ಹದಗೆಟ್ಟ ರಸ್ತೆಯಿಂದ ಹೈರಾಣಾದ ಜನ; ತಕ್ಷಣ ದುರಸ್ತಿಗೆ ಆಗ್ರಹ

ಉಡುಪಿ: ಹನುಮಾನ್ ಗ್ಯಾರೇಜ್‌ಗೆ ತೆರಳುವ ರಸ್ತೆ ಹಾಗೂ ವಿಷನ್ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ತಿಂಗಳಿಂದ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಡ್ರೈನೇಜ್ ಕಾಮಗಾರಿ ಹೆಸರಿನಲ್ಲಿ ರಸ್ತೆಯನ್ನು ಅಗೆದು ಬಳಿಕ ಸಮರ್ಪಕವಾಗಿ ದುರಸ್ತಿ ಮಾಡದೆ ಬಿಟ್ಟಿರುವುದರಿಂದ ರಸ್ತೆ ಉದ್ದಕ್ಕೂ ಜಲ್ಲಿ, ಕಲ್ಲು ಹಾಗೂ ಮಣ್ಣು ಹರಡಿಕೊಂಡಿದೆ. ಬಸ್ ಮತ್ತು ಭಾರಿ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ಅಪಾರ ಪ್ರಮಾಣದ ಧೂಳು ಮೇಲೇಳುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿರುವ ಜಲ್ಲಿಕಲ್ಲುಗಳಿಂದ […]

ರಾಷ್ಟ್ರಸುಧಾ ಮಾಧ್ಯಮ ಬಳಗದಲ್ಲಿ ಉದ್ಯೋಗಾವಕಾಶ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉಡುಪಿ: ರಾಷ್ಟ್ರಸುಧಾ ಮಾಧ್ಯಮ ಬಳಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿಡಿಯೋ ಎಡಿಟರ್, ಕ್ಯಾಮರಾಮನ್, ಕಾರ್ಯಕ್ರಮ/ಸುದ್ದಿ ವರದಿಗಾರರು, ಕಾರ್ಯಕ್ರಮ ನಿರೂಪಕರು, ಅಕೌಂಟೆಂಟ್/ರಿಸೆಪ್ಷನಿಸ್ಟ್, ಗ್ರಾಫಿಕ್ ಡಿಸೈನರ್ ಹಾಗೂ ವಾಣಿಜ್ಯ ಕಾರ್ಯನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಅ.3ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು [email protected] ಇ-ಮೇಲ್‌ಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 09094 80707 ಸಂಪರ್ಕಿಸಬಹುದು. ನೇಮಕಾತಿಗೆ ಸಂಬಂಧಿಸಿದಂತೆ ಅ.5ರಂದು ಅಕೌಂಟೆಂಟ್, ರಿಸೆಪ್ಷನಿಸ್ಟ್ ಹಾಗೂ ಕ್ಯಾಮರಾಮನ್; ಅ.6ರಂದು ಎಡಿಟರ್ ಹಾಗೂ ಗ್ರಾಫಿಕ್ ಡಿಸೈನರ್; ಅ.7ರಂದು ಕಾರ್ಯಕ್ರಮ ನಿರೂಪಕರು […]

