ಅಭಿಮಾನಿಗಳ ಸರದಾರ ನಂದಳಿಕೆ “ಪಾಂಡು” ಕೋಣ ನಿಧನ.

ಉಡುಪಿ: ಕಂಬಳ ಕ್ಷೇತ್ರದ ದಂತಕತೆ, ಅಪಾರ ಅಭಿಮಾನಿಗಳ ಸರದಾರ, ಮಿಂಚಿನ ಓಟದೊಂದಿಗೆ ಕಂಬಳದಲ್ಲಿ ಪ್ರದರ್ಶನ ನೀಡುತ್ತಿದ್ದ ನಂದಳಿಕೆ “ಪಾಂಡು” ಕಂಬಳದ ಕೋಣ ಅನಾರೋಗ್ಯದಿಂದ ಇಂದು (ಸೆ.28) ಮುಂಜಾನೆ ನಿಧನ ಹೊಂದಿದೆ. ನಂದಳಿಕೆ ಶ್ರೀಕಾಂತ್ ಭಟ್ ಅವರ ಮನೆಯ ಹಿರಿಯ ಸದಸ್ಯನಾಗಿದ್ದ ಪಾಂಡು, 8 ವರ್ಷ ಚಾಂಪಿಯನ್, 150ಕ್ಕೂ ಹೆಚ್ಚು ಪದಕಗಳನ್ನು ತಂದುಕೊಟ್ಟು, ಅದ್ಭುತ ಪ್ರದರ್ಶನದ ಮುಖೇನ ತನ್ನ ಮಾಲಕರಿಗೂ ಹೆಮ್ಮೆ ತಂದಿತ್ತು. ಪಾಂಡು ಕಂಬಳ ಕ್ಷೇತ್ರಕ್ಕೆ ಹಲವು ವರ್ಷಗಳ ಹಿಂದೆ ನಿವೃತ್ತಿ ಪಡೆದಿದ್ದನು. ಇದೀಗ ಪಾಂಡು ನಿಧನಕ್ಕೆ […]