udupixpress
Home Trending ಕೊರೊನಾ ಸಂಹಾರ ಮಾಡುವ ನವದುರ್ಗೆ:ವೈರಲ್ ಆಗ್ತಿದೆ ಈ ಫೋಟೋ

ಕೊರೊನಾ ಸಂಹಾರ ಮಾಡುವ ನವದುರ್ಗೆ:ವೈರಲ್ ಆಗ್ತಿದೆ ಈ ಫೋಟೋ

ಎಲ್ಲೆಡೆ ನವರಾತ್ರಿಯ ಸಂಭ್ರಮ ಕಳೆಗಟ್ಟಿದೆ.ಕೊರೋನಾ ಕಾಲದಲ್ಲಿಯೂ ಜನರ ಸಂಭ್ರಮಕ್ಕೆ ತೊಂದರೆಯಾಗದೇ ಎಲ್ಲರೂ ನವರಾತ್ರಿ ಹಬ್ಬವನ್ನು ಆಚರಿಸುತ್ತಲೇ ಇದ್ದಾರೆ. ನವರಾತ್ರಿಯ ನವದುರ್ಗೆಯರ ಕೃಪೆಯಿಂದ, ಆರಾಧನೆಯಿಂದ ಕೊರೋನಾ ಅನ್ನೋ ಭೂತ ತೊಗಲಲಿ ಎನ್ನುವ ಪ್ರಾರ್ಥನೆ ಎಲ್ಲ ಕಡೆ ನಡೆಯುತ್ತಿದೆ.ನವದುರ್ಗೆ ಕೊರೋನಾವನ್ನು ಮಟ್ಟ ಹಾಕುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದ್ದು ಸಖತ್ ಸದ್ದು ಮಾಡ್ತಿದೆ.ಯಸ್ ಬೆಳ್ತಂಗಡಿಯ ಯುವ ಕಲಾವಿದೆ ಪೂರ್ಣಿಮಾ ಪೆರ್ಗಣ್ಣ ಅವರು ಶಕ್ತಿ ಸ್ವರೂಪಿಣಿ ನವದುರ್ಗೆಯ ವೇಷ ಧರಿಸಿ ಕೊರೋನಾ ಸಂಹಾರ ಮಾಡುವ ಮತ್ತು ಕೊರೋನಾಗೆ ವಿದಾಯ ಹೇಳುವ ಸಂದೇಶವಿರುವ ದೃಶ್ಯವಿದು.

ಇದೊಂದು ನವರಾತ್ರಿ ಸಂದೇಶವನ್ನು ನೀಡುವ ಫೋಟೋ ಶೂಟ್ ಆಗಿದ್ದು ಚಿತ್ರಗಳನ್ನು ಬೆಳ್ತಂಗಡಿಯ ಸುಗುಣೇಂದ್ರ ಅವರು ಸೆರೆ ಹಿಡಿದಿದ್ದಾರೆ.ಮೇಕಪ್ ನಲ್ಲಿ ಉಷಾ ಅಮೀನ್,ರಜನಿ ಸ್ಪರ್ಶವಿದೆ.ಹರ್ಷಿತಾ,ಆಂಶಿಕ್,ವಿಭಿಶಾ,ದೇವಿಪ್ರಸಾದ್,ಶ್ರಿಯಾ,ಪ್ರಗತಿ ಅಮೀನ್,ಆಯುಷ್, ಲಿಖಿತಾ ಮೊದಲಾದ ಕಲಾವಿದರಿದ್ದಾರೆ.ಶರು ನಾಯರ್ ಯೋಜನೆ,ಗುರುಪ್ರಸಾದ್ ಸಹಕಾರವಿದೆ.

ಕೊರೊನಾ ಆದಷ್ಟು ಬೇಗ ಈ ಲೋಕದಿಂದ ತೊಲಗಲಿ ಎಂದು ಚಿತ್ರಗಳು ನೀಡುವ ಸಂದೇಶವೂ ಸಾಮಾಜಿಕ ಜಾಲತಾಣಿಗರ ಮನಸ್ಸನ್ನು ಆವರಿಸಿದೆ.ನವದುರ್ಗೆ ಕೊರೋನಾ ಸಂಹಾರ ಮಾಡುವ ಚಿತ್ರಗಳ  ಝಲಕ್ ಇಲ್ಲಿದೆ ನೋಡಿ