ಉತ್ತರ ಪ್ರದೇಶದಲ್ಲಿ ಧಾರಾಕಾರ ಮಳೆಯ ಅಬ್ಬರಕ್ಕೆ 56 ಮಂದಿ ಸಾವು

ಲಕ್ನೋ: ಉತ್ತರ ಪ್ರದೇಶದಲ್ಲಿ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸೆ.25ರಿಂದ 27ರವರೆಗೆ ಮಳೆ ಸಂಬಂಧಿತ ಘಟನೆಗಳಲ್ಲಿ 56 ಮಂದಿ ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಸಿತಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು 7 ಮಂದಿ ಮೃತಪಟ್ಟಿದ್ದಾರೆ. ಲಖಿಮ್‌ಪುರ ಖೇರಿ, ಬಹ್ರೈಚ್ ಮತ್ತು ಬಲರಾಮಪುರದಲ್ಲಿ ತಲಾ 5 ಮಂದಿ, ಅಯೋಧ್ಯೆ ಮತ್ತು ಗೋರಖ್‌ಪುರದಲ್ಲಿ ತಲಾ 4 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, […]
ಗಾನಕೋಗಿಲೆ ಲತಾ ಮಂಗೇಡ್ಕರ್ ಜನ್ಮದಿನ: ಪ್ರಧಾನಿ ಮೋದಿ ಭಾವಪೂರ್ಣ ನಮನ

ನವದೆಹಲಿ: ಭಾರತೀಯ ಚಿತ್ರರಂಗದ ದಂತಕಥೆ, ಭಾರತ ರತ್ನ ಪುರಸ್ಕೃತೆ ದಿವಂಗತ ಲತಾ ಮಂಗೇಡ್ಕರ್ ಅವರ ಜನ್ಮದಿನ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅದ್ಭುತ ಗಾಯಕಿಗೆ ಹೃತ್ತೂರ್ವಕ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಭಾರತೀಯ ಸಂಗೀತ ಕ್ಷೇತ್ರಕ್ಕೆ ಲತಾ ದೀದಿ ನೀಡಿದ ಅಪಾರ ಕೊಡುಗೆಯು ಮುಂಬರುವ ಪೀಳಿಗೆಗೂ ಎಂದಿಗೂ ಅಮರವಾಗಿರುತ್ತದೆ ಎಂದು ಪ್ರಧಾನಿ ಸ್ಮರಿಸಿದ್ದಾರೆ.ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ದಿವ್ಯ ಗಾಯನ ಶಕ್ತಿಯಿಂದ ದೇಶದ ಹೆಸರನ್ನು ಜಗತ್ತಿನಾದ್ಯಂತ ಬೆಳಗಿಸಿದ ಪೂಜನೀಯ ಲತಾ […]
ಶ್ರೀ ಬ್ರಹ್ಮಲಿಂಗೇಶ್ವರ ಆದಿ ಆಲಡೆ ಪಾಂಗಾಳ ಮಂಡೇಡಿ ಇನ್ನಂಜೆ ಇದರ ಬ್ರಹ್ಮ ಕಲಶೋತ್ಸವ

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ರತ್ನಾಕರ್ ಶೆಟ್ಟಿ ವಸಾಯಿ, ಗೌರವದ್ಯಕ್ಸರಾಗಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಆಯ್ಕೆ ಕಾಪು, ಸೆ.22- ಕಾಪು ಇನ್ನಂಜೆ ಗ್ರಾಮದ ಪಾಂಗಾಳ ಮಂಡೇಡಿ ಶ್ರೀ ಬ್ರಹ್ಮಲಿಂಗೇಶ್ವರ ಆದಿ ಆಲಡೆ ಬ್ರಹ್ಮಕಲಶೋತ್ಸವ ಹಾಗೂ ಸಾನಿಧ್ಯ ಜೀರ್ಣೋದ್ಧಾರ ನಿಮಿತ್ತ ಪಾಂಗಲಣ್ಣ ಬಂಟ ಕುಟುಂಬದವರೆಲ್ಲರೂ ಸೇರಿ ಸಂಕಲ್ಪಿಸಿರುವುದು, ಬ್ರಹ್ಮ ಕಲಶ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ್ […]
ಅಕ್ಟೋಬರ್ 1 ರಿಂದ ದೇಶದಲ್ಲಾಗುವ ಪ್ರಮುಖ ಬದಲಾವಣೆಗಳಿವು: ಏನೆಲ್ಲಾ ಬದಲಾವಣೆ, ಜನಸಾಮಾನ್ಯನ ಜೇಬಿನ ಮೇಲೆ ಪರಿಣಾಮ!

