ವ್ಹಾವ್ ಎಷ್ಟ್ ಚೆಂದ ಚಿತ್ರ ಬಿಡಿಸ್ತಾಳೆ ಈ ಯುವತಿ: ಬೆರಗಿನ ಕೈಗಳ ಚಿತ್ರಗಾರ್ತಿ ಕಾರ್ಕಳದ ಜ್ಯೋತ್ಸ್ನಾ ಶೆಣೈ

ಕಲ್ಪನೆಗೆ ರಂಗುರಂಗಿನ ಬಣ್ಣ ತುಂಬಿ ಅದ್ಬುತ ಕಲಾಕೃತಿ ಮೂಡಿಸುವ ಯುವ ಕಲಾವಿದೆ ಕಾರ್ಕಳದ ಜ್ಯೋತ್ಸ್ಯಾ ಶೆಣೈ. ಇವರ ಕೈಯಲ್ಲರಳಿದ ಚಿತ್ರದಲ್ಲಿ ಬೆರಗಿದೆ, ವ್ಹಾವ್ ಅಂತ ಅನ್ನಿಸುವ ಸೊಗಸಿದೆ, ಸೃಜನಶೀಲ ಕುಸುರಿ, ಮುಗ್ದತೆ, ಜೀವನಪ್ರೀತಿ ಎಲ್ಲವೂ ಇವರ ಕಲಾಕೃತಿಗಳಲ್ಲಿ ಕಾಡುತ್ತದೆ.

    

ಜ್ಯೋತ್ಸ್ಯಾ ಶೆಣೈ ಮೂಲತಃ ಕಾರ್ಕಳದವರು, ಕಾರ್ಕಳ ಆರ್.ಸುರೇಶ್ ಶೆಣೈ, ಆರ್.ಸುಜಾತಾ ಶೆಣೈ ದಂಪತಿಯ ಪುತ್ರಿ. ಸದ್ಯ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರೋ ಜ್ಯೋತ್ಸ್ಯಾಗೆ ಬಾಲ್ಯದಿಂದಲೂ ಚಿತ್ರ ಬರೆಯೋದು ನೆಚ್ಚಿನ ಆಸಕ್ತಿ.

https://m.facebook.com/story.php?story_fbid=750967682370108&id=329044147895799

ಪರಿಸರ, ಡಿಸೈನ್ ಡ್ರಾಯಿಂಗ್ಸ್,ಪಾಟ್ ಆರ್ಟ್ ಅಂದ್ರೆ ಜ್ಯೋತ್ಸ್ನಾಗೆ ಅಪಾರ ಹಿಗ್ಗು.

ಖ್ಯಾತ ಕಲಾವಿದ ಚಂದ್ರನಾಥ ಬಜಗೋಳಿ ಅವರ ವಿದ್ಯಾರ್ಥಿಯಾಗಿರುವ ಜ್ಯೋತ್ಸ್ಯಾಗೆ ಚಿತ್ರ ಕಲಾ ಕ್ಷೇತ್ರದಲ್ಲಿ ಹೊಸತೇನಾದ್ರೂ ಸಾಧಿಸುವ ಹುಮ್ಮಸ್ಸಿದೆ. ಅವರ ಬಣ್ಣದ ಕೈಗಳಲ್ಲಿ ಇನ್ನಷ್ಟು ಬೆರಗು ಅರಳಲಿ ಎನ್ನುವುದು ಉಡುಪಿXPRESS ಹಾರೈಕೆ.

(“ಚಿತ್ರ ಶಾಲೆ”ಉಡುಪಿ XPRESS  ನ ಹೊಸ ಅಂಕಣ. ಹೊಸ ಯುವ ಕಲಾವಿದರ ಕಲಾಕೃತಿ ಮತ್ತು ಅವರ ಕಿರು ಪರಿಚಯವನ್ನು ಲೋಕಕ್ಕೆ ತಿಳಿಸುವ ಪ್ರಯತ್ನವಿದು. ನಿಮ್ಮ ಕಲಾಕೃತಿಗಳನ್ನು ನಿಮ್ಮ ಕಿರು ಪರಿಚಯದೊಂದಿಗೆ ನಮಗೆ ಕಳಿಸಬಹುದು.ನಿಮ್ಮ ಸ್ನೇಹಿತರ ವಲಯದಲ್ಲೂ ಯಾರಾದರೂ ಕಲಾವಿದರಿದ್ದರೆ ಅವರಿಗೆ ಗೊತ್ತಾಗದ ಹಾಗೆ ಅವರ ಕುರಿತು ಮಾಹಿತಿ ನಮಗೆ ನೀಡಿ ಅವರಿಗೆ ಸರ್ ಪ್ರೈಜ್ ಕೊಡಬಹುದು. ನಮ್ಮ ವಾಟ್ಯ್ಸಾಪ್-7483419099  ಇ-ಮೇಲ್: newsudupixpress@gmail.com