ವರ್ಷಕ್ಕೆ ಇಷ್ಟು ಸಿಲಿಂಡರ್ ಮಾತ್ರ ಸಿಗೋದು, ಇನ್ನು ಪ್ಲಾನ್ ಮಾಡ್ಕೊಂಡು ಬುಕ್ ಮಾಡಿ !

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು ಹಾಗೂ ಜಾಗತಿಕ ಉದ್ವಿಗ್ನತೆಗಳ ಹಿನ್ನೆಲೆ ಎಲ್ಪಿಜಿ ಗ್ಯಾಸ್ ಪೂರೈಕೆಯ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಆದರೆ ದೇಶದಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ತೈಲ ಮಾರುಕಟ್ಟೆ ಕಂಪನಿಗಳು ಸ್ಪಷ್ಟಪಡಿಸಿವೆ. ಈ ನಡುವೆ ಗೃಹಬಳಕೆಯ ಎಲ್ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರು ವರ್ಷಕ್ಕೆ ಎಷ್ಟು ಸಿಲಿಂಡರ್ ಖರೀದಿಸಬಹುದು ಎಂಬ ಪ್ರಶ್ನೆ ಸಾಮಾನ್ಯವಾಗಿದೆ. ವರ್ಷಕ್ಕೆ 15 ಸಿಲಿಂಡರ್ ಮಿತಿ ಪ್ರಸ್ತುತ ನಿಯಮಗಳ ಪ್ರಕಾರ, 14.2 ಕೆಜಿ ಗೃಹಬಳಕೆಯ […]

ಚಾರ್ಜರ್ ಅನ್ನು ಸಾಕೆಟ್‌ನಲ್ಲೇ ಬಿಡ್ತೀರಾ? ಈ ಅಭ್ಯಾಸ ನಿಮ್ಮ ಜೇಬಿಗೆ ಹಾಕಬಹುದು ಕತ್ತರಿ!

ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರೆ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ, ಚಾರ್ಜರ್ ಅನ್ನು ಬಳಕೆ ಬಳಿಕವೂ ಸಾಕೆಟ್‌ನಲ್ಲೇ ಬಿಡುವುದು ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಈ ಅಭ್ಯಾಸ ದೀರ್ಘಾವಧಿಯಲ್ಲಿ ವಿದ್ಯುತ್ ವ್ಯರ್ಥವಾಗುವುದರ ಜೊತೆಗೆ ಸುರಕ್ಷತೆಯ ಮೇಲೂ ಪರಿಣಾಮ ಬೀರಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಆಧುನಿಕ ಚಾರ್ಜರ್‌ಗಳಲ್ಲಿ ಓವರ್‌ಚಾರ್ಜಿಂಗ್ ಸಮಸ್ಯೆ ಇಲ್ಲಇಂದಿನ ಸ್ಮಾರ್ಟ್‌ಫೋನ್‌ಗಳು ಮತ್ತು ಆಧುನಿಕ ಚಾರ್ಜರ್‌ಗಳು ಬ್ಯಾಟರಿ 100% ಚಾರ್ಜ್ ಆದ ಬಳಿಕ ವಿದ್ಯುತ್ ಹರಿವನ್ನು ಸ್ವಯಂಚಾಲಿತವಾಗಿ ನಿಯಂತ್ರಿಸುತ್ತವೆ. ಹೀಗಾಗಿ ರಾತ್ರಿಯಿಡೀ ಚಾರ್ಜ್ ಮಾಡಿದರೂ ಸಾಮಾನ್ಯವಾಗಿ […]

ಕೇರಳಂನಿಂದಲೇ ಮುಂಗಾರು ಮಳೆ ಆರಂಭಕ್ಕೆ ಕಾರಣವೇನು?

