ಮೋದಿ ಮಂಗಳೂರು ಮೂಲದ ಸಂಸ್ಥೆಗಳನ್ನ ದಿವಾಳಿ ಎಬ್ಬಿಸಿದ್ದಾರೆ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಕುಮಾರಸ್ವಾಮಿ

ಉಡುಪಿ: ಉಡುಪಿ ಚಿಕ್ಕಮಗಳೂರು ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ಇಂದು ಉಡುಪಿಗೆ ಬಂದಿದ್ದ ಸಿಎಂ ಕುಮಾರಸ್ವಾಮಿ, ಕೇಂದ್ರ ಬಿಜೆಪಿ ಸರಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು. 
ಮಂಡ್ಯ ರಾಜಕೀಯ ಕುರಿತು ಪ್ರತಿಕ್ರಿಯಿಸಿದ ಎಚ್ ಡಿಕೆ, ಮಂಡ್ಯದಲ್ಲಿ ನಮ್ಮನ್ನು ಮುಗಿಸಲು ಮೊದಲೇ ಪ್ಲಾನ್ ಆಗಿತ್ತು  ಎಂದು ಹೇಳಿದರು. ಬಿಜೆಪಿ ಪ್ರಚಾರಕ್ಕೆ ಮೋದಿಯೇ ಮುಖ. ಮೋದಿ ಇಲ್ಲಾಂದ್ರೆ ದೇಶಕ್ಕೆ ರಕ್ಷಣೆ ಇಲ್ಲ ಅಂತ ಬಿಂಬಿಸಲಾಗ್ತಿದೆ ಎಂದು ಹೇಳಿದರು.
ಕರಾವಳಿಯ ಮೂರು ಜಿಲ್ಲೆಗಳ ಜನರು ತಿಳುವಳಿಕೆ ಉಳ್ಳವರು, ಪ್ರಜ್ಞಾವಂತರು ತಿಳುವಳಿಕ ಇರುವ ಜನರು ಯಾಕೆ ಬಿಜೆಪಿಯನ್ನು ಬೆಂಬಲಿಸ್ತೀರಿ ಎಂದು ಕೇಳಿದ ಅವರು, ಇತ್ತೀಚೆಗೆ ಒಂದು ಶೋಕಿ ಆರಂಭ ಆಗಿದೆ. ಯುವಕರು ರಸ್ತೆಯಲ್ಲಿ ಮೋದಿ ಮೋದಿ ಅಂತಾರೆ. ಹಾಗೆ ಘೊಷಣೆ ಕೂಗುವ ಹುಡುಗರಿಗೆ ಮೋದಿ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು.
ನಾನು ಕರಾವಳಿ ಜನರ ಬಗ್ಗೆ ಯಾವತ್ತೂ ಲಘುವಾಗಿ ಮಾತಾಡಿಲ್ಲ. ಊರಿಗೆ ಶಾಲೆ ಬೇಕು ಅಂದ್ರೆ ಕುಮಾರಸ್ವಾಮಿ ಬೇಕು. ಆದರೆ ಯುವಕರು ಮೋದಿಗೆ ವೋಟ್ ಹಾಕ್ತೀವಿ ಅಂತಾರೆ.
ನಾನು ಹೀಗೆ ಕೇಳಿದ್ರೆ ಏನು ತಪ್ಪು? ಮೋದಿ ಒಬ್ರೇ ದೇಶ ರಕ್ಷಣೆ ಮಾಡಬಲ್ಲರು ಅಂತೀರಲ್ವಾ. ಹಾಗಾದರೆ ವಾಜಪೇಯಿ ಈ ರಾಷ್ಡ್ರಕ್ಕೆ ಭದ್ರತೆ ಕೊಟ್ಟಿಲ್ವಾ?. ಮೋದಿ ಮಂಗಳೂರು ಮೂಲದ ಸಂಸ್ಥೆಗಳನ್ನ ದಿವಾಳಿ ಎಬ್ಬಿಸಿದ್ದಾರೆ.
