ಮನೆ ಮನೆ ಮುದ್ದು ಮನೆ: ಸಂದೀಪ್ ಚಿಪ್ಲೂಂಕರ್ ಕ್ಲಿಕ್ಕಿಸಿದ ಚಿತ್ರ

“ಮನೆ ಮನೆ ಮುದ್ದು ಮನೆಯ” ಸುಂದರ ಚಿತ್ರವನ್ನು ಸೆರೆಹಿಡಿದವರು ಸಂದೀಪ್ ಚಿಪ್ಲೂಂಕರ್ . ಕಾರ್ಕಳ ತಾಲೂಕಿನ ಮೂಡಾರು ಗ್ರಾಮದ ನಿವಾಸಿಯಾಗಿರುವ ಸಂದೀಪ್ ಡ್ರೈವಿಂಗ್ ವೃತ್ತಿನಿರತರು, ಯುವ ಕೃಷಿಕರು ಕೂಡ. ಫೋಟೋಗ್ರಫಿ ಹವ್ಯಾಸವೆಂದರೆ ಇವರಿಗಿಷ್ಟ. ಕಂಡದ್ದನ್ನು ಬೇರೆಯವರಿಗೂ ಕಾಡಿಸೋದು, ಚಾರಣ ಮಾಡೋದು ಇವರ ಇತರ ಹವ್ಯಾಸಗಳು. ಇವರ ಸಂಪರ್ಕ 9901769648 ♥ (ನೀವು ಕ್ಲಿಕ್ಕಿಸಿದ ಚೆಂದದ ಚಿತ್ರವನ್ನು ನಮಗೂ ಕಳಿಸಿ.ಜೊತೆಗೆ ನಿಮ್ಮ ಸ್ವ-ವಿವರ ಮತ್ತು ಭಾವಚಿತ್ರವಿರಲಿ. ಸೂಕ್ತವೆನ್ನಿಸುವ ಚಿತ್ರಗಳನ್ನು ZOOM ಇನ್ ವಿಭಾಗದಲ್ಲಿ ಪ್ರಕಟಿಸುತ್ತೇವೆ.ನಮ್ಮ ವಾಟ್ಸಾಪ್: 7483419099  ಇಮೇಲ್:newsudupixpress@gmail.com)

ಮಿಂಚಿನ ಓಟ: ಸುಗುಣೇಂದ್ರ ಹೆಗಡೆ ಕ್ಲಿಕ್ಕಿಸಿದ ಚಿತ್ರ

ಸುಗುಣೇಂದ್ರ ಹೆಗಡೆ ಮೂಲತಃ ಬೆಳ್ತಂಗಡಿಯವರು ವೃತ್ತಿಯಲ್ಲಿ ಪರಿಣತ ಛಾಯಾಗ್ರಾಹಕರು. ವೃತ್ತಿಪರ ಛಾಯಾಚಿತ್ರಗಳ ಜೊತೆಜೊತೆಗೆ ಪರಿಸರದ ವಿವಿಧ ಭಂಗಿಗಳನ್ನು ಸೆರೆಯಾಗಿಸುವ ಇವರ ಚಿತ್ರಗಳು ಕಾಡುವಂತಿದೆ.ಆಕ್ಷನ್ ಚಿತ್ರಗಳು ಕೂಡ ಸೊಗಸಾಗಿದೆ.ಇಲ್ಲಿ ಅವರು ಕ್ಲಿಕ್ಕಿಸಿದ ಬೈಕ್ ಓಟದ ಚಿತ್ರವೊಂದಿದೆ.ಸುಗುಣೇಂದ್ರ ಬೆಳ್ತಂಗಡಿ ಸಂಪರ್ಕ:9535227051 (ನೀವು ಕ್ಲಿಕ್ಕಿಸಿದ ಕ್ರಿಯಾಶೀಲ ಚಿತ್ರಗಳನ್ನು ನಿಮ್ಮ ಸ್ವ-ವಿವರಗಳ ಜೊತೆ ಉಡುಪಿxpress  ಗೆ ಕಳುಹಿಸಿ. ಸೂಕ್ತವೆನ್ನಿಸಿದ್ದನ್ನು ZOOM IN ವಿಭಾಗದಲ್ಲಿ ಪ್ರಕಟಿಸುತ್ತೇವೆ  whatsapp:7483419099)

