ಹೆಂಡತಿ-ಮಕ್ಕಳಿಲ್ಲದೆ ವ್ಯಕ್ತಿ ಮೃತಪಟ್ಟರೆ ಆಸ್ತಿ ಯಾರ ಪಾಲಿಗೆ ಹೋಗುತ್ತದೆ? ಮಾಹಿತಿ ತಿಳಿಯಿರಿ

ಒಬ್ಬ ವ್ಯಕ್ತಿ ವಿಲ್ ಬರೆಯದೆ ಮೃತಪಟ್ಟರೆ, ಅವರ ಆಸ್ತಿ ಯಾರಿಗೆ ಸಿಗುತ್ತದೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಎದುರಾಗುತ್ತದೆ. ಅದರಲ್ಲೂ ಮೃತರಿಗೆ ಹೆಂಡತಿ, ಮಕ್ಕಳು ಇಲ್ಲದಿದ್ದರೆ ಇಡೀ ಆಸ್ತಿ ಅಣ್ಣ-ತಂಗಿಯರಿಗೆ ಸಿಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಕಾನೂನಿನಲ್ಲಿ ಉತ್ತರಾಧಿಕಾರಿಗಳಿಗೆ ನಿಗದಿತ ಆದ್ಯತೆಯ ಕ್ರಮವಿದೆ. ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಖ್ಖರಿಗೆ ಸಂಬಂಧಿಸಿದಂತೆ ಉತ್ತರಾಧಿಕಾರದ ಪ್ರಮುಖ ನಿಯಮಗಳನ್ನು ಹಿಂದೂ ಉತ್ತರಾಧಿಕಾರ ಕಾಯ್ದೆ, 1956 ನಿಯಂತ್ರಿಸುತ್ತದೆ. ವಿಲ್ ಇಲ್ಲದೆ ಹಿಂದೂ ಪುರುಷ ಮೃತಪಟ್ಟಾಗ ಮೊದಲು Class I ಉತ್ತರಾಧಿಕಾರಿಗಳನ್ನು ಪರಿಗಣಿಸಲಾಗುತ್ತದೆ. […]

ವಿಶ್ವದ ಏಕೈಕ ‘ಓಂ’ ಆಕಾರದ ಶಿವ ದೇವಾಲಯ; ಇಲ್ಲಿದೆ 1,008 ಶಿವಲಿಂಗಗಳು

ದೇವಾಲಯಗಳ ವಾಸ್ತುಶಿಲ್ಪವೇ ಒಂದು ಅದ್ಭುತ. ‘ಓಂ ಆಶ್ರಮ’ ತನ್ನ ವಿಶಿಷ್ಟ ಆಕಾರದಿಂದಲೇ ಎಲ್ಲರ ಗಮನ ಸೆಳೆಯುತ್ತದೆ. ‘ಓಂ’ ಸಂಕೇತದ ಆಕಾರದಲ್ಲಿ ನಿರ್ಮಿಸಲಾದ ಭವ್ಯ ದೇವಾಲಯವು ಆಧ್ಯಾತ್ಮಿಕತೆ ಮತ್ತು ವಾಸ್ತುಶಿಲ್ಪದ ಅಪರೂಪದ ಸಂಗಮವಾಗಿದ್ದು, ರಾಜಸ್ಥಾನದ ಪಾಲಿ ಜಿಲ್ಲೆಯ ಜಾದನ್ ಗ್ರಾಮದಲ್ಲಿದೆ ಈ ದೇವಾಲಯ. ಸುಮಾರು 250 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ದೇವಾಲಯ ಸಂಕೀರ್ಣವು ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಸುಮಾರು 2,000 ಕಂಬಗಳ ಮೇಲೆ ನಿಂತಿರುವ ಮುಖ್ಯ ರಚನೆ ಸುಮಾರು 135 ಅಡಿ ಎತ್ತರ ಹೊಂದಿದೆ. 1,008 ಶಿವಲಿಂಗಗಳು, […]

