ಹುಡುಗರ ಜೊತೆ ಸೇರೋಕೆ ಏನೋ ಒಂಥರಾ ಅನ್ನಿಸಿದ ಆ ಕ್ಷಣ:ಹುಡುಗಿಯೊಬ್ಬಳ ಪಿಸುಮಾತು

ನನ್ನ ತಂಗಿ‌ ಹೈಸ್ಕೂಲ್ ಓದ್ತಾಳೆ. ಮೊನ್ನೆ ರೂಮಲ್ಲಿ ಕೂತ್ಕೊಂಡು ಏನೋ ಮಾಡ್ತಿದ್ಲು. ಅಮ್ಮ ಒಂದು ಸಣ್ಣ ಕೆಲಸ‌, ಅಂದ್ರೆ ಯಾವುದೋ ಒಂದು ವಸ್ತುವನ್ನು ತಂದುಕೊಡಲು ಹೇಳಿದಳು. ಇವಳು “ಹುಂ” ಎಂದವಳು ಐದು ನಿಮಿಷವಾದರೂ ಅಮ್ಮ ಹೇಳಿದ ಕೆಲಸ‌ ಮಾಡ್ಲಿಲ್ಲ, ಅಮ್ಮ ಮತ್ತೊಮ್ಮೆ “ತಂದುಕೊಡ್ತೀಯಾ” ಎಂದಳಷ್ಟೇ. ಇವಳಿಗೆ ಎಲ್ಲಿತ್ತೋ ಸಿಟ್ಟು ಗೊತ್ತಿಲ್ಲ, ಅಮ್ಮನ ಮೇಲೆ ರೇಗಾಡತೊಡಗಿದಳು. “ಎಲ್ಲಾ‌ ಕೆಲಸನೂ‌ ನಂಗೇ ಹೇಳ್ತೀಯಾ, ಅಕ್ಕಗೆ ಏನೂ ಹೇಳಲ್ಲ. ಮಾಡದು ಚೂರು ಲೇಟಾದ್ರೂ ಬೈತೀಯಾ ಅನ್ನುವಲ್ಲಿಂದ ಪ್ರಾರಂಭವಾದ ಸಿಟ್ಟು ನನ್ನನ್ನ ಕಂಡ್ರೆ […]

ಪ್ರಗ್ನೆಂಟ್ ಆದ್ರೆ ಮುಟ್ಟಾಗಲ್ವಂತೆ ಅಂತ ಯಾರೋ ಹೇಳಿದಾಗ ಅಳುಕು ಕಾಡಿತ್ತು: ಹುಡುಗಿಯೊಬ್ಬಳ ಪಿಸುಮಾತು

ನಾನಿನ್ನೂ ಪುಟ್ಟ ಹುಡುಗಿಯಾಗಿದ್ದೆ. ಅಪ್ಪನ ಜೊತೆ ನೆಂಟರೊಬ್ಬರ ಮನೆಗೆ ಹೋಗಿದ್ದೆ. ಆ ಮನೆ ಯಜಮಾನರು, “ಇವತ್ತು ನನ್ನದೇ ಅಡಿಗೆ ಮಾರ್ರೆ, ನಮ್ಮವರು ಒಳಗಿಲ್ಲ” ಎನ್ನುತ್ತಾ ನಕ್ಕರು. ಮನೆಯೊಡತಿ ಮನೆಯ ಜಗುಲಿಯಲ್ಲೇ ಒಂದು ಮೂಲೆಯಲ್ಲಿ ಕೂತಿದ್ದರೂ, ಇವರು ಯಾಕೆ ಹೀಗೆ ಹೇಳಿದರು ಎಂದು ನನಗೆ ಅರ್ಥವಾಗದೇ ತಲೆಯೊಳಗೆ ಪ್ರಶ್ನೆಗಳ ಸರಮಾಲೆಯೇ ಉದ್ಭವಿಸಿತು. ನಾವು ಇಡೀ ದಿನ ಅಲ್ಲೇ ಇದ್ದರೂ ಅವರು ಮಾತ್ರ ಒಂದು ಮೂಲೆಯಲ್ಲೇ ಕೂತು ನಮ್ಮೊಂದಿಗೆ ಮಾತನಾಡುತ್ತಿದ್ದರು, ಯಾರನ್ನೂ ಮುಟ್ಟದೇ ದೂರದಿಂದಲೇ ಎಲ್ಲವನ್ನೂ ತೆಗೆದುಕೊಳ್ಳುತ್ತಿದ್ದರು. ನಂಗಂತೂ ಎಲ್ಲವೂ […]

ತುಂಬು ಹರೆಯದ ಹುಡುಗಿ ನಾನು: ಪ್ರತೀ ವಾರ ನನ್ನ ಕತೆ ಹೇಳ್ತೇನೆ: ಹೊಸ ಅಂಕಣ “ಹುಡುಗಿಯೊಬ್ಬಳ ಪಿಸುಮಾತು”