ಮತ್ತೊಮ್ಮೆ ಭೂಕುಸಿತಕ್ಕೆ ನಲುಗಿದ ನೇಪಾಳ,8 ಸೆಕೆಂಡುಗಳಲ್ಲೇ ಕುಸಿದ ಇಡೀ ಪರ್ವತ,

ಕಠ್ಮಂಡು: ಭೀಕರ ಪ್ರವಾಹ ಹಾಗೂ ಭೂಕುಸಿತದ ಗಾಯ ಇನ್ನೂ ಮಾಸುವ ಮುನ್ನವೇ ನೇಪಾಳದಲ್ಲಿ ಮತ್ತೆ ಪ್ರಕೃತಿ ವಿಕೋಪದ ಸರಣಿ ಮುಂದುವರಿದಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದೇಶದ ವಿವಿಧೆಡೆ ಪ್ರವಾಹ, ಭೂಕುಸಿತ ಹಾಗೂ ಸಿಡಿಲಿನ ಘಟನೆಗಳು ಸಂಭವಿಸಿದ್ದು, ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ. ಮಳೆಯಿಂದಾಗಿ ಹಲವೆಡೆ ಮನೆಗಳು ಹಾನಿಗೊಳಗಾಗಿದ್ದು, ರಸ್ತೆ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿದೆ. ಕಳೆದ ಐದು ದಿನಗಳಲ್ಲಿ 439 ಮಳೆ ಸಂಬಂಧಿತ ಘಟನೆಗಳು ವರದಿಯಾಗಿದ್ದು, ಪ್ರವಾಹ ಹಾಗೂ ಭೂಕುಸಿತದಿಂದ ವಿವಿಧೆಡೆ ಸಿಲುಕಿದ್ದ […]

ಹಬ್ಬದ ಸೀಸನ್ ನಲ್ಲೇ ವಾಷಿಂಗ್‌ ಮಷಿನ್‌, ಫ್ರಿಜ್‌ ಸೇರಿದಂತೆ ಹಲವು ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಬೆಲೆ ಏರಿಕೆ? ಗ್ರಾಹಕರಿಗೆ ದೊಡ್ಡ ಶಾಕ್!

ದಸರಾ-ದೀಪಾವಳಿ ಹಬ್ಬದ ಸೀಸನ್‌ ಆರಂಭಕ್ಕೂ ಮುನ್ನವೇ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದೆ. ಅಕ್ಟೋಬರ್‌ 1ರಿಂದ AC, LED TV, ವಾಷಿಂಗ್‌ ಮಷಿನ್‌, ಫ್ರಿಜ್‌ ಸೇರಿದಂತೆ ಹಲವು ಗೃಹೋಪಯೋಗಿ ಹಾಗೂ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಬೆಲೆ ಶೇ.5ರಿಂದ 8ರವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಉದ್ಯಮ ವಲಯದ ಮೂಲಗಳು ತಿಳಿಸಿವೆ. ತಾಮ್ರ, ಅಲ್ಯೂಮಿನಿಯಂ, ಉಕ್ಕು ಸೇರಿದಂತೆ ಪ್ರಮುಖ ಕಚ್ಚಾ ವಸ್ತುಗಳ ಬೆಲೆ ಏರಿಕೆ, ಸಾಗಣೆ ವೆಚ್ಚ ಹೆಚ್ಚಳ ಹಾಗೂ ಕರೆನ್ಸಿ ವಿನಿಮಯ ದರದಲ್ಲಿನ ಏರಿಳಿತ ದರ ಹೆಚ್ಚಳಕ್ಕೆ […]

Athletics: 16ರ ವಯಸ್ಸಲ್ಲೇ ಅಂಡರ್-18 ರೇಸ್‌ವಾಕ್‌ನಲ್ಲಿ ಬೆಳ್ಳಿ; ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಚಿಕ್ಕಮಗಳೂರಿನ ವಿದುಷಾ ಜೈನ್

ಚಿಕ್ಕಮಗಳೂರಿನ ಪೂರ್ಣಪ್ರಜ್ಞ ಪಿಯು ಕಾಲೇಜಿನ ವಿದ್ಯಾರ್ಥಿನಿ ವಿದುಷಾ ಜೈನ್ ಅವರು 3000 ಮೀಟರ್ ರೇಸ್ ವಾಕ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ 2026ರ ರಾಷ್ಟ್ರಮಟ್ಟದ ಜೂನಿಯರ್ ಅಥ್ಲೆಟಿಕ್ಸ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ಸಾಧನೆಯು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆ ತಂದಿದೆ. ಚಿಕ್ಕಮಗಳೂರು ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ (Sport) ಮತ್ತೊಂದು ಹೆಮ್ಮೆಯ ಸುದ್ದಿ. ಕಳಸದ ಮೂಲದ ಹಾಗೂ ಚಿಕ್ಕಮಗಳೂರಿನ ಪೂರ್ಣಪ್ರಜ್ಞಾ ಪಿಯು ಕಾಲೇಜಿನಲ್ಲಿ (PU Collage) ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದುಷಾ ಜೈನ್, 3000 ಮೀಟರ್ ರೇಸ್ ವಾಕ್‌ನಲ್ಲಿ […]