ಕೊರೋನಾ ಮಣಿಸಲು ಲಸಿಕೆಯೊಂದೆ ಪರಿಹಾರ: ನರೇಂದ್ರ ಮೋದಿ

ದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ, ನಾಲ್ಕನೇ ಅಲೆ ಶುರುವಾಗಿರುವ ಭೀತಿ ಶುರುವಾಗಿದೆ. ಈ ನಿಟ್ಟಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆದಿದ್ದು, ವೀಡಿಯೋ ಕಾನ್ಪರೆನ್ಸ್ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ದೇಶದಲ್ಲಿ ಕೊರೋನಾ ಸಂಕಟ ಇನ್ನೂ ತಗ್ಗಿಲ್ಲ, ಕೊರೋನಾ ಮಣಿಸಲು ಇರುವ ಒಂದೇ ದಾರಿಯೆಂದರೆ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳುವುದು ಎಂದರು. ರಾಜ್ಯ ಮತ್ತು ಕೇಂದ್ರ ಸರಕಾರಗಳು ಜೊತೆಗೂಡಿ ಕೊರೋನಾ ಜೊತೆ ಹೋರಾಡಬೇಕು. ಹೆಚ್ಚುತ್ತಿರುವ ಕೊರೋನಾ ಕೇಸ್ ಗಳ […]
ಕೊರೊನಾ ನಾಲ್ಕನೇ ಅಲೆ ಆತಂಕ: ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಕುರಿತು ವಿಶೇಷ ಸಭೆ

ಬೆಂಗಳೂರು: ದೇಶದಲ್ಲಿ ಕೊರೊನಾ ನಾಲ್ಕನೇ ಅಲೆಯ ಆತಂಕ ಮತ್ತೆ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಜಾಗೃತಿ ವಹಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಕೇರಳ ಸೇರಿದಂತೆ ಅನೇಕ ಭಾಗಗಳಲ್ಲಿ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 27ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆಯನ್ನು ನೀಡಲಿದ್ದಾರೆ, ಆ ಬಳಿಕ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ. ಇಂದು ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಧ್ಯಾಹ್ನ 12.30 ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ಕುರಿತಂತೆ […]
ಉದ್ಯೋಗ ಮಾಡಲು ಸಾಮರ್ಥ್ಯ ಇಲ್ಲದ ಸಿಬ್ಬಂದಿಗೆ ಕಡ್ಡಾಯ ನಿವೃತ್ತಿ:ಕೇಂದ್ರದ ನಿಯಮ

ನವದೆಹಲಿ: ತಮ್ಮ ಉದ್ಯೋಗವನ್ನು ಮಾಡಲು ಸಾಮರ್ಥ್ಯ ಇಲ್ಲದ ಸರಕಾರಿ ಉದ್ಯೋಗಿಗಳ ಸೇವೆ ಕೊನೆಗೊಳಿಸಲು ಕೇಂದ್ರ ಸರಕಾರ ಹೊಸ ನಿಯಮ ತರಲು ಸಿದ್ದತೆ ನಡೆಸಿದೆ . ಕಳೆದ ತಿಂಗಳು ತೆರಿಗೆ ಇಲಾಖೆಯ ಪ್ರಿನ್ಸಿಪಾಲ್ ಹಾಗೂ ಚೀಫ್ ಕಮಿಷನರ್ ಗಳನ್ನು ಕಡ್ಡಾಯವಾಗಿ ನಿವೃತ್ತಿ ಪಡೆಯುವಂತೆ ಮಾಡಲಾಯಿತು. ಆದರಲ್ಲಿ ಹಲವರ ವಿರುದ್ಧ ದೂರುಗಳು ಹಾಗೂ ಭ್ರಷ್ಟಾಚಾರದ ಪ್ರಕರಣಗಳು ಬಾಕಿ ಇವೆ. ಒಂದು ಪ್ರಕರಣದಲ್ಲಿ ಸೇವೆಯಿಂದ ನಿವೃತ್ತರಾದ ತೆರಿಗೆ ಅಧಿಕಾರಿ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ. ವರದಿ ಸಲ್ಲಿಸಲು ಆದೇಶ: 12 ಐಟಿ […]
ಮೋದಿ ಸಂಪುಟದಲ್ಲಿ ಮೂವರಿಗೆ ಸ್ಥಾನ, ಸದಾನಂದ ಗೌಡ ,ಸುರೇಶ್ ಅಂಗಡಿ , ಪ್ರಹ್ಲಾದ್ ಜೋಷಿ ಸಂಪುಟಕ್ಕೆ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ 2 ಸರಕಾರ ಗುರುವಾರ ಮೇ.೩೦ರಂದು ರಚನೆಯಾಗಲಿದ್ದು, ರಾಜ್ಯದ ಮೂವರಿಗೆ ಸಚಿವ ಸ್ಥಾನ ದೊರೆಯಲಿದೆ. ರಾಷ್ಟ್ರಪತಿ ಭವನದಲ್ಲಿ ಸಂಜೆ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ನರೇಂದ್ರ ಮೋದಿಯಾಗಿ ಸರ್ಕಾರದ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯದ 25 ಮಂದಿ ಬಿಜೆಪಿ ಸಂಸದರ ಪೈಕಿ ಹಾಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಮತ್ತೆ ಸಚಿವ ಸ್ಥಾನ ದೊರೆಯಲಿದೆ. ಹಾಗೆಯೇ ಬೆಳಗಾವಿ ಸಂಸದ ಸುರೇಶ್ ಅಂಗಡಿ ಹಾಗೂ ಹುಬ್ಬಳ್ಳಿ -ಧಾರಾವಾಡ ಕ್ಷೇತ್ರದ ಸಂಸದ, […]
ಕಾಂಗ್ರೆಸ್ ನದ್ದು ಪಾಕ್ ಪ್ರಧಾನಿ ಪ್ರಚೋದಿತ ಪ್ರಣಾಳಿಕೆ: ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ಗಂಭೀರ ಆರೋಪ

ಉಡುಪಿ: ಕಾಂಗ್ರೆಸ್ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿ ಕಾಲಂ 124ಎ ದೇಶದ್ರೋಹ ನಿಷೇಧ ಕಾಯ್ದೆಯನ್ನು ಸಂವಿಧಾನದಿಂದ ತೆಗೆದುಹಾಕುತ್ತೇವೆ. ಜಮ್ಮು–ಕಾಶ್ಮೀರದ ಸೈನಿಕರಿಗೆ ಕೊಟ್ಟಿರುವ ಸ್ವತಂತ್ರ ಅಧಿಕಾರವನ್ನು ಹಿಂಪಡೆಯುತ್ತೇವೆಂದು ಆಶ್ವಾಸನೆ ನೀಡಿದ್ದಾರೆ. ಇದನ್ನು ಗಮನಿಸಿದರೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಡಿದ್ದಾರ ಅಥವಾ ಭಯೋತ್ಪಾದಕರು ಮಾಡಿಕೊಟ್ಟಿದ್ದಾರ ಎಂಬ ಸಂಶಯ ಮೂಡುತ್ತಿದೆ. ಕಾಂಗ್ರೆಸ್ ನಮ್ಮ ದೇಶವನ್ನು ಬಲಿಕೊಡಲು ಹೊರಟಿದೆ. ಕಾಶ್ಮೀರ ಭಾಗವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡುವ ಪಿತೂರಿ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಆರೋಪಿಸಿದರು. ಉಡುಪಿ ಬಿಜೆಪಿ ಕಚೇರಿಯಲ್ಲಿ ಸೋಮವಾರ […]