ನಾನೊಬ್ಬಳು ಹುಡುಗಿ. ಅಷ್ಟೇನೂ ಬಿಳುಪೂ ಅಲ್ಲದ, ಕಪ್ಪೂ ಇಲ್ಲದ ಸಾಧಾರಣ ರೂಪಿನ, ಸ್ವಲ್ಪ ದಪ್ಪ ಮೈಕಟ್ಟಿನ ಹರೆಯದ ಹುಡುಗಿ. ನಾನು ಹುಟ್ಟಿದಾಗ ಚೊಚ್ಚಲ ಹೆರಿಗೆ ನನ್ನಮ್ಮನಿಗೆ. ಎಲ್ಲರೂ ಸೇರಿ ಸಿಹಿ ಹಂಚಿ ಸಂಭ್ರಮಿಸಿದ್ದರಂತೆ. ನನ್ನ ನಸು ನಗು, ಮೊದಮೊದಲ ತೊದಲು ಮಾತು, ಎದ್ದು-ಬಿದ್ದು ಪುಟು ಪುಟು ನಡೆಯೋ ನನ್ನಂದ ಎಲ್ಲರ ದೃಷ್ಟಿ ಬೀಳುವಂತಿತ್ತಂತೆ. ಗೊಂಬೆಯಂತಿದ್ದ ನನ್ನ ಬಾಲ್ಯದ ಪ್ರತಿ ಕ್ಷಣಗಳನ್ನೂ ನನ್ನಪ್ಪ- ಅಮ್ಮ, ಅಜ್ಜ- ಅಜ್ಜಿ ಅವರ ಬಾಲ್ಯದಂತೆಯೇ ಅಚ್ಚರಿಯಿಂದ ಸಂಭ್ರಮಿಸಿದ್ದರಂತೆ. ನನ್ನ ಬೇಕು-ಬೇಡಗಳಿಗೆ ಇಲ್ಲವೆನ್ನದೆ ಪ್ರೀತಿಯ […]

ಅವಳೊಂದಿಗೆ ನನ್ನ ಚೇಷ್ಟೆಗಳು ಎಷ್ಟಿತ್ತೆಂದರೆ !:ಆಕೆ ಜತೆಗಿದ್ದರೆ ನಾನು ರಸಿಕರ ರಸಿಕ !

ಪ್ರೀತಿ ಹುಟ್ಟಲು ಅದು ಪಕ್ವಕಾಲವಾಗಿತ್ತೋ ಏನೋ. ಸೋನೆ ಮಳೆಯ ಆ ದಿನ ಪಿಯುಸಿಯ ಕನ್ನಡ ಪೀರಿಯಡ್ನಲ್ಲಿ ಪ್ರಾಧ್ಯಾಪಕರು ‘ಜೋಗ್ಯೋರ ಅಂಜಪ್ಪನ ಕೋಳೀ ಕತೆ’ ಅಂತ ಪಿಟೀಲು ಕುಯ್ಯುತ್ತಿದ್ದಾಗ ಪಕ್ಕಾ ತರಲೆ ನನ್ಮಗ ನಾನು ಕೊನೆಯ ಬೆಂಚಿಗಂಟಿಕೊಂಡು ಕಪಿಚೇಷ್ಟೆಯಲ್ಲಿ ತೊಡಗಿದ್ದೆ. ಉಪನ್ಯಾಸಕರು ತಿರುಗುವಾಗ ಪಾಠ ಆಲಿಸುವಂತೆ ಪೋಸು ಕೊಡುತ್ತಿದ್ದೆನಾದರೂ ಬಾಯಿ ನಿಲ್ಲದೆ ಸಣ್ಣ ಧ್ವನಿಯಲ್ಲಿ ನಿತೀಶ್, ನಾಗರಾಜ ಮತ್ತು ಮನು ಎಂಬ ನನ್ ತರ್ಲೆ ಗೆಳೆಯರ ಜೊತೆಗೆ ಹರಟೆಗಿಳಿದಿತ್ತು.  ಎಸ್ಎಸ್ಎಲ್ಸಿಯ ಮ್ಯಾಥ್ಸ್ ನಲ್ಲಿ ಡುಮ್ಕಿ ಹೊಡೆದಿದ್ದ ಆಕೆ ರೀ […]

ಥಿಯೇಟರ್ ನ ಕತ್ತಲಲ್ಲಿ ಅವನ ಸ್ಪರ್ಶಕ್ಕೆ ಅವಳು ಹಸಿಬಿಸಿಯಾದಳು: ಹುಡುಗಿಯೊಬ್ಬಳು ಕಂಡ “ರಸ”ಮಯ ದೃಶ್ಯ

ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಅಭಿನಯದ ರಾಮ್‌ಲೀಲಾ ಬಿಡುಗಡೆಗೊಂಡು ಸಾಕಷ್ಟು ಸುದ್ದಿ ಮಾಡಿತ್ತು. ಟ್ರೈಲರ್ ಅದಾಗಲೇ ನೋಡಿದ್ದೆ. ನಮ್ಮೂರಿನ ಥಿಯೇಟರ್‌ಗೆ ಆ ಸಿನಿಮಾ ಬಂದಿತ್ತು.  ಮನಸ್ಸೆಲ್ಲಾ ಹರೆಯ ಕವಿದ ಹೊತ್ತದು. ಸಿನಿಮಾದಲ್ಲಿ ಬರುವ ಪ್ರೀತಿಯ ದೃಶ್ಯಕ್ಕೆ ಮನಸ್ಸು ಜಿಗಿದಾಡುವ ಹೊತ್ತದು, ನಾನು ಮತ್ತು ನನ್ನ ಗೆಳೆಯ ಸೇರಿಕೊಂಡು ರಾಮ್‌ಲೀಲಾ ಸಿನಿಮಾಗೆ ಹೋದೆವು. ನಾವಿಷ್ಟ ಪಟ್ಟ ಸಿನಿಮಾ ಪ್ರಾರಂಭವಾಯಿತು. ಥಿಯೇಟರ್ ಇಡೀ ಖಾಲಿ ಖಾಲಿ. ಮುಂದಿನ ಸಾಲಿನಲ್ಲಿ ಮೂರು ಜನ ಕಾಲೇಜು ಹುಡುಗರು ಇದ್ರು. ಅದೇ ಸಾಲಿನ […]