ಲಾರಿ-ಕಾರು ಅಪಘಾತ: ಕಾರ್ಕಳ ನಕ್ರೆಯ ಐವರು ಗಂಭೀರ

ಉಪ್ಪಿನಂಗಡಿ: ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ರಾತ್ರಿ ಉಪ್ಪಿನಂಗಡಿಯ ಕೂಟೇಲು ಸಮೀಪ ನಡೆದಿದೆ. ಕಾರ್ಕಳದ ನಕ್ರೆ ಗ್ರಾಮದ ಕುಟುಂಬವೊಂದು ಸುಬ್ರಹ್ಮಣ್ಯಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಡುಗೆ ಅನಿಲ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಚಾಲಕ ದೀಪಕ್ (45), ಗುರುರಾಜ್ (46), ಧನುಷ್ (15), ಭಾರತಿ (48) ಹಾಗೂ ಗೀತಾ (55) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ರಕ್ಷಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ […]
ಉದ್ಯೋಗಾವಕಾಶ: ಮೇ 30, ಜೂ.1 ರಂದು ಸಂದರ್ಶನ

ಮಂಗಳೂರು: ವಿ.ಆರ್.ಎನ್ ಇನ್ಪೋಟೆಕ್ ಕಂಪೆನಿಯ ವತಿಯಿಂದ ಮಂಗಳೂರಿನಲ್ಲಿ ಖಾಲಿ ಇರುವ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ನೇರ ಸಂದರ್ಶನ ಮೇ 30 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ಸಂದರ್ಶನದಲ್ಲಿ ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಮಲಯಾಳಂ/ಹಿಂದಿ/ಇಂಗ್ಲಿಷ್/ತಮಿಳು ಭಾಷೆ ತಿಳಿದಿರಬೇಕು. ಬ್ಲಿಂಕಿಟ್ ಕಂಪೆನಿಯ ವತಿಯಿಂದ ಮಂಗಳೂರಿನಲ್ಲಿ ಖಾಲಿ ಇರುವ ಪಿಕ್ಕರ್ ಹಾಗೂ ಪ್ಯಾಕರ್ ಹುದ್ದೆಗೆ […]
ಬಂಟಕಲ್ ನಲ್ಲಿ ಆರ್ ಎಸ್ ಬಿ, ಬಿಜಿಎಸ್ ಬಿ ‘ಋಣಾನುಬಂಧ’ ವಧುವರರ ಸಮಾವೇಶ

ಉಡುಪಿ: ಆರ್.ಎಸ್.ಬಿ. ಹಾಗೂ ಬಿ.ಜಿ.ಎಸ್.ಬಿ. ಸಮಾಜ ಬಾಂಧವರ ಜಂಟಿ ಆಶ್ರಯದಲ್ಲಿ, ಆರ್.ಎಸ್.ಬಿ. ಮತ್ತು ಬಿ.ಜಿ.ಎಸ್.ಬಿ. ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ವತಿಯಿಂದ ಆಯೋಜಿಸಲಾದ ‘ಋಣಾನುಬಂಧ’ ವಧುವರರ ಸಮಾವೇಶವು ಭಾನುವಾರ ಬಂಟಕಲ್ ರೋಟರಿ ಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ಅಧ್ಯಕ್ಷ ನಾಗೇಂದ್ರ ಕಾಮತ್ ಅವರು, ಸಮಾಜದ ಯುವ ಪೀಳಿಗೆಗೆ ಸೂಕ್ತ ಜೀವನ ಸಂಗಾತಿಯನ್ನು ಕಂಡುಕೊಳ್ಳಲು ಇಂತಹ ಸಮಾವೇಶಗಳು ಭದ್ರ ಬುನಾದಿ ಹಾಕಿಕೊಡುತ್ತವೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ […]
ಕಾರ್ಕಳ: ಮನೆಯ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಕಳ್ಳತನ

ಕಾರ್ಕಳ: ಮನೆಯಲ್ಲಿ ಚಿನ್ನ, ಬೆಳ್ಳಿ ಮುಂತಾದ ನಗ ಅಥವಾ ನಗದು ಇದ್ದರೆ ಅಥವಾ ಬೆಳೆಬಾಳುವ ವಸ್ತುಗಳು ಇದ್ದರೆ ಅವುಗಳನ್ನು ಮಾತ್ರ ಜೋಪಾನ ಮಾಡಿದರೆ ಸಾಲುವುದಿಲ್ಲ. ಮನೆ ಹೊರಗೆ ಕೊಟ್ಟಿಗೆಯಲ್ಲಿ ಕಟ್ಟಿರುವ ಹಸುಗಳನ್ನೂ ಜೋಪಾನ ಮಾಡಬೇಕಾದ ಪರಿಸ್ಥಿತಿ ಇಂದು ಬಂದೊದಗಿದೆ. ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದಲ್ಲಿನ ಪ್ರಿಯಾಂಕ ಎಂಬುವವರ ಮನೆಯ ಹಟ್ಟಿಯಲ್ಲಿ ಹಸುವನ್ನು ಕಳ್ಳತನ ಮಾಡಿದ ಘಟನೆ ವರದಿಯಾಗಿದೆ. ಇವರ ಮನೆಯ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕಪ್ಪು ಬಣ್ಣದ ಹಸುವನ್ನು ಕಾರಿನಲ್ಲಿ ಬಂದ ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ […]
1947 ರಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತಾ? ಕೇಳಿದರೆ ಅಚ್ಚರಿ ಆಗೋದು ಖಂಡಿತಾ!

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನೇದಿನೇ ಏರಿಕೆಯಾಗುತ್ತಿವೆ. ಜಾಗತಿಕ ತೈಲ ಕೊರತೆ, ಮಧ್ಯಪ್ರಾಚ್ಯದ ಉದ್ವಿಗ್ನತೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಸೇರಿದಂತೆ ಹಲವು ಕಾರಣಗಳಿಂದ ಇಂಧನ ದರಗಳು ಜನರ ಮೇಲೆ ಹೆಚ್ಚುವರಿ ಹೊರೆ ತಂದಿವೆ. ಇಂತಹ ಸಂದರ್ಭದಲ್ಲೇ ಒಂದು ಕುತೂಹಲಕಾರಿ ಪ್ರಶ್ನೆ ಹಲವರ ಮನದಲ್ಲಿ ಮೂಡುತ್ತದೆ — ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಾಗ ಪೆಟ್ರೋಲ್ ಬೆಲೆ ಎಷ್ಟಿತ್ತು? 1947ರಲ್ಲಿ ಪೆಟ್ರೋಲ್ ದರ ಎಷ್ಟು? ಭಾರತ ಸ್ವತಂತ್ರವಾದ ಸಮಯದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಕೇವಲ […]