ಥಿಯೇಟರ್ ನ ಕತ್ತಲಲ್ಲಿ ಅವನ ಸ್ಪರ್ಶಕ್ಕೆ ಅವಳು ಹಸಿಬಿಸಿಯಾದಳು: ಹುಡುಗಿಯೊಬ್ಬಳು ಕಂಡ “ರಸ”ಮಯ ದೃಶ್ಯ

ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಅಭಿನಯದ ರಾಮ್‌ಲೀಲಾ ಬಿಡುಗಡೆಗೊಂಡು ಸಾಕಷ್ಟು ಸುದ್ದಿ ಮಾಡಿತ್ತು. ಟ್ರೈಲರ್ ಅದಾಗಲೇ ನೋಡಿದ್ದೆ. ನಮ್ಮೂರಿನ ಥಿಯೇಟರ್‌ಗೆ ಆ ಸಿನಿಮಾ ಬಂದಿತ್ತು.  ಮನಸ್ಸೆಲ್ಲಾ ಹರೆಯ ಕವಿದ ಹೊತ್ತದು. ಸಿನಿಮಾದಲ್ಲಿ ಬರುವ ಪ್ರೀತಿಯ ದೃಶ್ಯಕ್ಕೆ ಮನಸ್ಸು ಜಿಗಿದಾಡುವ ಹೊತ್ತದು, ನಾನು ಮತ್ತು ನನ್ನ ಗೆಳೆಯ ಸೇರಿಕೊಂಡು ರಾಮ್‌ಲೀಲಾ ಸಿನಿಮಾಗೆ ಹೋದೆವು. ನಾವಿಷ್ಟ ಪಟ್ಟ ಸಿನಿಮಾ ಪ್ರಾರಂಭವಾಯಿತು.

ಥಿಯೇಟರ್ ಇಡೀ ಖಾಲಿ ಖಾಲಿ. ಮುಂದಿನ ಸಾಲಿನಲ್ಲಿ ಮೂರು ಜನ ಕಾಲೇಜು ಹುಡುಗರು ಇದ್ರು. ಅದೇ ಸಾಲಿನ ಅಂಚಿನಲ್ಲಿ ಇಬ್ಬರು ಯುವತಿಯರು ಕುಳಿತಿದ್ದರು. ಮೇಲ್ನೋಟಕ್ಕೆ ಪ್ರೇಮಿಗಳಂತೆ ಕಾಣುತ್ತಿದ್ದ ಜೋಡಿಹಕ್ಕಿಗಳು ಮೇಲಿನ ಸಾಲಿನ ಮೂಲೆಯಲ್ಲಿ ಕುಳಿತಿದ್ದರು. ನಾವಿಬ್ಬರು ಕೆಳಸಾಲಿನಲ್ಲಿ ಕುಳಿತುಕೊಂಡು ಸಿನಿಮಾ ಸಿನಿಮಾದೊಳಗೆ ತೇಲಿಬಿಟ್ಟೆವು.

ಒಂದಷ್ಟು ಹಸಿಬಿಸಿ ದೃಶ್ಯಗಳು ಬರುತ್ತಿದ್ದಾಗ ಕಣ್ಣು ಮಿಟುಕಿಸದೇ ಸಿನಿಮಾ ಪರದೆಯನ್ನೇ ದಿಟ್ಟಿಸಿ ನೋಡುತ್ತಿದ್ದೆವು.  ಆ ದೃಶ್ಯಕ್ಕೆ ಮೈಯೆಲ್ಲ ರೋಮಾಂಚನವಾಗುತ್ತಿತ್ತು.  ಒಂದೆರಡು ಹಾಡುಗಳು ಬಂದು ಹೋಯಿತು. ಥಿಯೇಟರ್ ಇಡೀ ಕತ್ತಲಲ್ಲಿ ತೂಗುತ್ತಿದ್ದರೂ, ಸಿನಿಮಾ ಸ್ಕ್ರೀನ್  ನಲ್ಲಿ ಕೆಲವೊಮ್ಮೆ ಜಿಗ್ ಅಂತ ಹೊಳಪಾದಾಗ ಸಿನಿಮಾ ಮಂದಿರದ ಖಾಲಿ ಸೀಟುಗಳು, ಒಂದೆರಡು ಮುಖಗಳು ಕಾಣಿಸಿ ಕನಸಂತೆ ಮರೆಯಾಗುತ್ತಿದ್ದವು.

