ಹಿರಿಯಡ್ಕ ಸಿರಿ ಜಾತ್ರೆಯ ಚೆಂದ ನೋಡಿದ್ದೀರಾ? :ಅಜಿತ್ ಕ್ಲಿಕ್ಕಿಸಿದ ಚಿತ್ರಗಳು

ಅಜಿತ್ ಹಿರಿಯಡ್ಕ ಉಡುಪಿ ಜಿಲ್ಲೆಯ ಹಿರಿಯಡ್ಕದವರು, ಪ್ರಸ್ತುತ  ಛಾಯಾಗ್ರಹಣ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುವ ಇವರು ಶಬರಿ ಎನ್ನುವ ಸ್ಟುಡಿಯೋ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ಹಿರಿಯಡ್ಕ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆದ ವಾರ್ಷಿಕ ರಥೋತ್ಸವ, ಸಿರಿಜಾತ್ರೆಯ ಕ್ಷಣಗಳನ್ನು ತಮ್ಮ ಕ್ಯಾಮರಾದಲ್ಲಿ ಚಿತ್ರವಾಗಿಸಿದ್ದಾರೆ.ಆ ಚಂದದ ಚಿತ್ರಗಳು ಇಲ್ಲಿವೆ.

ಬಾಲೆ ಮುಡಿದ ದಾಸವಾಳ: ಗುರುಗಣೇಶ್ ಕ್ಲಿಕ್ಕಿಸಿದ ಚಿತ್ರ

 ಯಲ್ಲಾಪುರದ ಡಬ್ಗುಳಿ, ಗುರುಗಣೇಶ್ ಭಟ್ ಅವರ ಹುಟ್ಟೂರು, ಪ್ರಸ್ತುತ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ  ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ. ಆಗಾಗ ಚಂದ ಚಂದದ ಕತೆ ಹೇಳುವ ಚಿತ್ರಗಳನ್ನು  ಕ್ಲಿಕ್ಕಿಸುವುದು, ಕ್ಲಿಕ್ಕಿಸಲೆಂದೇ ಕಾಡು, ಊರು ಸುತ್ತೋದು ಇವರ ಪ್ರೀತಿಯ ಹವ್ಯಾಸ. ಗ್ರಾಮೀಣ ಭಾಗದ ಕಾಡುಗಳಲ್ಲಿನ ಜನರ ಮುಗ್ದತೆ ಇವರ ಚಿತ್ರದ ಹಿಂದಿರುವ ದೊಡ್ಡ ಶಕ್ತಿ. 

ಈ ಪರಿಯ ಸೊಬಗು :ಪ್ರಶಾಂತ್ ನಾಯಕ್ ಕ್ಲಿಕ್ಕಿಸಿದ ಚಿತ್ರ

ಪ್ರಶಾಂತ್ ನಾಯಕ್ ಕಿಲಾರ್ ಕಜೆ ಸುಳ್ಯದವರು. ಪ್ರಸ್ತುತ ಎಂ.ಆರ್.ಪಿ.ಎಲ್ ನಲ್ಲಿ ಹುದ್ದೆಯಲ್ಲಿರುವ ಇವರು ಸುರತ್ಕಲ್ ನಿವಾಸಿ. ಆಗಾಗ  ಚಂದ ಚಂದ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಇವರಿಗೆ ಛಾಯಗ್ರಹಣವೊಂದು ಹವ್ಯಾಸ. ಇತ್ತೀಚೆಗೆ ಸಾಲಿಗ್ರಾಮದ ಮೇಳದ ಆಟಕ್ಕೆ ಹೋದಾಗ ಪ್ರೀತಿಯಿಂದ ಅವರು  ಕ್ಲಿಕ್ಕಿಸಿದ ಈ ಚಿತ್ರ, ಕರಾವಳಿಯ ಯಕ್ಷಗಾನದ ಸೊಗಡನ್ನು, ಸೊಗಸನ್ನು ಸಾರುತ್ತಿದೆ.

ಬೆಂಕಿ ಉಗುಳೋದಂದ್ರೆ ಹೀಗೆ:ಅಭಿನಂದನ್ ಜೈನ್ ಕ್ಲಿಕ್ಕಿಸಿದ ಚಿತ್ರ

ಅಭಿನಂದನ್ ಜೈನ್ ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ.ಛಾಯಾಗ್ರಹಣ ಅಂದ್ರೆ ಇವರಿಗೆ ವಿಪರೀತ ಕ್ರೇಝ್. ಪ್ರವಾಸ ಮಾಡುವ ಸಂದರ್ಭದಲ್ಲಿ ಕಾಣಸಿಗುವ ದೇಶಿ ಸೊಗಡು, ಪ್ರಕೃತಿ ಬೆಡಗು, ಜೀವನ ಶೈಲಿ,ಮನುಷ್ಯನ ದಿನಚರಿಯ ವಿವಿಧ ನೋಟಗಳು ಇವರ ಚಿತ್ರಗಳಲ್ಲಿ ಗಮನಸೆಳೆಯುವ ಅಂಶಗಳು