ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮಹೇಶ್ ದೇವಾಡಿಗ ಕ್ಲಿಕ್ಕಿಸಿದ ಸ್ಪೆಷಲ್ ಚಿತ್ರ
ಮಹೇಶ್ ದೇವಾಡಿಗ ಉಡುಪಿ ಜಿಲ್ಲೆಯ ಅಡ್ವೆ ನಿವಾಸಿ. ಪ್ರಸ್ತುತ ಕಾಂಜರ ಕಟ್ಟೆಯಲ್ಲಿ “ಸ್ಮೈಲ್ ಫೋಟೋಗ್ರಫಿ”ಎನ್ನುವ ಸ್ಟುಡಿಯೋ ನಡೆಸಿ, ವೃತ್ತಿಪರ ಛಾಯಾಗ್ರಹಣದಲ್ಲಿ ತೊಡಗಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಮೂಡೆ ಎನ್ನುವ ವಿಶೇಷ ಖಾದ್ಯ ಮಾಡುತ್ತಾರೆ. ಮೂಡೆ ಮಾಡಲು ಎಲೆಗಳನ್ನು ವಿಶೇಷವಾಗಿ ಹೆಣೆದು ಅದರಲ್ಲಿ ಹಿಟ್ಟು ಮಾಡಿ ಬೇಯಿಸಿ ದೇವರಿಗೆ ನೈವೇದ್ಯಯಿಡುವ ಸಂಪ್ರದಾಯ ಗ್ರಾಮೀಣ ಭಾಗದಲ್ಲಿ ಈಗಲೂ ಚಾಲ್ತಿಯಲ್ಲಿದೆ ಈ ಚಂದದ ದೃಶ್ಯವನ್ನು ಮಹೇಶ್ ಸೆರೆ ಹಿಡಿದಿದ್ದಾರೆ. ಮಹೇಶ್ ದೇವಾಡಿಗ:9844674895
ಮೋಡ ಹಿಡಿದನು ಹುಡುಗ: ರವೀಂದ್ರ ನಾಯ್ಕ್ ಕ್ಲಿಕ್ಕಿಸಿದ ಚಿತ್ರ
ರವೀಂದ್ರ ನಾಯ್ಕ್ ಮೂಲತಃ ಕಾರ್ಕಳದವರು. ಡಿಪ್ಲೋಮ ಇಂಜಿನಿಯರಿಂಗ್ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ಮುಗಿಸಿರುವ ಇವರಿಗೆ, ಪರಿಸರ, ಜೀವನಶೈಲಿಯ ಭಿನ್ನ ಭಿನ್ನ ನೋಟಗಳನ್ನು ಸೆರೆಹಿಡಿಯೋದಂದ್ರೆ ಪಂಚಪ್ರಾಣ. ಮೋಡ ಹಿಡಿದಂತೆ ಕಾಣಿಸುವ ಹುಡುಗ, ತುಂಬಿದ ಕೆರೆಯ ಮಾದಕ ನೋಟ, ಹಗಲಿನಲ್ಲಿ ನಿದ್ದೆ ಹೊಡೆಯುವ ಬೆಕ್ಕು, ಮಳೆಗೆ ಮೂಡಿದ ಮುತ್ತಿನ ಹನಿ ಇತ್ಯಾದಿ ಚಿತ್ರಗಳೆಲ್ಲ ಇವರ ಕಣ್ಣಲ್ಲಿ ಸೆರೆಯಾಗಿದೆ. ಮೊಬೈಲ್ ಫೋಟೋಗ್ರಫಿಯನ್ನೇ ವಿಭಿನ್ನ ಶೈಲಿಯಲ್ಲಿ ಮಾಡುವ ಇವರಿಗೆ ಪೂರ್ಣ ಪ್ರಮಾಣದಲ್ಲಿ ವೃತ್ತಿಪರ ಛಾಯಾಚಿತ್ರಕಾರನಾಗುವ ಕನಸು.