ಚೆಕ್‌ನ ಹಿಂಭಾಗ ಸಹಿ ಹಾಕುವುದರ ಹಿಂದಿದೆ ಈ ಕಾರಣ! ತಿಳಿಯದೇ ಎಂದಿಗೂ ಸಹಿ ಹಾಕಬೇಡಿ

ಬ್ಯಾಂಕ್‌ ವ್ಯವಹಾರಗಳಲ್ಲಿ ಚೆಕ್‌ ಬಹಳ ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸುತ್ತಿದೆ. ಚೆಕ್‌ ಬರೆಯುವಾಗ ಮುಂಭಾಗದಲ್ಲಿ ಸಹಿ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೆಲವೊಮ್ಮೆ ಚೆಕ್‌ನ ಹಿಂಭಾಗದಲ್ಲೂ ಸಹಿ ಮಾಡಬೇಕಾಗುತ್ತದೆ. ಅಷ್ಟಕ್ಕೂ ಚೆಕ್‌ನ ಹಿಂಭಾಗದಲ್ಲಿ ಸಹಿ ಯಾಕೆ ಮಾಡಬೇಕು? ಅದರ ಉದ್ದೇಶ ಏನು? ಎಲ್ಲ ಚೆಕ್‌ಗಳಿಗೂ ಹಿಂಭಾಗದಲ್ಲಿ ಸಹಿ ಮಾಡಬೇಕೇ? ಎಂಬ ಪ್ರಶ್ನೆ ಹಲವರಲ್ಲಿದೆ. ಚೆಕ್‌ನ ಹಿಂಭಾಗದ ಸಹಿ ಎಂದರೇನು? ಚೆಕ್‌ನ ಹಿಂಭಾಗದಲ್ಲಿ ಮಾಡುವ ಸಹಿಯನ್ನು ಸಾಮಾನ್ಯವಾಗಿ ಎಂಡೋರ್ಸ್‌ಮೆಂಟ್‌ (Endorsement) ಎಂದು ಕರೆಯಲಾಗುತ್ತದೆ. ಚೆಕ್‌ ಅನ್ನು ಒಬ್ಬರಿಂದ […]

80ನೇ ಸ್ವಾತಂತ್ರ್ಯ ದಿನಾಚರಣೆ: ತ್ರಿರಂಗ ಧ್ವಜವನ್ನು ಗೌರವದಿಂದ ಮಡಚುವ ಮತ್ತು ಸಂಗ್ರಹಿಸಲು ಒಂದು ಕ್ರಮವಿದೆ ಗೊತ್ತೇ? ರಾಷ್ಟ್ರಧ್ವಜ ನಮ್ಮ ಗರಿಮೆ ಮತ್ತು ಗೌರವ

ಭಾರತವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಜ್ಜಾಗುತ್ತಿರುವಾಗ, ದೇಶದಾದ್ಯಂತ ಲಕ್ಷಾಂತರ ನಾಗರಿಕರು ‘ಹರ್ ಘರ್ ತ್ರಿರಂಗ’ ಅಭಿಯಾನದ ಅಡಿಯಲ್ಲಿ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಹಾರಿಸುತ್ತಿದ್ದಾರೆ. ಆದರೆ, ಸ್ವಾತಂತ್ರ್ಯ ದಿನದ ಆಚರಣೆ ಮುಗಿದ ನಂತರ ಧ್ವಜವನ್ನು ಸರಿಯಾದ ಗೌರವದೊಂದಿಗೆ ತೆರವುಗೊಳಿಸಿ, ಸುರಕ್ಷಿತವಾಗಿ ಮಡಚಿಡುವುದು ಸಹ ಅಷ್ಟೇ ಮುಖ್ಯವಾಗಿದೆ. ಸಂಸ್ಕೃತಿ ಸಚಿವಾಲಯ ಮತ್ತು ಭಾರತೀಯ ಧ್ವಜ ಸಂಹಿತೆ (Flag Code of India) ನೀಡಿರುವ ಮಾರ್ಗದರ್ಶನದಂತೆ, ರಾಷ್ಟ್ರಧ್ವಜವನ್ನು ಮಡಚಲು ಹಾಗೂ ಸಂಗ್ರಹಿಸಿಡಲು ಅನುಸರಿಸಬೇಕಾದ ಪೂರ್ಣ ವಿಧಾನ ಇಲ್ಲಿದೆ: […]

ನಮ್ಮ ದೇಶದ ಹೆಮ್ಮೆ, ನಮ್ಮ ತಿರಂಗಾ… ಹೇಗೆ ತಯಾರಾಗುತ್ತದೆ ಗೊತ್ತೇ?

ಭಾರತದ ರಾಷ್ಟ್ರಧ್ವಜವು ದೇಶದ ಗೌರವ, ಏಕತೆ ಮತ್ತು ಸ್ವಾತಂತ್ರ್ಯದ ಸಂಕೇತವಾಗಿದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ಮೂರು ಪಟ್ಟಿಗಳನ್ನು ಹೊಂದಿರುವ ನಮ್ಮ ತಿರಂಗಾದ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವಿದೆ. ಕೇಸರಿ ಧೈರ್ಯ ಮತ್ತು ತ್ಯಾಗವನ್ನು, ಬಿಳಿ ಶಾಂತಿ ಮತ್ತು ಸತ್ಯವನ್ನು ಹಾಗೂ ಹಸಿರು ಸಮೃದ್ಧಿ ಮತ್ತು ಪ್ರಕೃತಿಯನ್ನು ಪ್ರತಿನಿಧಿಸುತ್ತದೆ. ನಮ್ಮ ರಾಷ್ಟ್ರಧ್ವಜ ಎಲ್ಲಿ ತಯಾರಾಗುತ್ತದೆ? ರಾಷ್ಟ್ರಧ್ವಜ ತಯಾರಿಕೆಯಲ್ಲಿ ಕರ್ನಾಟಕಕ್ಕೂ ವಿಶೇಷ ಸ್ಥಾನವಿದೆ. ಹುಬ್ಬಳ್ಳಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಮತ್ತು ಧಾರವಾಡ ತಾಲ್ಲೂಕಿನ […]