ವಿಜಯಾ ಬ್ಯಾಂಕ್ ಗುಜರಾಥ್ ನ ಬರೋಡಾ ಬ್ಯಾಂಕ್ ಗೆ ವಿಲೀನ ಮಾಡಿದ್ರು. ವಿಜಯ ಬ್ಯಾಂಕ್ ಉಳಿವಿಗೆ ದೇವೇಗೌಡರು ಕೊಡುಗೆ ಕೊಟ್ಟಿದ್ದಾರೆ ಎಂದರು.
ಪುಲ್ವಾಮಾ ದಾಳಿ ಮೊದಲೇ ಗೊತ್ತಿತ್ತು ಎಂದು ನಾನು ಹೇಳಿಯೇ ಇಲ್ಲ. ಪುಲ್ವಾಮಾ ಹೆಸರನ್ನೇ ನಾನು ಹೇಳಿರಲಿಲ್ಲ. ಎರಡು ವರ್ಷದ ಹಿಂದೆ ನಿವೃತ್ತ ಅಧಿಕಾರಿಯೊಬ್ರು ಹೇಳಿದ್ರು. ಚುನಾವಣೆ ವೇಳೆ ಯುದ್ದದ ವಾತಾವರಣ ಬರುತ್ತೆ ಅಂದಿದ್ರು. ಅದ್ದನ್ನಷ್ಟೇ ನಾನು ಹೇಳಿದ್ದೆ. ಅಂತಹಾ ವಿವಾದಾಸ್ಪದ ಹೇಳಿಕೆಗೆ ನನ್ನ ಸಹಮತವಿಲ್ಲ ಎಂದರು.
 
ನಾನು ಯಾವ ಬಾಂಬೂ ಹಾಕಿಲ್ಲ:
ಬಾಂಬ್ ಹಾಕುವ ಕೆಲಸ ಬಿಜೆಪಿಗೆ ಬಿಟ್ಟಿದ್ದೇವೆ. ಅದು ನಮ್ಮ ಸಂಸ್ಕೃತಿ ಅಲ್ಲ. ಹಿಂದೆ ಇಂದಿರಾಗಾಂಧಿ ದೇಶದ ರಕ್ಷಣೆ ಮಾಡಿಲ್ವಾ?. ಲಾಲ್ ಬಹದ್ದೂರ್ ಶಾಸ್ತ್ರಿ ಜೈ ಜವಾನ್ ಜೈ ಕಿಸಾನ್ ಅಂದ್ರು. ಈ ರೀತಿಯ ಘೋಷಣೆ ಮಾಡಿದ ಪ್ರಧಾನಿ ಅವರೊಬ್ರೇ ಆದರೆ ನಾವೇ ಹೋಗಿ ಬಾಂಬ್ ಹಾಕಿದ್ದೇವೆ ಅಂದಿಲ್ಲ.
ಈ ದೇಶದ ರಕ್ಷಣೆ ಮಾಡೋದು ಸೈನ್ಯದ ಮುಖ್ಯಸ್ಥರು. ಅವರನ್ನು ದುರುಪಯೋಗ ಪಡಿಸಿಕೊಂಡು ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಸೈನ್ಯ ನಿರ್ವಹಣೆ ಮಾಡೋದು ಪ್ರಧಾನಿ ಅಲ್ಲ, ರಾಷ್ಡ್ರಪತಿ. ಮೋದಿ ಬೆಳಗ್ಗೆ ಹೊರಡುವಾಗ ವ್ಯಾಕ್ಸ್ ಮಾಇಕೊಂಡು ಹೊರಡ್ತಾರೆ. ಅವರ ಪಳಪಳ ಹೊಳೆಯುವ ಮುಖ ನಿಮಗೆ ಇಷ್ಟವಾಗುತ್ತೆ. ನಾವು ಇವತ್ತು ಮುಖ ತೊಳೆದ್ರೆ ಮತ್ತೆ ನಾಳೆನೇ ತೊಳೆಯುದು. ಅದು ನಿಮಗೆ ಇಷ್ಟ ಆಗ್ವಲ್ವಾ??? ಎಂದು ಮೋದಿಯವರನ್ನು ಛೇಡಿಸಿದರು.
