ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆ: ಜೈಪುರದ ಮಹಾರಾಣಿಗೆ ಉಪಮುಖ್ಯಮಂತ್ರಿ ಪಟ್ಟ
ಜೈಪುರ: ಭಾರತೀಯ ಜನತಾ ಪಕ್ಷವು ಮಂಗಳವಾರ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಸಂಗನೇರ್ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾದ ಭಜನ್ ಲಾಲ್ ಶರ್ಮಾ ಅವರನ್ನು ಆಯ್ಕೆ ಮಾಡಿದೆ. ಭಜನ್ ಲಾಲ್ ಶರ್ಮಾ ಅವರನ್ನು ನೂತನ ಸಿಎಂ ಆಗಿ ನೇಮಕ ಮಾಡುವುದರ ಜೊತೆಗೆ ಜೈಪುರದ ಮಹಾರಾಣಿ ದಿಯಾ ಕುಮಾರಿ ಮತ್ತು ಪ್ರೇಮ್ ಚಂದ್ ಬೈರ್ವಾ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಗಳನ್ನಾಗಿ ಘೋಷಿಸಿದೆ. ಭಜನ್‌ಲಾಲ್ ಶರ್ಮಾ ಮೂಲತಃ ಭರತ್‌ಪುರದವರು. ದೀರ್ಘಕಾಲದಿಂದ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಜೈಪುರದ ಸಂಗನೇರ್‌ನಿಂದ ಬಿಜೆಪಿ ಅವರನ್ನು ಮೊದಲ ಬಾರಿಗೆ ಕಣಕ್ಕಿಳಿಸಿತ್ತು. […]
ಛತ್ತೀಸ್‌ಗಢದ ಮೊದಲ ಬುಡಕಟ್ಟು ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಆಯ್ಕೆ: ಮಧ್ಯಪ್ರದೇಶ ಹಾಗೂ ರಾಜಸ್ಥಾನ ಮು.ಮಂ. ಘೋಷಣೆ ಶೀಘ್ರ
ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ವೀಕ್ಷಕರು ಮಧ್ಯಪ್ರದೇಶದ ಭೋಪಾಲ್‌ಗೆ ತಲುಪಿದ್ದು, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿನ ನಂತರ ರಾಜ್ಯಕ್ಕೆ ಮುಖ್ಯಮಂತ್ರಿ ಹೆಸರನ್ನು ನಿರ್ಧರಿಸಲು ಸಭೆ ನಡೆಯಲಿದೆ. ರಾಜಸ್ಥಾನ ಸಿಎಂ ಬಗ್ಗೆಯೂ ಕುತೂಹಲ ಮುಂದುವರಿದಿದ್ದು, ನಾಳೆ ಬಿಜೆಪಿ ಸಭೆ ನಡೆಯಲಿದೆ. ಮಧ್ಯಪ್ರದೇಶದ ಬಿಜೆಪಿ ವೀಕ್ಷಕರು, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಮತ್ತು ಬಿಜೆಪಿ ಸಂಸದ ಕೆ ಲಕ್ಷ್ಮಣ್ ಅವರು ಭೋಪಾಲ್‌ನಲ್ಲಿರುವ ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸಿದರು. ಅವರನ್ನು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಬರಮಾಡಿಕೊಂಡರು. ರಕ್ಷಣಾ ಸಚಿವ […]
ಸದನದಲ್ಲಿ ಹಿಂದಿನ ವರ್ಷದ ಬಜೆಟ್ ಓದಿದ ಅಶೋಕ್ ಗೆಹ್ಲೋಟ್: ಬಜೆಟ್ ಮೊದಲೆ ಸೋರಿಕೆಯಾಗಿದೆಯೆ ಎಂದ ಪ್ರತಿಪಕ್ಷ
ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶುಕ್ರವಾರದಂದು ಸದನದಲ್ಲಿ ಹಳೆ ಬಜೆಟ್ ಅನ್ನು ಏಳು ನಿಮಿಷಗಳ ಕಾಲ ಓದಿದ್ದು, ಆ ಬಳಿಕ ಮುಖ್ಯ ಸಚೇತಕ ಅವರನ್ನು ಎಚ್ಚರಿಸಿದ್ದು, ತಪ್ಪಿನ ಅರಿವಾಗಿ ಸದನದ ಕ್ಷಮೆ ಕೇಳಿದ್ದಾರೆ. ಗೆಹ್ಲೋಟ್ ಸರಕಾರದಿಂದ ಪ್ರಮಾದವಾಗಿದೆ, ಬಜೆಟ್ ಕೂಡಾ ಇತರ ಪೇಪರ್ ಗಳಂತೆ ಮೊದಲೇ ಸೋರಿಕೆ ಆಗಿದೆ ಎಂದು ಪ್ರತಿಪಕ್ಷಗಳು ಸರಕಾರವನ್ನು ಮುಜುಗರಕ್ಕೆ ಸಿಲುಕಿವೆ ಮಾತ್ರವಲ್ಲ, ಸದನದಲ್ಲಿ ಗದ್ದಲ ಸೃಷ್ಟಿಸಿವಿಧಾನಸಭೆಯ ಬಾವಿಯಲ್ಲಿ ಕುಳಿತು ಸದನವನ್ನು 30 ನಿಮಿಷಗಳ ಕಾಲ ಮುಂದೂಡುವಂತೆ ಮಾಡಿದೆ. ಈ […]
ಕನ್ಹಯ್ಯ ಲಾಲ್ ತೇಲಿ ಹತ್ಯೆ ಪ್ರಕರಣ: 11 ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ ಎನ್‌ಐಎ
ನವದೆಹಲಿ: ಈ ವರ್ಷ ಜೂನ್ 28 ರಂದು ಇಬ್ಬರು ಭಯೋತ್ಪಾದಕರಿಂದ ಕನ್ಹಯ್ಯ ಲಾಲ್ ತೇಲಿ ಎಂಬ ಟೈಲರ್ ನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಗುರುವಾರ ರಾಜಸ್ಥಾನದ ಜೈಪುರದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ (ಆರ್‌ಸಿ-27/2022/ಎನ್‌ಐಎ/ಡಿಎಲ್‌ಐ) ಸಲ್ಲಿಸಿದೆ. ರಿಯಾಜ್ ಅಟ್ಟಾರಿ ಮತ್ತು ಗೋಸ್ ಮೊಹಮ್ಮದ್ ಎನ್ನುವ ಆರೋಪಿಗಳು ದೇಶಾದ್ಯಂತ ಜನಸಾಮಾನ್ಯರಲ್ಲಿ ಭಯ ಮತ್ತು ಆತಂಕವನ್ನು ಸೃಷ್ಟಿಸಲು ಸಾಮಾಜಿಕ ಮಾಧ್ಯಮದಲ್ಲಿ ಹತ್ಯೆಯ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ ಎಂದು ಸಂಸ್ಥೆ ಹೇಳಿದೆ. ಭಯೋತ್ಪಾದಕ […]
ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್ ನ 82 ಶಾಸಕರ ರಾಜೀನಾಮೆಯಿಂದ ಅಧ್ಯಕ್ಷರಿಗೆ ಇಕ್ಕಟ್ಟು
ಜೈಪುರ: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ನಿಷ್ಠರಾಗಿರುವ 82 ಶಾಸಕರು ಭಾನುವಾರ ರಾತ್ರಿ ರಾಜ್ಯ ವಿಧಾನಸಭೆಗೆ ರಾಜೀನಾಮೆ ನೀಡಿದ ನಂತರ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಸ್ಫೋಟಗೊಂಡಿದೆ. ಜುಲೈ 2020 ರಲ್ಲಿ ಗೆಹ್ಲೋಟ್ ಸರ್ಕಾರದ ವಿರುದ್ಧ ಬಂಡಾಯವೆದ್ದವರಿಂದ ಹೊಸ ರಾಜಸ್ಥಾನ ಮುಖ್ಯಮಂತ್ರಿ ನೇಮಕವನ್ನು ಇತರ ಶಾಸಕರು ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಅಶೋಕ್ ಗೆಹ್ಲೋಟ್ ಗೆದ್ದರೆ ಸಚಿನ್ ಪೈಲಟ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಊಹಾಪೋಹದ ನಂತರ ಈ ಬೆಳವಣಿಗೆ ಕಂಡುಬಂದಿದೆ. ಏತನ್ಮಧ್ಯೆ, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ […]