ಕಾರ್ಕಳ: ಮನೆಯ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಕಳ್ಳತನ

ಕಾರ್ಕಳ: ಮನೆಯಲ್ಲಿ ಚಿನ್ನ, ಬೆಳ್ಳಿ ಮುಂತಾದ ನಗ ಅಥವಾ ನಗದು ಇದ್ದರೆ ಅಥವಾ ಬೆಳೆಬಾಳುವ ವಸ್ತುಗಳು ಇದ್ದರೆ ಅವುಗಳನ್ನು ಮಾತ್ರ ಜೋಪಾನ ಮಾಡಿದರೆ ಸಾಲುವುದಿಲ್ಲ. ಮನೆ ಹೊರಗೆ ಕೊಟ್ಟಿಗೆಯಲ್ಲಿ ಕಟ್ಟಿರುವ ಹಸುಗಳನ್ನೂ ಜೋಪಾನ ಮಾಡಬೇಕಾದ ಪರಿಸ್ಥಿತಿ ಇಂದು ಬಂದೊದಗಿದೆ.

 ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದಲ್ಲಿನ ಪ್ರಿಯಾಂಕ ಎಂಬುವವರ ಮನೆಯ ಹಟ್ಟಿಯಲ್ಲಿ ಹಸುವನ್ನು ಕಳ್ಳತನ ಮಾಡಿದ ಘಟನೆ ವರದಿಯಾಗಿದೆ.

ಇವರ ಮನೆಯ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಕಪ್ಪು ಬಣ್ಣದ ಹಸುವನ್ನು ಕಾರಿನಲ್ಲಿ ಬಂದ ಕಳ್ಳರು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು, ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.