ವರ್ಷಕ್ಕೆ ಇಷ್ಟು ಸಿಲಿಂಡರ್ ಮಾತ್ರ ಸಿಗೋದು, ಇನ್ನು ಪ್ಲಾನ್ ಮಾಡ್ಕೊಂಡು ಬುಕ್ ಮಾಡಿ !

ಈ ನಡುವೆ ಗೃಹಬಳಕೆಯ ಎಲ್ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರು ವರ್ಷಕ್ಕೆ ಎಷ್ಟು ಸಿಲಿಂಡರ್ ಖರೀದಿಸಬಹುದು ಎಂಬ ಪ್ರಶ್ನೆ ಸಾಮಾನ್ಯವಾಗಿದೆ.

ವರ್ಷಕ್ಕೆ 15 ಸಿಲಿಂಡರ್ ಮಿತಿ

ಪ್ರಸ್ತುತ ನಿಯಮಗಳ ಪ್ರಕಾರ, 14.2 ಕೆಜಿ ಗೃಹಬಳಕೆಯ ಎಲ್ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರು ಒಂದು ವರ್ಷದಲ್ಲಿ ಗರಿಷ್ಠ 15 ಸಿಲಿಂಡರ್‌ಗಳನ್ನು ಖರೀದಿಸಬಹುದು.

ಸಬ್ಸಿಡಿ ಸಿಗುವುದು ಎಷ್ಟು ಸಿಲಿಂಡರ್‌ಗಳಿಗೆ?

ವಾರ್ಷಿಕವಾಗಿ ಖರೀದಿಸುವ ಮೊದಲ 12 ಸಿಲಿಂಡರ್‌ಗಳಿಗೆ ಮಾತ್ರ ಸರ್ಕಾರದ ಸಬ್ಸಿಡಿ ಅನ್ವಯವಾಗುತ್ತದೆ. 12 ಸಿಲಿಂಡರ್‌ಗಳ ಮಿತಿ ಪೂರ್ಣಗೊಂಡ ಬಳಿಕ ಹೆಚ್ಚುವರಿ 3 ಸಿಲಿಂಡರ್‌ಗಳನ್ನು ಖರೀದಿಸಲು ಅವಕಾಶವಿದ್ದರೂ, ಅವುಗಳಿಗೆ ಸಬ್ಸಿಡಿ ಲಭ್ಯವಿರುವುದಿಲ್ಲ. ಗ್ರಾಹಕರು ಮಾರುಕಟ್ಟೆ ದರದಲ್ಲೇ ಅವುಗಳನ್ನು ಖರೀದಿಸಬೇಕಾಗುತ್ತದೆ.

ಬುಕಿಂಗ್ ನಡುವೆ 25 ದಿನಗಳ ಅಂತರ

ಎಲ್ಪಿಜಿ ಸಿಲಿಂಡರ್‌ಗಳ ಅಕ್ರಮ ಸಂಗ್ರಹಣೆ ಹಾಗೂ ಕಪ್ಪು ಮಾರುಕಟ್ಟೆ ತಡೆಯುವ ಉದ್ದೇಶದಿಂದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ಎರಡು ಬುಕಿಂಗ್‌ಗಳ ನಡುವೆ ಕನಿಷ್ಠ 25 ದಿನಗಳ ಅಂತರ ಕಡ್ಡಾಯಗೊಳಿಸಿವೆ.

ಈ ನಿಯಮದ ಪ್ರಕಾರ, ಒಂದು ಸಿಲಿಂಡರ್ ಬುಕ್ ಮಾಡಿದ ಬಳಿಕ ಮತ್ತೊಂದು ಸಿಲಿಂಡರ್ ಬುಕ್ ಮಾಡಲು ಕನಿಷ್ಠ 25 ದಿನ ಕಾಯಬೇಕಾಗುತ್ತದೆ. ಹೀಗಾಗಿ ಒಂದೇ ತಿಂಗಳಲ್ಲಿ ಅನಿಯಮಿತ ಪ್ರಮಾಣದಲ್ಲಿ ಸಿಲಿಂಡರ್‌ಗಳನ್ನು ಬುಕ್ ಮಾಡಲು ಸಾಧ್ಯವಿಲ್ಲ.

ಗ್ರಾಹಕರಿಗೆ ಸಲಹೆ

ಗ್ಯಾಸ್ ಸಂಪೂರ್ಣ ಖಾಲಿಯಾಗುವವರೆಗೆ ಕಾಯದೇ, ಅಗತ್ಯಕ್ಕೆ ಅನುಗುಣವಾಗಿ ಮುಂಚಿತವಾಗಿಯೇ ಸಿಲಿಂಡರ್ ಬುಕ್ ಮಾಡುವುದು ಉತ್ತಮ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಪಿಜಿ ಬಳಕೆಯನ್ನು ಯೋಜಿಸಿದರೆ ಯಾವುದೇ ತೊಂದರೆ ಎದುರಾಗುವುದಿಲ್ಲ.