ಉಡುಪಿ ಜಿಲ್ಲೆಯಲ್ಲಿ ಕಂಡ ಸೂರ್ಯಗ್ರಹಣದ ಅದ್ಬುತ ಚಿತ್ರಗಳು ಇಲ್ಲಿದೆ ನೋಡಿ

ಉಡುಪಿ:  ಹಿರಿಯಡ್ಕ ದಲ್ಲಿ ಕಂಡು ಬಂದ ಕಂಕಣ ಸೂರ್ಯ ಗ್ರಹಣದ ವಿವಿಧ ದೃಶ್ಯಾವಳಿಗಳು ಹಿರಿಯಡ್ಕದ ಶಬರಿ ಸ್ಟುಡಿಯೋದ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೊಂದಷ್ಟು ಕ್ಷಣಗಳನ್ನು ಅರುಣ್ ಫೋಟೋ ಪಿಕ್ ಸೆರೆ ಹಿಡಿದಿದ್ದಾರೆ.ಇಬ್ಬರೂ ಸೆರೆ ಹಿಡಿದ ದೃಶ್ಯಗಳು ಇಲ್ಲಿವೆ.

ಜೋಳಕ್ಕೂ ಬಣ್ಣ ಹಚ್ಚಿದವರು: ಪ್ರತಾಪ್ ಶೆಟ್ಟಿ ಕ್ಲಿಕ್ಕಿಸಿದ ಚಿತ್ರ

ಪ್ರತಾಪ್ ಶೆಟ್ಟಿ ಬೈಲೂರು, ಕಾರ್ಕಳ ಬೈಲೂರಿನ ನೀರೆ ಗ್ರಾಮದವರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕ ಇಲ್ಲಿ ಕಾಲೇಜು ಶಿಕ್ಷಣ ಪೂರೈಸಿದ ಇವರಿಗೆ ನೃತ್ಯ, ನಟನೆ, ಸಂಗೀತ ಅಂದರೆ  ಆಸಕ್ತಿ.  ಶಾರ್ಟ್ ಮೂವಿಯಲ್ಲಿಯೂ ಅಭಿನಯಿಸಿದ್ದಾರೆ.  ಸಮಯಸಿಕ್ಕಾಗ ಕ್ಯಾಮರಾ ಹಿಡಿದು ಫೋಟೋ ಕ್ಲಿಕ್ಕಿಸುತ್ತಾರೆ. ಇವರ ಚಿತ್ರಗಳಲ್ಲಿ ಉಡುಪಿಯ ಸಂಸ್ಕೃತಿ, ಜನ ಜೀವನ, ಸಾಂಪ್ರಾದಾಯಿಕ ಹುಲಿವೇಷಗಳೆಲ್ಲಾ ವಿಶೇಷವಾಗಿ ಕ್ಲಿಕ್ಕಾಗಿವೆ.  

ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮಹೇಶ್ ದೇವಾಡಿಗ ಕ್ಲಿಕ್ಕಿಸಿದ ಸ್ಪೆಷಲ್ ಚಿತ್ರ

ಮಹೇಶ್ ದೇವಾಡಿಗ ಉಡುಪಿ ಜಿಲ್ಲೆಯ ಅಡ್ವೆ ನಿವಾಸಿ. ಪ್ರಸ್ತುತ ಕಾಂಜರ ಕಟ್ಟೆಯಲ್ಲಿ “ಸ್ಮೈಲ್ ಫೋಟೋಗ್ರಫಿ”ಎನ್ನುವ ಸ್ಟುಡಿಯೋ ನಡೆಸಿ, ವೃತ್ತಿಪರ ಛಾಯಾಗ್ರಹಣದಲ್ಲಿ ತೊಡಗಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮೂಡೆ ಎನ್ನುವ ವಿಶೇಷ ಖಾದ್ಯ ಮಾಡುತ್ತಾರೆ. ಮೂಡೆ ಮಾಡಲು ಎಲೆಗಳನ್ನು  ವಿಶೇಷವಾಗಿ ಹೆಣೆದು ಅದರಲ್ಲಿ ಹಿಟ್ಟು ಮಾಡಿ ಬೇಯಿಸಿ ದೇವರಿಗೆ ನೈವೇದ್ಯಯಿಡುವ  ಸಂಪ್ರದಾಯ ಗ್ರಾಮೀಣ ಭಾಗದಲ್ಲಿ ಈಗಲೂ ಚಾಲ್ತಿಯಲ್ಲಿದೆ ಈ ಚಂದದ ದೃಶ್ಯವನ್ನು ಮಹೇಶ್ ಸೆರೆ ಹಿಡಿದಿದ್ದಾರೆ. ಮಹೇಶ್ ದೇವಾಡಿಗ:9844674895