ದೇಶದ ಹಲವು ಭಾಗಗಳಲ್ಲಿ ಬಿಸಿಗಾಳಿ ಮತ್ತು ಉಷ್ಣಾಂಶ ಏರಿಕೆಯಿಂದ ಜನರು ತತ್ತರಿಸುತ್ತಿರುವ ನಡುವೆಯೇ ಈ ಬಾರಿಯ ನೈಋತ್ಯ ಮುಂಗಾರು ಸ್ವಲ್ಪ ವಿಳಂಬವಾಗಿ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಆರಂಭದಲ್ಲಿ ಮೇ 26ರಂದೇ ಕೇರಳಕ್ಕೆ ಮುಂಗಾರು ಆಗಮಿಸಬಹುದು ಎಂದು ಅಂದಾಜಿಸಲಾಗಿದ್ದರೂ, ಬದಲಾಗಿರುವ ಹವಾಮಾನ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಮುಂಗಾರು ಪ್ರವೇಶ ಮುಂದೂಡಿಕೆಯಾಗಿದೆ. ಮುಂಗಾರು ಆರಂಭವನ್ನು ಹೇಗೆ ಘೋಷಿಸಲಾಗುತ್ತದೆ?ಕೇರಳದಲ್ಲಿರುವ 14 ಹವಾಮಾನ ಕೇಂದ್ರಗಳ ಪೈಕಿ ಕನಿಷ್ಠ 60 ಶೇಕಡಾ ಕೇಂದ್ರಗಳಲ್ಲಿ 2.5 ಮಿ.ಮೀ. ಅಥವಾ […]

ಕರಾವಳಿಗರೇ ಗಮನಿಸಿ! 128 ದಿನ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರೀ ಬದಲಾವಣೆ

ಕರಾವಳಿ ಹಾಗೂ ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಪ್ರಯಾಣಿಕರಿಗೆ ನೈರುತ್ಯ ರೈಲ್ವೆ (SWR) ಮಹತ್ವದ ಮಾಹಿತಿ ನೀಡಿದೆ. ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಜೂನ್ 15, 2026ರಿಂದ ಅಕ್ಟೋಬರ್ 20, 2026ರವರೆಗೆ ವಿಶೇಷ ಮುಂಗಾರು ವೇಳಾಪಟ್ಟಿಯನ್ನು ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಹಲವು ಪ್ರಮುಖ ರೈಲುಗಳ ಸಂಚಾರದಲ್ಲಿ 30 ನಿಮಿಷದಿಂದ 2 ಗಂಟೆಗಳವರೆಗೆ ವಿಳಂಬ ಉಂಟಾಗಲಿದೆ. ಬದಲಾವಣೆಗೆ ಕಾರಣ ಇಲ್ಲಿದೆಮಳೆಗಾಲದಲ್ಲಿ ಹಳಿಗಳ ಮೇಲೆ ನೀರು ನಿಲ್ಲುವುದು, ಗುಡ್ಡ ಕುಸಿತದ ಭೀತಿ ಹಾಗೂ ಸುರಕ್ಷತಾ ಕಾರಣಗಳಿಂದ ಕೊಂಕಣ ಮಾರ್ಗದಲ್ಲಿ ರೈಲುಗಳ ವೇಗವನ್ನು […]

ಮಂಗಳೂರು: ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ರೈತರಿಗೆ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಮಂಗಳೂರು ವತಿಯಿಂದ ಜೂನ್-2026ರ ಮಾಹೆಯಲ್ಲಿ ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ಏರ್ಪಡಿಸಲಾಗಿದೆ. ತರಬೇತಿ ವಿವರ: ರೈತರಿಗೆ ಹಂದಿ ಸಾಕಾಣಿಕೆ ತರಬೇತಿ ಜೂನ್ 16 ರಿಂದ 17 ರವರೆಗೆ  ಹಾಗೂ ಕುರಿ/ಮೇಕೆ ಸಾಕಾಣಿಕೆ ತರಬೇತಿ ಜೂನ್ 23 ರಿಂದ 24 ರವರೆಗೆ ನಡೆಯಲಿದೆ.  ಹೆಚ್ಚಿನ ಮಾಹಿತಿಗೆ ಆಸಕ್ತ ರೈತ ಬಾಂಧವರು  ಮಂಗಳೂರು ತಾಲೂಕು – 9243306956/ 0824-2950369, ಉಳ್ಳಾಲ ತಾಲೂಕು […]