ಮೋಡ ಹಿಡಿದನು ಹುಡುಗ: ರವೀಂದ್ರ ನಾಯ್ಕ್ ಕ್ಲಿಕ್ಕಿಸಿದ ಚಿತ್ರ

ರವೀಂದ್ರ ನಾಯ್ಕ್ ಮೂಲತಃ ಕಾರ್ಕಳದವರು. ಡಿಪ್ಲೋಮ ಇಂಜಿನಿಯರಿಂಗ್ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ಮುಗಿಸಿರುವ  ಇವರಿಗೆ, ಪರಿಸರ, ಜೀವನಶೈಲಿಯ ಭಿನ್ನ ಭಿನ್ನ ನೋಟಗಳನ್ನು ಸೆರೆಹಿಡಿಯೋದಂದ್ರೆ ಪಂಚಪ್ರಾಣ. ಮೋಡ ಹಿಡಿದಂತೆ ಕಾಣಿಸುವ ಹುಡುಗ, ತುಂಬಿದ ಕೆರೆಯ ಮಾದಕ ನೋಟ, ಹಗಲಿನಲ್ಲಿ ನಿದ್ದೆ ಹೊಡೆಯುವ ಬೆಕ್ಕು, ಮಳೆಗೆ ಮೂಡಿದ ಮುತ್ತಿನ ಹನಿ ಇತ್ಯಾದಿ ಚಿತ್ರಗಳೆಲ್ಲ ಇವರ ಕಣ್ಣಲ್ಲಿ ಸೆರೆಯಾಗಿದೆ. ಮೊಬೈಲ್ ಫೋಟೋಗ್ರಫಿಯನ್ನೇ ವಿಭಿನ್ನ ಶೈಲಿಯಲ್ಲಿ ಮಾಡುವ  ಇವರಿಗೆ ಪೂರ್ಣ ಪ್ರಮಾಣದಲ್ಲಿ ವೃತ್ತಿಪರ ಛಾಯಾಚಿತ್ರಕಾರನಾಗುವ ಕನಸು.

ಹುಲ್ಲಿಗೆ ಹನಿಮುತ್ತು : ಶಾಶ್ವತಿ ಕ್ಲಿಕ್ಕಿಸಿದ ಚಿತ್ರ

  ಶಾಶ್ವತಿ ಎಚ್ ಎಸ್  ಮಲೆನಾಡಿನ ಶೃಂಗೇರಿಯವರು. ಸಸ್ಯಶಾಸ್ತ್ರದಲ್ಲಿ ಎಂಎಸ್ಸಿ ಓದಿರುವ  ಇವರಿಗೆ ಫೋಟೋಗ್ರಫಿ ಇಷ್ಟದ ಹವ್ಯಾಸ. ಮುಂಜಾನೆ ಹುಲ್ಲಿನ ಮೇಲೆ ಬಿದ್ದ  ಇಬ್ಬನಿ, ಹೂವಿಗೆ ಮುತ್ತಿದ ದುಂಬಿ, ಅಲ್ಲೆಲ್ಲೋ ಬಲೆ ಹೆಣೆಯುತ್ತಿರುವ ಜೇಡ, ಹಾಡುವ ಹಕ್ಕಿ ಇವೆಲ್ಲ ಚಿತ್ರಗಳು ಇವರ ಕೆಮರಾದಲ್ಲಿ ಸೆರೆಯಾಗಿವೆ.