ಅ.1 ರಿಂದ ಹೊಸ ಬದಲಾವಣೆ ದೇಶದಲ್ಲಾಗಲಿದೆ. ಹೆಚ್ಚಿನ ಬದಲಾವಣೆಗಳಿಂದ ಅಂತಿಮವಾಗಿ ಹೊರೆ ಜನಸಾಮಾನ್ಯರ ಮೇಲೆಯೇ ಬೀಳುತ್ತದೆ. ಜನಸಾಮಾನ್ಯ ದೈನಂದಿನ ಸಮಯ ಮಾತ್ರವಲ್ಲ, ಜನಸಾಮಾನ್ಯನ ಜೇಬಿನ ಮೇಲೆಯೂ ನೇರ ಪರಿಣಾಮ ಬೀರುವ ಹೊಸ ಬದಲಾವಣೆಗಳು ಯಾವುದು?ಇಲ್ಲಿದೆ ಮಾಹಿತಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಮತ್ತು ಸಬ್ಸಿಡಿ ಪರಿಷ್ಕರಣೆ ಪ್ರತಿ ತಿಂಗಳ ಮೊದಲ ದಿನದಂತೆ ಅಕ್ಟೋಬರ್ 1ರಂದು ತೈಲ ಕಂಪನಿಗಳು ವಾಣಿಜ್ಯ ಮತ್ತು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಹೊಸ ದರಗಳನ್ನು ಪ್ರಕಟಿಸಲಿವೆ. ಹೀಗಾಗಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಏರಿಕೆ ಅಥವಾ […]
ಕಾರಿನಲ್ಲಿ ಕರೆತಂದು ತಾಯಿಯನ್ನು ರಸ್ತೆಯಲ್ಲೇ ಬಿಟ್ಟು ತೆರಳಿದ ಮಗ

ಉಡುಪಿ: ಹೆತ್ತ ತಾಯಿಯನ್ನು ಮಗ ಕಾರಿನಲ್ಲಿ ಕರೆತಂದು ರಸ್ತೆಯಲ್ಲೇ ಬಿಟ್ಟು ತೆರಳಿದ ಅಮಾನವೀಯ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.ಬ್ರಹ್ಮಾವರದ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಬಳಿ 70 ವರ್ಷದ ವೃದ್ಧೆಯೊಬ್ಬರು ದಿಕ್ಕು ತೋಚದೆ ಚಡಪಡಿಸುತ್ತಿರುವುದನ್ನು ಶಾಲಾ ಬಸ್ ಚಾಲಕ ರಾಮನಾಥ್ ಶೆಣೈ ಗಮನಿಸಿದರು. ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು.ತಕ್ಷಣ ಸ್ಥಳಕ್ಕೆ ಸ್ಪಂದಿಸಿದ ನಿತ್ಯಾನಂದ ಒಳಕಾಡು ಅವರು 112 ತುರ್ತು ಪೊಲೀಸ್ ಸಹಾಯವಾಣಿ ಸಿಬ್ಬಂದಿಯ ನೆರವಿನಿಂದ ವೃದ್ಧೆಯನ್ನು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ದಾಖಲು ಪ್ರಕ್ರಿಯೆ […]