ಹುಲ್ಲಿಗೆ ಹನಿಮುತ್ತು : ಶಾಶ್ವತಿ ಕ್ಲಿಕ್ಕಿಸಿದ ಚಿತ್ರ
ಶಾಶ್ವತಿ ಎಚ್ ಎಸ್ ಮಲೆನಾಡಿನ ಶೃಂಗೇರಿಯವರು. ಸಸ್ಯಶಾಸ್ತ್ರದಲ್ಲಿ ಎಂಎಸ್ಸಿ ಓದಿರುವ ಇವರಿಗೆ ಫೋಟೋಗ್ರಫಿ ಇಷ್ಟದ ಹವ್ಯಾಸ. ಮುಂಜಾನೆ ಹುಲ್ಲಿನ ಮೇಲೆ ಬಿದ್ದ ಇಬ್ಬನಿ, ಹೂವಿಗೆ ಮುತ್ತಿದ ದುಂಬಿ, ಅಲ್ಲೆಲ್ಲೋ ಬಲೆ ಹೆಣೆಯುತ್ತಿರುವ ಜೇಡ, ಹಾಡುವ ಹಕ್ಕಿ ಇವೆಲ್ಲ ಚಿತ್ರಗಳು ಇವರ ಕೆಮರಾದಲ್ಲಿ ಸೆರೆಯಾಗಿವೆ.
ಮುಗಿಲಿಗೂ ಸಿಕ್ಕದ ಹಕ್ಕಿ:ಶಿವಪ್ರಸಾದ್ ಹಳುವಳ್ಳಿ ಕ್ಲಿಕ್ಕಿಸಿದ ಚಿತ್ರ
ಶಿವಪ್ರಸಾದ್ ಹಳುವಳ್ಳಿ ಕಳಸದವರು.ಪ್ರಸ್ತುತ ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ. ಚಿತ್ರಗಳಲ್ಲೇ ಅಪರೂಪದ ಕಲಾತ್ಮ”ಕತೆ”ಹುಟ್ಟಿಸುವ ಇವರ ಚಿತ್ರಗಳಲ್ಲಿ ನೆರಳು-ಬೆಳಕಿನ ಸಂಯೋಜನೆ ವಿಶಿಷ್ಟವಾಗಿರುತ್ತದೆ. ಪರಿಸರ ಚಿತ್ರಗಳು, ಪ್ರವಾಸ ಚಿತ್ರಗಳಲ್ಲಿ ಸಿಕ್ಕ ಅಮೂರ್ತ ಕ್ಷಣಗಳು ಕಾಡುವಂತಿರುತ್ತದೆ.
ಎಲ್ಲಿಗೋ ಹೊರಟವರು: ಲಾವಣ್ಯ ಕ್ಲಿಕ್ಕಿಸಿದ ಚಿತ್ರ
ಲಾವಣ್ಯ ಎನ್.ಕೆ ಚಿಕ್ಕಮಗಳೂರಿನ ಬಾಳಹೊನ್ನೂರಿನವರು. ಪ್ರಸ್ತುತ ಬೆಂಗಳೂರು ನಿವಾಸಿ. ಉಜಿರೆಯಲ್ಲಿ ಪದವಿ ಪೂರೈಸಿರುವ ಇವರಿಗೆ ಸ್ಟ್ರೀಟ್ ಫೋಟೋಗ್ರಫಿ, ಪರಿಸರ ಛಾಯಾಗ್ರಹಣ ಅಂದರೆ ವಿಪರೀತ ಪ್ರೀತಿ. ದಾರಿಯಲ್ಲಿ ಕಂಡ ಬೆರಗು ತುಂಬಿದ ಪುಟ್ಟ ಪುಟ್ಟ ಮಕ್ಕಳು, ಯಾವುದೋ ಬೀದಿಯಲ್ಲಿ ಸುಮ್ಮನೆ ಸೈಕಲೇರಿ ಪಯಣ ಹೊರಟ ಪೋರರು, ಎಲ್ಲೋ ಅರಳಿ ಹನಿ ತುಂಬಿಕೊಂಡ ಬಣ್ಣದ ಹೂವು, ಇವೆಲ್ಲಾ ಇವರ ಕಣ್ಣ ಕ್ಯಾಮರಾದಲ್ಲಿ ಕ್ಲಿಕ್ ಆದ ಚಿತ್ರಗಳು. ಸೈಕಲ್ ನಲ್ಲಿ ಡಬಲ್ ರೈಡ್ ಮಾಡಿ ಎಲ್ಲಿಗೋ ಹೊರಟ ಹುಡುಗರ ಚಿತ್ರವೊಂದು ಇಲ್ಲಿದೆ. […]