ಒಂದು ಸಲ ನನ್ನ ದೃಷಿಯನ್ನ್ಟು ಮೇಲಿನ ಸಾಲಿನ ಮೂಲೆಗೆ ಹರಿಸಿದೆ. ಅಲ್ಲಿ ನಡೆಯುತ್ತಿದ್ದ ದೃಶ್ಯವನ್ನು ನೋಡಿ ನಾನು ದಂಗಾಗಿ ಹೋದೆ. ಒಂದು ಕ್ಷಣ ನಂಬಲು ಆಗಲಿಲ್ಲ. ನನ್ನ ಗೆಳೆಯನನ್ನು ಮೆಲ್ಲಗೆ ಸ್ಪರ್ಶಿಸಿ ಅತ್ತ ಕಡೆ ನೋಡು ಎಂದೆ. ಅವನೂ ಕೂಡ ತಟಸ್ಥನಾಗಿ ನೋಡಲು ಪ್ರಾರಂಭಿಸಿದ. ಅಲ್ಲಿ ಯಾವುದರ ಅರಿವೆಯೇ ಇಲ್ಲವೆಂಬಂತೆ ಜೋಡಿಹಕ್ಕಿಗಳು ಪ್ರಣಯ ಲೋಕದಲ್ಲಿ ವಿಹರಿಸುತ್ತಿದ್ದರು. ಇಬ್ಬರೂ ತಬ್ಬಿಕೊಂಡು ಮುತ್ತಿನ ಸುರಿಮಳೆಗೈಯುತ್ತಿದ್ದರು. ಅವನ ಹಸ್ತವು ಆಕೆಯ ಎದೆಯ ಮೇಲೆ ಚಿತ್ತಾರವ ಬರೆಯುತ್ತಿತ್ತು.  ಕೊನೆಗೆ ಇಬ್ಬರ ಮೈ ಯೂ ರೋಮಾಂಚಕವಾಗುತ್ತಿತ್ತೇನೋ, ಮೊಬೈಲ್‌ನಲ್ಲಿ ಹಸಿಬಿಸಿ ದೃಶ್ಯಗಳನ್ನು ನೋಡಿದ್ದ ನಾವು, ಕಣ್ಣಾರೆ ಈ ರೊಮ್ಯಾಂಟಿಕ್ ದೃಶ್ಯಗಳನ್ನು ಕಂಡು ದಿಗ್ಬ್ರಾಂತರಾದೆವು, ಪುಳಕರಾದೆವು.

ಇನ್ನೇನು ಅವಳ ಕೈಗಳು ಅವನ ಶರ್ಟಿನ ಕೆಳಕ್ಕೆ ಇಳಿಯುತ್ತಿದ್ದಂತೆ  ಸಿನಿಮಾ ಮಗಿಯಿತು. ಅಷ್ಟೊತ್ತು ಮುತ್ತಿನರಮನೆಯಲ್ಲಿ ಕಳೆದುಹೋಗಿದ್ದ, ಸ್ಪರ್ಶಸುಖದಲ್ಲಿಯೇ ಸುಖಿಸುತ್ತಿದ್ದ, ಅವಳ ಎದೆ ಅನ್ನೋ ಚಂದ್ರಬಿಂಬವನ್ನು ನೋಡಿ ಹೊಳಪಾಗಿದ್ದ, ದೇಹದೊಳಗೆಲ್ಲಾ ಚೈತನ್ಯದ ರಸ ತುಂಬಿಕೊಂಡಿದ್ದ ಆ ಪ್ರೇಮಿಗಳು ಕೂಡಲೇ ಬಾಹುಬಂಧನದಿಂದ ಬಿಡುಗಡೆಗೊಂಡು ಜಾರಿದ್ದ ಬಟ್ಟೆಯನ್ನು ಸರಿಪಡಿಸಿಕೊಂಡರು. ನಾವಿಬ್ಬರು ತುಟಿಪಿಟಕ್ ಎನ್ನದೇ ಅವರನ್ನೊಮ್ಮೆ ನೋಡುತ್ತ ಥಿಯೇಟರ್ ನಿಂದ ಹೊರಬಂದೆವು. ಇವೆಲ್ಲಾ ಹರೆಯದ ಮುಖಗಳು,ಅವರ ದೇಹ, ಅವರ ಸುಖ, ಯಾವುದು ತಪ್ಪು ಯಾವುದು ಸರಿ ಎನ್ನುವುದನ್ನು ನಿರ್ಧರಿಸಬೇಕಾದದ್ದು ಅವರೇ, ಆ ಸ್ಪರ್ಶ ಸುಖಗಳು ಅವರ ಪ್ರೀತಿಯನ್ನು ಬೆಚ್ಚಗಿಡಲಿ ಎಂದು ನಾವು ಹಾರೈಸಿ ಸುಮ್ಮನಾದೆವು.

-ಪ್ರಿಯಕಾರಿಣಿ