ವಿಶೇಷ ಚೇತನರಿಗೆ, ಸಾರ್ವಜನಿಕರಿಗೆ ಮತದಾನದ ಜಾಗೃತಿ ಕಾರ್ಯಕ್ರಮ

    ಉಡುಪಿ :ಲೋಕಸಭಾ ಚುನಾವಣೆ 2019 ರ ಅಂಗವಾಗಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಿಶೇಷ ಚೇತನರಿಗೆ ಮತ್ತು ಸಾರ್ವಜನಿಕರಿಗೆ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಉಡುಪಿ ಬೀಡಿನಗುಡ್ಡೆ ಪರಿಸರದಲ್ಲಿ, ಬಿಗ್ ಬಜಾರ್ ಪರಿಸರದಲ್ಲಿ, ಪರ್ಕಳ ಸಂತೆ ಮಾರ್ಕೆಟ್ ಪರಿಸರದಲ್ಲಿ ಮತ್ತು ಸಂತೆಕಟ್ಟೆ ಐ.ಡಿ.ಎಸ್.ಎಂ.ಟಿ ಕಟ್ಟಡದ ಬಳಿ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು.     ನಗರ ಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್, ಕಂದಾಯ ಅಧಿಕಾರಿ ಧನಂಜಯ ಡಿ.ಬಿ, ಸಮುದಾಯ ಸಂಘಟನಾಧಿಕಾರಿ ನಾರಾಯಣ ಎಸ್.ಎಸ್, ಕಂದಾಯ ನಿರೀಕ್ಷಕರಾದ ಪಾಂಡುರಂಗ ಹಾಗೂ ನಗರ ಸಭೆಯ ಸಿಬ್ಬಂದಿಗಳು […]

ತೆಂಕನಿಡಿಯೂರು: ಎನ್.ಎಸ್.ಡಿ.ಸಿ ತರಬೇತಿ ಕಾರ್ಯಕ್ರಮ

ಉಡುಪಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಉದ್ಯೋಗ ಮಾಹಿತಿ ಘಟಕ, ಐಕ್ಯೂಎಸಿ ಹಾಗೂ ಎನ್‍ಎಸ್‍ಡಿಸಿ ಸಂಸ್ಥೆ, ಉಡುಪಿ  ಇವರ ಸಂಯುಕ್ತ ಆಶ್ರಯದಲ್ಲಿ ಸ್ಕಿಲ್ ಸಾಥಿ ಅಡಿಯಲ್ಲಿ ಮಾರ್ಚ್ 26 ರಂದು ಉದ್ಯೋಗ ಮತ್ತು ಸ್ವ ಉದ್ಯೋಗ ತರಬೇತಿ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಯಿತು.    ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ವಿಭಾಗದ ಎನ್‍ಎಸ್‍ಡಿಸಿ ಟ್ರೈನಿಂಗ್ ಪ್ರೊವೈಡರ್ ಸುಬ್ರಹ್ಮಣ್ಯ, ಇವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ […]

ಮೇ 12ರಂದು ಪಲಿಮಾರು ಶ್ರೀಗಳ ಉತ್ತರಾಧಿಕಾರಿಯಾಗಿ ಶೈಲೇಶ್ ಉಪಾಧ್ಯಾಯ ಶಿಷ್ಯ ಸ್ವೀಕಾರ

ಉಡುಪಿ: ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಶಿಷ್ಯ ಸ್ವೀಕಾರಕ್ಕೆ ನಿರ್ಧರಿಸಿದ್ದು, ಪಲಿಮಾರು ಮೂಲ ಮಠದಲ್ಲಿರುವ ಯೋಗ ದೀಪಿಕಾ ಗುರುಕುಲದ ವಿದ್ಯಾರ್ಥಿ ಶೈಲೇಶ್ ಉಪಾಧ್ಯಾಯ ಅವರು ಮಠದ 31 ಉತ್ತರಾಧಿಕಾರಿಯಾಗಿ ಮೇ 12ರಂದು ಶಿಷ್ಯ ಸ್ವೀಕಾರ ಮಾಡಲಿದ್ದಾರೆ. ಕೊಡವೂರು ಕಂಬಳಕಟ್ಟ ಮೂಲದ ವಿದ್ಯಾರ್ಥಿ ಶೈಲೇಶ್ ಉಪಾಧ್ಯಾಯ ಅವರು ಪಲಿಮಾರು ಯೋಗ ದೀಪಿಕಾ ಗುರುಕುಲದಲ್ಲಿ ನಾಲ್ಕನೇ ವರ್ಷದ ವೇದಾಧ್ಯಯನ ಮಾಡುತ್ತಿದ್ದು, ಸನ್ಯಾಸ ಸ್ವೀಕಾರದ ಬಳಿಕ ಪಲಿಮಾರು ಶ್ರೀಗಳಲ್ಲಿ ಉನ್ನತ ಅಧ್ಯಯನ ಮುಂದುವರಿಸಲಿದ್ದಾರೆ. ಶಿಬರೂರಿನಲ್ಲಿ 1956ರಲ್ಲಿ ಜನಿಸಿದ ಪಲಿಮಾರು ಸ್ವಾಮೀಜಿಯವರಿಗೆ ಪ್ರಸಕ್ತ […]