 
ಜೆಡಿಎಸ್ ಕುತಂತ್ರ ಮಾಡುತ್ತಿಲ್ಲ:
ಮಂಡ್ಯದಲ್ಲಿ ನಾನು ನಮ್ಮ ಜೆಡಿಎಸ್ ಕಾರ್ಯಕರ್ತರ ಮೇಲೆ ಡಿಪೆಂಡ್ ಆಗಿದ್ದೇನೆ. ಯಾರು ಯಾರು ಏನೇನ್ ಮಾಡ್ತಾರೆ ಗೊತ್ತಿದೆ ಮೂರು ತಿಂಗಳ ಹಿಂದೆಯಿಂದ ಎಲ್ಲವೂ ನಡೆಯುತ್ತಿರೋದು ಗೊತ್ತಿದೆ. ಅಂಬರೀಶ್ ದೇಹಕ್ಕೆ ಅಗ್ನಿ ಸ್ಪರ್ಶ ಆದಕೂಡಲೇ ರಾಜಕೀಯ ಆರಂಭವಾಗಿದೆ. ಮಂಡ್ಯದಲ್ಲಿ ಜೆಡಿಎಸ್ ನಿರ್ಣಾಮ ಮಾಡಲು ಎಲ್ಲರೂ ಹೊರಟಿದ್ದಾರೆ. ನಾನು ಚೆಲುವರಾಯ ಸ್ವಾಮಿ ಬಗ್ಗೆ ಮಾತೇ ಆಡಿಲ್ಲ ಬೆನ್ನಿಗೆ ಚೂರಿ ಹಾಕುವವರ ಬಗ್ಗೆ ಮಾತನಾಡಿದ್ದೆ, ನಾನು ಚೆಲುವರಾಯಸ್ವಾಮಿ ಬೆನ್ನಿಗೆ ಚೂರಿ ಹಾಕುತ್ತಾರೆ ಅಂದಿಲ್ಲ, ನನ್ನ 8 ಶಾಸಕರನ್ನು ಹಾಗೂ ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ.
ನಿಖಿಲ್ ಸೋಲಿಸಿ ನನ್ನನ್ನು ಮುಗಿಸಲು ಎಲ್ಲಾ ಪ್ರಯತ್ನ ನಡೆದಿದೆ. ನಾನು ಮಂಡ್ಯಕ್ಕೆ ಹೋಗಿ 6 ದಿನ ಆಯ್ತು ಜೆಡಿಎಸ್ ಕುತಂತ್ರ ಮಾಡುತ್ತಿಲ್ಲ, ಕುತಂತ್ರ ಮಾಡುತ್ತಿರುವವರು ಅವರು ಮಂಡ್ಯದಲ್ಲಿ ಸ್ಟ್ರಾಟಜಿ ಮಾಡಿ ಚುನಾವಣೆ ಮಾಡುವ ಅಗತ್ಯ ಇಲ್ಲ. ಮಂಡ್ಯ ಜಿಲ್ಲೆ ನಮ್ಮ ಹೃದಯ ಇದ್ದಂತೆ ಮಂಡ್ಯದ ನಾಡಿಮಿಡಿತ ನಮಗೆ ಗೊತ್ತಿದೆ. ಯಾರ ಡ್ರಾಮನೂ ಮಂಡ್ಯದಲ್ಲಿ ನಡೆಯೋದಿಲ್ಲ ಎಂದರು.
 
ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುತ್ತಾರೆ:
ಮೈಸೂರಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುತ್ತಾರೆ, ಮೈಸೂರು ಹಿನ್ನಡೆಯಾಗಲು ನಾನು ಬಿಡಲ್ಲ ರಾಜ್ಯದಲ್ಲಿ ಎಲ್ಲೂ ಗೊಂದಲವಾಗಲು ಬಿಡಲ್ಲ, ