ಕನ್ನಡ ಚಿತ್ರರಂಗದಲ್ಲಿ ಜಯಭೇರಿ ಬಾರಿಸಲು ಹೊರಟಿದೆ: ‘ಗಂಧದ ಕುಡಿ’ ಸಾಹಸಮಯ ಮಕ್ಕಳ ಚಲನಚಿತ್ರ

ಮಂಗಳೂರಿನ ಯುವ ನಿರ್ದೇಶಕ ಸಂತೋಷ್ ಶೆಟ್ಟಿ ಈ ಮೊದಲು ಕನಸು ‘ಕಣ್ಣು ತೆರೆದಾಗ’ ಎಂಬ ಚಿತ್ರ ನಿರ್ದೇಶಿಸಿದ್ದು ಆ ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿತ್ತು. ಈ ಚಿತ್ರದ ಭಾರೀ ಯಶಸ್ಸಿನ ಅನಂತರ `ಪರಿಸರ ರಕ್ಷಿಸಿ-ಮಾನವೀಯತೆ ಉಳಿಸಿ’ ಎನ್ನುವ ಸದುದ್ದೇಶದಿಂದ ಆರಂಭ ವಾದ ಇನ್ನೊಂದು ಸಾಹಸಮಯ ಮಕ್ಕಳ ಚಿತ್ರವೇ `ಗಂಧದ ಕುಡಿ’, ಹಿಂದಿಯಲ್ಲಿ ಮೂಡಿ ಬರಲಿರುವ `ಚಂದನ ವನ’.

ಕಥಾ ತಿರುಳು
ಪಶ್ಚಿಮ ಘಟ್ಟದ ಹಳ್ಳಿಯೊಂದರ ದಟ್ಟ ಕಾನನದಲ್ಲಿ ಸಿಗುವ ಗಂಧದ ಗಿಡದ ಸುತ್ತ ನಡೆಯುವ ಕುತೂಹಲಕಾರಿ ಘಟನೆಯೊಂದಿಗೆ ಸಾಹಸಮಯ ಮಕ್ಕಳ ಹೋರಾಟವೇ ಗಂಧದಕುಡಿ/ಚಂದನವನದ ತಿರುಳು. ಸಸ್ಯ ವಿಜ್ಞಾನಿಗಳ  ಮೂಲಕ ಪರಿಸರ ನಾಶದ ಬಗ್ಗೆ ಜಾಗೃತಿ, ನೈಸರ್ಗಿಕ ಮೂಲಗಳನ್ನು ಬಳಸಿ ಮನುಷ್ಯ ಪ್ರಕೃತಿಯೊಂದಿಗೆ ಸುಖವಾಗಿ ಬದುಕಬಹುದೆಂಬುದನ್ನು ಚಿತ್ರ ವಿಶ್ಲೇಷಿಸುತ್ತದೆ. ನಿರ್ದೇಶಕ ಸಂತೋಷ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಮುಖ ಪಾತ್ರಗಳು
ಕನ್ನಡ ಚಿತ್ರನಟ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ  ಶಿವದ್ವಜ್  ಶೆಟ್ಟಿಯವರು ಕೃಷ್ಣ ಹೆಗಡೆಯಾಗಿಯೂ, ಜನಪ್ರಿಯ ಧಾ ಧಾರಾವಾಹಿಗಳ ನಟಿ ಜ್ಯೋತಿ ರೈ ಶಾಲಿನಿಯಾಗಿ ನಟಿಸಿದ್ದಾರೆ. ಕು| ನಿಧಿ ಶೆಟ್ಟಿ ಮುಂಬಯಿ ಬಾಲನಟಿಯಾಗಿ ಅದ್ಭುತ ನಟನಾ ಕೌಶಲತೆ ಮೆರೆದಿದ್ದಾರೆ. ಗಂಧದ ಕುಡಿ ಹಳ್ಳಿಯ ಹಿರಿಯ ಜಮೀನ್ದಾರ ಸತ್ಯೇಂದ್ರ ಹೆಗಡೆ ಪ್ರಕೃತಿ ಪ್ರಿಯರು. ಮಗ ಕೃಷ್ಣ ಹೆಗಡೆ ನಗರಕ್ಕೆ ಬರಲು ಒತ್ತಾಯಿಸಿದರೂ ತೆರಳದ ಸ್ವಾಭಿಮಾನಿ. ಹೆಗಡೆಯ ಪಾತ್ರಕ್ಕೆ ರಮೇಶ್ ಭಟ್ ಜೀವ ತುಂಬಿದ್ದಾರೆ. ರಿಟೈರ್ಡ್ ಮಿಲಿಟರಿ ಆಫೀಸರ್ ಗಟ್ಟಿತನ, ಮೊಮ್ಮಗಳೊಂದಿಗಿನ ಆಟೋಟದಲ್ಲಿ ಪ್ರೇಕ್ಷಕರನ್ನು ಮನರಂಜಿಸಿದ್ದಾರೆ.