ಮುಗಿಲಿಗೂ ಸಿಕ್ಕದ ಹಕ್ಕಿ:ಶಿವಪ್ರಸಾದ್ ಹಳುವಳ್ಳಿ ಕ್ಲಿಕ್ಕಿಸಿದ ಚಿತ್ರ

ಶಿವಪ್ರಸಾದ್ ಹಳುವಳ್ಳಿ ಕಳಸದವರು.ಪ್ರಸ್ತುತ  ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ. ಚಿತ್ರಗಳಲ್ಲೇ ಅಪರೂಪದ ಕಲಾತ್ಮ”ಕತೆ”ಹುಟ್ಟಿಸುವ ಇವರ ಚಿತ್ರಗಳಲ್ಲಿ ನೆರಳು-ಬೆಳಕಿನ ಸಂಯೋಜನೆ ವಿಶಿಷ್ಟವಾಗಿರುತ್ತದೆ. ಪರಿಸರ ಚಿತ್ರಗಳು, ಪ್ರವಾಸ ಚಿತ್ರಗಳಲ್ಲಿ  ಸಿಕ್ಕ ಅಮೂರ್ತ ಕ್ಷಣಗಳು ಕಾಡುವಂತಿರುತ್ತದೆ.

ಎಲ್ಲಿಗೋ ಹೊರಟವರು: ಲಾವಣ್ಯ ಕ್ಲಿಕ್ಕಿಸಿದ ಚಿತ್ರ

 ಲಾವಣ್ಯ ಎನ್.ಕೆ ಚಿಕ್ಕಮಗಳೂರಿನ ಬಾಳಹೊನ್ನೂರಿನವರು. ಪ್ರಸ್ತುತ ಬೆಂಗಳೂರು ನಿವಾಸಿ. ಉಜಿರೆಯಲ್ಲಿ ಪದವಿ ಪೂರೈಸಿರುವ ಇವರಿಗೆ ಸ್ಟ್ರೀಟ್ ಫೋಟೋಗ್ರಫಿ, ಪರಿಸರ ಛಾಯಾಗ್ರಹಣ ಅಂದರೆ ವಿಪರೀತ ಪ್ರೀತಿ. ದಾರಿಯಲ್ಲಿ ಕಂಡ ಬೆರಗು ತುಂಬಿದ ಪುಟ್ಟ ಪುಟ್ಟ ಮಕ್ಕಳು, ಯಾವುದೋ ಬೀದಿಯಲ್ಲಿ ಸುಮ್ಮನೆ ಸೈಕಲೇರಿ ಪಯಣ ಹೊರಟ ಪೋರರು, ಎಲ್ಲೋ ಅರಳಿ ಹನಿ ತುಂಬಿಕೊಂಡ ಬಣ್ಣದ ಹೂವು, ಇವೆಲ್ಲಾ ಇವರ ಕಣ್ಣ ಕ್ಯಾಮರಾದಲ್ಲಿ ಕ್ಲಿಕ್ ಆದ ಚಿತ್ರಗಳು. ಸೈಕಲ್ ನಲ್ಲಿ ಡಬಲ್ ರೈಡ್ ಮಾಡಿ ಎಲ್ಲಿಗೋ ಹೊರಟ ಹುಡುಗರ ಚಿತ್ರವೊಂದು ಇಲ್ಲಿದೆ. […]

ಹಿರಿಯಡ್ಕ ಸಿರಿ ಜಾತ್ರೆಯ ಚೆಂದ ನೋಡಿದ್ದೀರಾ? :ಅಜಿತ್ ಕ್ಲಿಕ್ಕಿಸಿದ ಚಿತ್ರಗಳು

ಅಜಿತ್ ಹಿರಿಯಡ್ಕ ಉಡುಪಿ ಜಿಲ್ಲೆಯ ಹಿರಿಯಡ್ಕದವರು, ಪ್ರಸ್ತುತ  ಛಾಯಾಗ್ರಹಣ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುವ ಇವರು ಶಬರಿ ಎನ್ನುವ ಸ್ಟುಡಿಯೋ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ಹಿರಿಯಡ್ಕ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆದ ವಾರ್ಷಿಕ ರಥೋತ್ಸವ, ಸಿರಿಜಾತ್ರೆಯ ಕ್ಷಣಗಳನ್ನು ತಮ್ಮ ಕ್ಯಾಮರಾದಲ್ಲಿ ಚಿತ್ರವಾಗಿಸಿದ್ದಾರೆ.ಆ ಚಂದದ ಚಿತ್ರಗಳು ಇಲ್ಲಿವೆ.