ಎಲ್ಲಿಗೋ ಹೊರಟವರು: ಲಾವಣ್ಯ ಕ್ಲಿಕ್ಕಿಸಿದ ಚಿತ್ರ

 ಲಾವಣ್ಯ ಎನ್.ಕೆ ಚಿಕ್ಕಮಗಳೂರಿನ ಬಾಳಹೊನ್ನೂರಿನವರು. ಪ್ರಸ್ತುತ ಬೆಂಗಳೂರು ನಿವಾಸಿ. ಉಜಿರೆಯಲ್ಲಿ ಪದವಿ ಪೂರೈಸಿರುವ ಇವರಿಗೆ ಸ್ಟ್ರೀಟ್ ಫೋಟೋಗ್ರಫಿ, ಪರಿಸರ ಛಾಯಾಗ್ರಹಣ ಅಂದರೆ ವಿಪರೀತ ಪ್ರೀತಿ. ದಾರಿಯಲ್ಲಿ ಕಂಡ ಬೆರಗು ತುಂಬಿದ ಪುಟ್ಟ ಪುಟ್ಟ ಮಕ್ಕಳು, ಯಾವುದೋ ಬೀದಿಯಲ್ಲಿ ಸುಮ್ಮನೆ ಸೈಕಲೇರಿ ಪಯಣ ಹೊರಟ ಪೋರರು, ಎಲ್ಲೋ ಅರಳಿ ಹನಿ ತುಂಬಿಕೊಂಡ ಬಣ್ಣದ ಹೂವು, ಇವೆಲ್ಲಾ ಇವರ ಕಣ್ಣ ಕ್ಯಾಮರಾದಲ್ಲಿ ಕ್ಲಿಕ್ ಆದ ಚಿತ್ರಗಳು. ಸೈಕಲ್ ನಲ್ಲಿ ಡಬಲ್ ರೈಡ್ ಮಾಡಿ ಎಲ್ಲಿಗೋ ಹೊರಟ ಹುಡುಗರ ಚಿತ್ರವೊಂದು ಇಲ್ಲಿದೆ. ಬಾಲ್ಯವನ್ನು ಮತ್ತೆ ಮತ್ತೆ ನೆನಪು ಮಾಡೋ ಹುಮ್ಮಸ್ಸು ಈ ಚಿತ್ರಕ್ಕಿದೆ.