ದೇಶದಲ್ಲಿ ವೈಜ್ಞಾನಿಕ  ಕ್ಷೇತ್ರದಲ್ಲಿ ದುಡಿದಿರುವ ಅನಂತ್ ನಾಯಕ್ ಚಿತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಆಮೆರಿಕಾ ನಿವಾಸಿ ಕಿಶಾ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಡ್ಯಾನ್ಸ್ ಸ್ಟಾರ್   ಮಿನುಗು ತಾರೆಯಾಗಿದ್ದಾರೆ.ಕ್ಯಾಲಿಫೋರ್ನಿಯಾ  ವಿದ್ಯಾ ಈಕೆ ಚಿತ್ರಕ್ಕೆ ಸ್ವತಃ ಕಂಠದಾನ ಮಾಡಿದ್ದಾರೆ. ಬಾಲನಟರಾದ ಬೇಬಿ ನಿಧಿ  ಶೆಟ್ಟಿ, ಬೇಬಿ ಕೀಷಾ, ಮಾ| ವಿಘ್ನೇಶ್, ಮಾ| ಶ್ರೀಶ ಶೆಟ್ಟಿ, ಮಾ| ಶ್ರೇಯಸ್ ಶೆಟ್ಟಿ, ಬೇಬಿ ಆ್ಯಶ್ಲಿನ್ ಡಿ’ಸೋಜಾ, ಬೇಬಿ ಪ್ರಣತಿ ಅಭಿನಯದ ಮೂನ್‍ವೈಟ್ ಫಿಲಂಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷ ಪ್ರಶಸ್ತಿ ಪಡೆದಿದ್ದಾರೆಂದು ನಿರ್ಮಾಪಕ ಸತ್ಯೇಂದ್ರ ಪೈ ಹೇಳುತ್ತಾರೆ.

ಅಂತಾರಾಷ್ಟ್ರೀಯ ಪ್ರಶಸ್ತಿಗಳ ಗರಿ
ಚಿತ್ರದಲ್ಲಿ ತಿಳಿಹಾಸ್ಯ, ಸಾಹಸ, ಸೆಂಟಿಮೆಂಟ್‍ಗಳೊಂದಿಗೆ ಖ್ಯಾತ ಗಾಯಕರು ಹಾಡಿರುವ ಇಂಪಾದ ಹಾಡುಗಳಿವೆ. ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು  ಬಿಂಬಿಸುವ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿ   ನೀಡಿದ್ದಾರೆ. ಮಲೆನಾಡಿನ ಸುಂದರ ತಾಣದಲ್ಲಿ ಚಿತ್ರೀಕರಣಗೊಂಡ ಈ ಚಿತ್ರಕ್ಕೆ ಅಮೇರಿಕಾದ ಕ್ಯಾಲಿಫೋರ್ನಿಯಾ , ಮೆಕ್ಸಿಕೋ, ಚಿಲಿ ಸೇರಿದಂತೆ ದೇಶ ವಿದೇಶಗಳಲ್ಲಿ 21  ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡದ ಬಹುನಿರೀಕ್ಷಿತ ಗಂಧದ ಕುಡಿ ಚಿತ್ರವು  ಮಾ. 29 ರಂದು ಮಂಗಳೂರು ಸಹಿತ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.