ಕನ್ನಡ ಚಿತ್ರರಂಗದಲ್ಲಿ ಜಯಭೇರಿ ಬಾರಿಸಲು ಹೊರಟಿದೆ: ‘ಗಂಧದ ಕುಡಿ’ ಸಾಹಸಮಯ ಮಕ್ಕಳ ಚಲನಚಿತ್ರ
ಮಂಗಳೂರಿನ ಯುವ ನಿರ್ದೇಶಕ ಸಂತೋಷ್ ಶೆಟ್ಟಿ ಈ ಮೊದಲು ಕನಸು ‘ಕಣ್ಣು ತೆರೆದಾಗ’ ಎಂಬ ಚಿತ್ರ ನಿರ್ದೇಶಿಸಿದ್ದು ಆ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ಈ ಚಿತ್ರದ ಭಾರೀ ಯಶಸ್ಸಿನ ಅನಂತರ `ಪರಿಸರ ರಕ್ಷಿಸಿ-ಮಾನವೀಯತೆ ಉಳಿಸಿ’ ಎನ್ನುವ ಸದುದ್ದೇಶದಿಂದ ಆರಂಭ ವಾದ ಇನ್ನೊಂದು ಸಾಹಸಮಯ ಮಕ್ಕಳ ಚಿತ್ರವೇ `ಗಂಧದ ಕುಡಿ’, ಹಿಂದಿಯಲ್ಲಿ ಮೂಡಿ ಬರಲಿರುವ `ಚಂದನ ವನ’. ಕಥಾ ತಿರುಳು ಪಶ್ಚಿಮ ಘಟ್ಟದ ಹಳ್ಳಿಯೊಂದರ ದಟ್ಟ ಕಾನನದಲ್ಲಿ ಸಿಗುವ ಗಂಧದ ಗಿಡದ ಸುತ್ತ ನಡೆಯುವ ಕುತೂಹಲಕಾರಿ ಘಟನೆಯೊಂದಿಗೆ […]
ರೌಡಿಶೀಟರ್ ವಿನೋದ್ ಶೆಟ್ಟಿಗಾರ್ ಕೊಲೆ ಪ್ರಕರಣದ ವಿಚಾರಣೆ ಪೂರ್ಣ: ನಾಲ್ಕು ಮಂದಿಯ ಆರೋಪ ಸಾಬೀತು, ನಾಳೆ ಶಿಕ್ಷೆ ಪ್ರಕಟ
ಉಡುಪಿ: ಕಳೆದ ಎಂಟು ವರ್ಷಗಳ ಹಿಂದೆ ಹಿರಿಯಡಕ ಸಮೀಪದ ಅಂಜಾರು ಜೈಲಿನಲ್ಲಿ ನಡೆದ ರೌಡಿ ಶೀಟರ್ ವಿನೋದ ಶೆಟ್ಟಿಗಾರ್ ಕೊಲೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ, ಆರು ಆರೋಪಿಗಳ ಪೈಕಿ ನಾಲ್ವರನ್ನು ದೋಷಿಗಳೆಂದು ಬುಧವಾರ ಆದೇಶ ನೀಡಿದೆ. ಬ್ರಹ್ಮಾವರ ಬೈಕಾಡಿ ನಿವಾಸಿಗಳಾದ ಮುತ್ತಪ್ಪ (36), ನಾಗರಾಜ ಬಳೆಗಾರ (33), ಶೇಖ್ ರಿಯಾಜ್ ಅಹಮ್ಮದ್ (33) ಹಾಗೂ ಗಂಗಾವತಿ ಅಗೋಳಿ ನಿವಾಸಿ ಶರಣಪ್ಪ ಅಮರಾಪುರ(33) ಆರೋಪ ಸಾಬೀತಾಗಿದ್ದು, ಕುಕ್ಕಿಕಟ್ಟೆ ಇಂದಿರನಗರ ನಿವಾಸಿ ರಾಘವೇಂದ್ರ (35) ಖುಲಾಸೆಗೊಂಡಿದ್ದಾನೆ. ಕೊಲೆ […]
ಚುನಾವಣಾ ಕಣದಿಂದ ಹಿಂದೆ ಸರಿಯಲ್ಲ, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಸುತ್ತೇನೆ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ
ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭೆ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಸುವ ಉದ್ದೇಶದಿಂದ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ–ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿಶ್ಚಲ. ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಜಿಲ್ಲೆಯಲ್ಲಿ ಜೆಡಿಎಸ್ ದುರ್ಬಲ: ಜಿಲ್ಲೆಯಲ್ಲಿ ಜೆಡಿಎಸ್ ಸಂಪೂರ್ಣ ದುರ್ವಲವಾಗಿದೆ. ಅದಕ್ಕೆ ಯಾವುದೇ ಜನಬೆಂಬಲ ಇಲ್ಲ. […]
ಉತ್ತರಾಧಿಕಾರಿಯಾಗಿ ಶ್ರೇಷ್ಠ ವಟು ದೊರಕಿದ್ದಾನೆ: ಪಲಿಮಾರು ಶ್ರೀ
ಉಡುಪಿ: ನಮಗೆ ಗುರುಗಳು ನೀಡಿದ ಭಾಗ್ಯ ಎರಡು ಒಂದು ಸನ್ಯಾಸ ಮತ್ತೊಂದು ಶ್ರೀ ಕೃಷ್ಣ ದೇವರು, ಶ್ರೀ ರಾಮ ದೇವರ ಪೂಜೆಯೊಂದಿಗೆ ಪಾಠಪ್ರವಚನ. ಇದು ನಿರಂತರವಾಗಿ ಬೆಳೆಯ ಬೇಕು ಮತ್ತು ಬೆಳಸಬೇಕು ಎಂದು ಉಡುಪಿಯ ಪಲಿಮಾರು ಶ್ರೀಗಳು ಹೇಳಿದ್ದಾರೆ. ಅವರು ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಸನ್ಯಾಸ ಎಂದರೆ ಕೇವಲ ಕಾಷಾಯ ವಸ್ತ್ರ ಬದಲಾವಣೆಯಲ್ಲ ಮಾನಸಿಕವಾದ ಪಕ್ವಾತೆಯೊಂದಿಗೆ ಪೂರ್ಣ ವಿರಕ್ತಿ ಭಾವ. ಅದು ಇದ್ದಲ್ಲಿ ಮಾತ್ರ ಸನ್ಯಾಸಕ್ಕೆ ಅರ್ಥವಿದೆ. ಇಂತಹ ಸನ್ಯಾಸದಿಂದಲೇ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ […]
“ಹುಳಿಮಾವು ಕಪ್ 2019” ಜಯಿಸಿದ ಮೈಟಿ ಸ್ಮೈಲ್ ಬೆಂಗಳೂರು
ಬೆಂಗಳೂರು: ಹುಳಿಮಾವು ಗ್ರಾಮಸ್ಥರು ಹಾಗೂ H.C.B (ಹುಳಿಮಾವು ಕ್ರಿಕೆಟ್ ಬಾಯ್ಸ್)ತಂಡ ಸತತ 5 ನೇ ಬಾರಿ ಬೆಂಗಳೂರಿನ ಹುಳಿಮಾವು ಇಸ್ಲಾಮಿಯಾ ಕಾಲೇಜಿನ ಅಂಗಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಹಗಲಿನ ವ್ಯವಸ್ಥಿತ ರಾಷ್ಟ್ರೀಯ ಮಟ್ಟದ ಪಂದ್ಯಾಕೂಟ “ಹುಳಿಮಾವು ಕಪ್-2019″ನ್ನು ” ಮೈಟಿ ಸ್ಮೈಲ್” ತಂಡ ಗೆದ್ದುಕೊಂಡಿತು. ರಾಜ್ಯದ ವಿವಿಧೆಡೆಯಿಂದ 16 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಕೂಟದಲ್ಲಿ,ಲೀಗ್ ಹಂತದ ಸೆಣಸಾಟದ ಬಳಿಕ ಸೆಮಿಫೈನಲ್ ರೋಚಕ ಕದನದಲ್ಲಿ ಎಸ್.ಝಡ್,ಸಿ.ಸಿ ತಂಡ ಫ್ರೆಂಡ್ಸ್ ಬೆಂಗಳೂರು ತಂಡವನ್ನು ಹಾಗೂ ಮೈಟಿ ಸ್ಮೈಲ್ ತಂಡ ಜೈ […]