ಮೋದಿ ಮಂಗಳೂರು ಮೂಲದ ಸಂಸ್ಥೆಗಳನ್ನ ದಿವಾಳಿ ಎಬ್ಬಿಸಿದ್ದಾರೆ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಕುಮಾರಸ್ವಾಮಿ

ಉಡುಪಿ: ಉಡುಪಿ ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ಇಂದು ಉಡುಪಿಗೆ ಬಂದಿದ್ದ ಸಿಎಂ ಕುಮಾರಸ್ವಾಮಿ, ಕೇಂದ್ರ ಬಿಜೆಪಿ ಸರಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು. ಮಂಡ್ಯ ರಾಜಕೀಯ ಕುರಿತು ಪ್ರತಿಕ್ರಿಯಿಸಿದ ಎಚ್ ಡಿಕೆ, ಮಂಡ್ಯದಲ್ಲಿ ನಮ್ಮನ್ನು ಮುಗಿಸಲು ಮೊದಲೇ ಪ್ಲಾನ್ ಆಗಿತ್ತು ಎಂದು ಹೇಳಿದರು. ಬಿಜೆಪಿ ಪ್ರಚಾರಕ್ಕೆ ಮೋದಿಯೇ ಮುಖ. ಮೋದಿ ಇಲ್ಲಾಂದ್ರೆ ದೇಶಕ್ಕೆ ರಕ್ಷಣೆ ಇಲ್ಲ ಅಂತ ಬಿಂಬಿಸಲಾಗ್ತಿದೆ ಎಂದು ಹೇಳಿದರು. ಕರಾವಳಿಯ ಮೂರು ಜಿಲ್ಲೆಗಳ ಜನರು ತಿಳುವಳಿಕೆ ಉಳ್ಳವರು, ಪ್ರಜ್ಞಾವಂತರು ತಿಳುವಳಿಕ ಇರುವ […]
ರಾಜ್ಯದಲ್ಲಿಯೂ ಈ ಬಾರಿ ಮೋದಿ ಅಲೆಯಿಲ್ಲ. ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಕೊಡುಗೆ ಇಲ್ಲ: ಸಿಎಂ ಕುಮಾರಸ್ವಾಮಿ

ಕುಂದಾಪುರ: ಕರಾವಳಿಯಲ್ಲಷ್ಟೆ ಅಲ್ಲ. ರಾಜ್ಯದಲ್ಲಿಯೂ ಈ ಬಾರಿ ಮೋದಿ ಅಲೆಯಿಲ್ಲ. ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಕೊಡುಗೆ ಇಲ್ಲ. ಕರಾವಳಿಯ ಮೂರು ಲೋಕಸಭಾ ಕ್ಷೇತ್ರಗಳು ಮೈತ್ರಿ ಪಾಲಾಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಬುಧವಾರ ಸಂಜೆ ಇಲ್ಲಿನ ನೆಹರೂ ಮೈದಾನದಲ್ಲಿ ಜಾತ್ಯಾತೀತ ಜನತಾ ದಳ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಮಹಿಳಾ ಮೀನುಗಾರರ ಸಮಾವೇಶಕ್ಕೆ ಆಗಮಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಅಭ್ಯರ್ಥಿಗಳಿಗೆ ತಮ್ಮ ಸಾಧನೆಗಳನ್ನು ಹೇಳಿ ಮತ ಕೇಳಲು ಆಗುತ್ತಿಲ್ಲ. […]
ಮೋದಿ ಎಂದು ಕೂಗೋಣ: ವೈರಲ್ ಸಂದೇಶಕ್ಕೆ ಸಿಡಿದೆದ್ದ ಖಾಕಿ!
ಕುಂದಾಪುರ: ಸಿಎಂ ಕುಮಾರಸ್ವಾಮಿ ಮೀನುಗಾರರ ಸಮಾವೇಶಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಮೋದಿ, ಮೋದಿ ಎಂದು ಘೋಷಣೆಗಳನ್ನು ಕೂಗೋಣ ಎಂದು ಬಿಜೆಪಿ ಕಾರ್ಯಕರ್ತರು ಎನ್ನಲಾಗಿರುವ ಯುವಕರು ವಾಟ್ಸ್ಯಾಪ್‍ನಲ್ಲಿ ಸಂದೇಶ ಹರಿಯಬಿಟ್ಟಿದ್ದಾರೆ. ವೈರಲ್ ಸಂದೇಶವನ್ನರಿತ ಕುಂದಾಪುರ ಡಿವೈಎಸ್‍ಪಿ ನೇತೃತ್ವದ ಪೊಲೀಸರ ತಂಡ ಸಂದೇಶ ಫಾರ್ವಡ್ ಮಾಡಿ ಅಹಿತಕರ ಘಟನೆಗಳಿಗೆ ಹೊಂಚು ಹಾಕುತ್ತಿರುವ ಒಂದಷ್ಟು ಮಂದಿ ಯುವಕರನ್ನು ಠಾಣೆಗೆ ಕರೆತಂದಿದ್ದಾರೆ. ಬಿಗು ಬಂದೋಬಸ್ತ್: ಸಿಎಂ ಕಾರ್ಯಕ್ರಮದಲ್ಲಿ ಯಾವುದೇ ಅಹಿಕರ ಘಟನೆಗಳು ನಡೆಯದಂತೆ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ನಾಲ್ಕು […]
ಅಭಿನಂದನ್ ಭಾರತಕ್ಕೆ ವಾಪಾಸ್ ಬಂದಿರುವುದು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಗೆಲುವು: ಶೋಭಾ ಕರಂದ್ಲಾಜೆ

ಉಡುಪಿ: ಅಭಿನಂದನ್ ವರ್ಧಮಾನ್ ಭಾರತಕ್ಕೆ ವಾಪಾಸ್ ಬಂದಿರುವುದು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಗೆಲುವು. ನಮ್ಮ ಪ್ರಧಾನಿ ಮೋದಿ ಸಿಂಹದ ಮರಿ ಆಗಿರುವುದಕ್ಕೆ ಇದೆಲ್ಲ ಸಾಧ್ಯವಾಗುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಂಗ್ ಕಮಾಂಡರ್ ಅಭಿನಂದನ್ ಅಭಿನಂದನಾರ್ಹರು. ಸಾಹಸದ ಕೆಲಸ ಮಾಡಿ ಭಾರತಕ್ಕೆ ಬರುತ್ತಿದ್ದಾರೆ. ಜಿನೀವಾ ಒಪ್ಪಂದದ ಪ್ರಕಾರ ಸೈನಿಕರಿಗೆ ಹಾನಿ ಮಾಡಬಾರದು. ಆದರೆ ಪಾಕ್ ಹಲ್ಲೆ ನಡೆಸಿ ವಿಡಿಯೋ ಬಿಡುಗಡೆ ಮಾಡಿತು. ಭಾರತ ಒತ್ತಡ ತಂದ ಪರಿಣಾಮ ಅವರ ಬಿಡುಗಡೆ […]
ಪಾಕ್ ನಮ್ಮ ಮೇಲೆ ಬಾಂಬ್ ಹಾಕುವುದು ಬಿಡಿ, ಎರಡು ಟೊಮೆಟೋ ಕೂಡಾ ಅವರಿಗೆ ಸಿಗದ ಸ್ಥಿತಿ ಬಂದಿದೆ: ಚಕ್ರವರ್ತಿ ಸೂಲಿಬೆಲೆ

ಭಾರತವು ಪಾಕಿಸ್ತಾನದ ಜೊತೆ ನೇರ ಯುದ್ಧ ಮಾಡಬೇಕಾದ ಅಗತ್ಯ ಇಲ್ಲ. ಬೇರೆ ಬೇರೆ ಕಾರಣಗಳಿಂದ ಪಾಕ್ ಅನ್ನು ಕುಗ್ಗಿಸಬಹುದು. ಈಗಾಗಲೇ ರೈತರು ಪಾಕ್ ಗೆ ಟೊಮೆಟೋ ರಪ್ತು ನಿಲ್ಲಿಸಿ ತಮ್ಮ ದೇಶ ಪ್ರೇಮ ಮೆರೆದಿದ್ದಾರೆ. ಪಾಕ್ ನಮ್ಮ ಮೇಲೆ ಬಾಂಬ್ ಹಾಕುವುದು ಬಿಡಿ ಎರಡು ಟೊಮೆಟೋ ಕೂಡಾ ಅವರಿಗೆ ಸಿಗದ ಸ್ಥಿತಿ ಬಂದಿದೆ ಎಂದು ಟೀಮ್ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಕುಂದಾಪುರದ ಕುಂದೇಶ್ವರ ಮುಖ್ಯದ್ವಾರದ ಎದುರು ಸೋಮವಾರ ಸಂಜೆ ಟೀಮ್ ಮೋದಿ ಕುಂದಾಪುರ ವತಿಯಿಂದ ನಡೆದ […]