲಿ ಜಾಸ್ತಿಯಾಗಿದೆ ಸೈಬರ್ ವಂಚನೆ ಪ್ರಕರಣ, ಸೈಬರ್ ವಂಚಕರಿಗೆ ಬೆಂಗಳೂರೇ ಟಾರ್ಗೆಟ್,7 ತಿಂಗಳಲ್ಲಿ ₹558 ಕೋಟಿ ಕಳೆದುಕೊಂಡ ಜನರು,

ಬೆಂಗಳೂರು: ಒಂದು ಸಣ್ಣ ಕ್ಲಿಕ್, ಅಪರಿಚಿತ ಕರೆ ಅಥವಾ ದುಪ್ಪಟ್ಟು ಲಾಭದ ಆಮಿಷ… ಇಷ್ಟೇ ಸಾಕು, ಕಷ್ಟಪಟ್ಟು ಸಂಪಾದಿಸಿದ ಹಣ ಕ್ಷಣಮಾತ್ರದಲ್ಲಿ ಬ್ಯಾಂಕ್ ಖಾತೆಯಿಂದ ಮಾಯವಾಗಲು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಬರ್ ವಂಚಕರ ಹಾವಳಿ ಮುಂದುವರಿದಿದ್ದು, 2026ರ ಜುಲೈ ಅಂತ್ಯದವರೆಗೆ ಕೇವಲ ಏಳು ತಿಂಗಳಲ್ಲಿ 4,712 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ ಸಾರ್ವಜನಿಕರು ಬರೋಬ್ಬರಿ ₹558 ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ. ಗೃಹ ಇಲಾಖೆಯ ಅಧಿಕೃತ ಅಂಕಿಅಂಶಗಳ ಪ್ರಕಾರ, ನಗರದಲ್ಲಿ ಪ್ರತಿದಿನ ಸರಾಸರಿ 22 […]
ಜಿಯೋ–ಏರ್‌ಟೆಲ್‌ಗೆ ಸೆಡ್ಡು ಹೊಡೆಯಲು BSNL–Vi ಜೊತೆಯಾಟ, ನೆಟ್‌ವರ್ಕ್ ಹಂಚಿಕೆಗೆ ಮಹತ್ವದ ಹೆಜ್ಜೆ:ಸದ್ದು ಮಾಡಲಿದೆ BSNL ಮತ್ತು ವೊಡಾಫೋನ್ ಐಡಿಯಾ!

ಬೆಂಗಳೂರು: ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಮತ್ತು ಏರ್‌ಟೆಲ್‌ಗಳ ಪಾರುಪತ್ಯಕ್ಕೆ ಸವಾಲು ಹಾಕಲು ಬಿಎಸ್ಎನ್ಎಲ್ ಹಾಗೂ ವೊಡಾಫೋನ್ ಐಡಿಯಾ (Vi) ಹೊಸ ತಂತ್ರ ರೂಪಿಸಿವೆ. ಎರಡೂ ಸಂಸ್ಥೆಗಳು ತಮ್ಮ ನೆಟ್‌ವರ್ಕ್ ಹಾಗೂ ಮೂಲಸೌಕರ್ಯಗಳನ್ನು ಪರಸ್ಪರ ಹಂಚಿಕೊಳ್ಳಲು ಮುಂದಾಗಿದ್ದು, ಈ ಒಪ್ಪಂದ ಜಾರಿಯಾದರೆ ಗ್ರಾಹಕರಿಗೆ ನೆಟ್‌ವರ್ಕ್ ವ್ಯಾಪ್ತಿ ಹೆಚ್ಚುವ ಜತೆಗೆ ಎರಡೂ ಕಂಪನಿಗಳ ವೆಚ್ಚವೂ ತಗ್ಗಲಿದೆ. ವೊಡಾಫೋನ್ ಐಡಿಯಾ ಸಿಇಒ ಅಭಿಜಿತ್ ಕಿಶೋರ್ ಮತ್ತು ಬಿಎಸ್ಎನ್ಎಲ್ ಸಿಎಂಡಿ ರಾಬರ್ಟ್ ಜೆ. ರವಿ ನಡುವೆ ನಡೆದ ಸಭೆಯಲ್ಲಿ ಈ ಕುರಿತು […]
ನಿಮಗೆ SIR ನೋಟಿಸ್ ಬಂದ್ರೆ ಏನು ಮಾಡಬೇಕು? ವೋಟರ್ ಲಿಸ್ಟ್ ನಿಂದ ಹೆಸರು ಕಟ್ ಆಗುತ್ತಾ? ಮತದಾರರು ತಿಳಿಯಬೇಕಾದ ಸಂಪೂರ್ಣ ಮಾಹಿತಿ!

SIR ಪ್ರಕ್ರಿಯೆಯಲ್ಲಿ ಈಗಾಗಲೇ ನೀವು ಭಾಗವಹಿಸಿರುತ್ತೀರಿ. ಆದರೆ ಕೆಲವೊಂದು ಮಹತ್ವದ ತಪ್ಪುಗಳಾದಲ್ಲಿ ನೀವು ನೀಡಿದ ದಾಖಲೆ ಸರಿಯಿಲ್ಲದಿದ್ದಲ್ಲಿ ನಿಮಗೆ ನೊಟೀಸ್ ಬರುತ್ತದೆ. ಆದರೆ ನೋಟಿಸ್ ಬಂದಿರುವುದೇ ಮತದಾರರ ಪಟ್ಟಿಯಿಂದ ಹೆಸರು ಶಾಶ್ವತವಾಗಿ ತೆಗೆದುಹಾಕಲಾಗಿದೆ ಎಂದರ್ಥವಲ್ಲ ಆ.24ರಿಂದ ಸೆ.23ರವರೆಗೆ ಹಕ್ಕು-ಆಕ್ಷೇಪಣೆಗೆ ಅವಕಾಶ SIR ಪ್ರಕ್ರಿಯೆಯಲ್ಲಿ ಕರಡು ಮತದಾರರ ಪಟ್ಟಿಯಿಂದ ಹೆಸರು ಹೊರಗುಳಿದಿರುವ ಮತದಾರರಿಗೆ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ನೋಟಿಸ್ ನೀಡಲಾಗುತ್ತದೆ. ಈ ಅವಧಿಯಲ್ಲಿ ಮತದಾರರಿಗೆ ತಮ್ಮ ಹಕ್ಕು ಮಂಡಿಸಲು ಹಾಗೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. BLOಗಳು ಮನೆ […]
‘ಸಿಮ್ ಸ್ವ್ಯಾಪ್’ ಅನ್ನೋ ಬಹುದೊಡ್ಡ ವಂಚನೆಯ ಜಾಲ: ನಿಮ್ಮ ಸಿಮ್ ನಿಮ್ಮದೇ ಹೆಸರಿನಲ್ಲಿದೆಯಾ?ಇಲ್ಲದಿದ್ರೆ ಕಾದಿದೆ ಅಪಾಯ!

ಬೆಂಗಳೂರು: ಮೊಬೈಲ್ ನಂಬರ್ ಇಂದು ಕೇವಲ ಕರೆ ಮಾಡಲು ಮಾತ್ರ ಸೀಮಿತವಾಗಿಲ್ಲ. ಬ್ಯಾಂಕ್ ಖಾತೆ, ಯುಪಿಐ, ವಾಟ್ಸಪ್, ಇ-ಮೇಲ್ ಸೇರಿದಂತೆ ಹಲವು ಡಿಜಿಟಲ್ ಸೇವೆಗಳಿಗೆ ಮೊಬೈಲ್ ಸಂಖ್ಯೆ ಸಂಪರ್ಕ ಹೊಂದಿದೆ. ಹೀಗಾಗಿ ವಂಚಕರು ನಿಮ್ಮ ಸಿಮ್ ಮೇಲಿನ ನಿಯಂತ್ರಣ ಪಡೆದರೆ ಹಣಕಾಸು ವಂಚನೆಗೂ ದಾರಿ ಮಾಡಿಕೊಡಬಹುದು. ಈ ರೀತಿಯ ವಂಚನೆಗೆ ‘ಸಿಮ್ ಸ್ವ್ಯಾಪ್’ ಎಂದು ಕರೆಯಲಾಗುತ್ತದೆ. ಸಿಮ್ ಸ್ವ್ಯಾಪ್ ಎಂದರೇನು? ನಿಮ್ಮ ಮೊಬೈಲ್ ನಂಬರ್‌ಗೆ ಸಂಬಂಧಿಸಿದ ಹಳೆಯ ಸಿಮ್ ಬದಲಿಗೆ ಅದೇ ನಂಬರ್‌ನ ಹೊಸ ಸಿಮ್ ಅನ್ನು […]
ಆನ್‌ಲೈನ್‌ನಲ್ಲಿ ವಿಷಕಾರಿ ದತ್ತೂರಿ ಬೀಜ ಮಾರಾಟ: ಇ-ಕಾಮರ್ಸ್‌ಗಳಿಗೆ FDA ನೋಟಿಸ್

ಬೆಂಗಳೂರು: ಪ್ರಾಣಕ್ಕೆ ಅಪಾಯ ಉಂಟುಮಾಡುವ ವಿಷಕಾರಿ ದತ್ತೂರಿ ಹಣ್ಣು ಮತ್ತು ಬೀಜಗಳನ್ನು ಆನ್‌ಲೈನ್ ಇ-ಕಾಮರ್ಸ್ ವೇದಿಕೆಗಳಲ್ಲಿ ಮಾರಾಟ ಮಾಡುತ್ತಿರುವುದು ಆಹಾರ ಮತ್ತು ಔಷಧ ಆಡಳಿತ (FDA)ದ ಗಮನಕ್ಕೆ ಬಂದಿದೆ. ಅಮೆಜಾನ್ ಸೇರಿದಂತೆ ಹಲವು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಗತ್ಯ ಅನುಮತಿ ಇಲ್ಲದೆ ದತ್ತೂರಿ ಹಣ್ಣು ಹಾಗೂ ಬೀಜಗಳ ಮಾರಾಟ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ದತ್ತೂರಿ ಹಣ್ಣು ಮತ್ತು ಬೀಜಗಳು ವಿಷಕಾರಿ ಗುಣ ಹೊಂದಿದ್ದು, ಸೇವನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಅಪಾಯಕಾರಿ ಉತ್ಪನ್ನಗಳ […]