ಮಂಗಳೂರು: ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಆಸಕ್ತ ರೈತರಿಗೆ ಪಶುಪಾಲನಾ ಇಲಾಖೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಮಂಗಳೂರು ವತಿಯಿಂದ ಜೂನ್-2026ರ ಮಾಹೆಯಲ್ಲಿ ಪಶುಪಾಲನಾ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ಏರ್ಪಡಿಸಲಾಗಿದೆ.

ತರಬೇತಿ ವಿವರ:

ರೈತರಿಗೆ ಹಂದಿ ಸಾಕಾಣಿಕೆ ತರಬೇತಿ ಜೂನ್ 16 ರಿಂದ 17 ರವರೆಗೆ  ಹಾಗೂ

ಕುರಿ/ಮೇಕೆ ಸಾಕಾಣಿಕೆ ತರಬೇತಿ ಜೂನ್ 23 ರಿಂದ 24 ರವರೆಗೆ ನಡೆಯಲಿದೆ. 

ಹೆಚ್ಚಿನ ಮಾಹಿತಿಗೆ ಆಸಕ್ತ ರೈತ ಬಾಂಧವರು  ಮಂಗಳೂರು ತಾಲೂಕು – 9243306956/ 0824-2950369, ಉಳ್ಳಾಲ ತಾಲೂಕು – 9880424077, ಮುಲ್ಕಿ ತಾಲೂಕು – 8971024282, ಮೂಡಬಿದ್ರೆ ತಾಲೂಕು – 7204271943, ಬಂಟ್ವಾಳ ತಾಲೂಕು – 9448253010, ಬೆಳ್ತಂಗಡಿ ತಾಲೂಕು – 9481963820, ಪುತ್ತೂರು ತಾಲೂಕು – 9483920208, ಕಡಬ ತಾಲೂಕು – 9483922594, ಸುಳ್ಯ ತಾಲೂಕು – 9844995078 ದೂರವಾಣಿ ಸಂಖ್ಯೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.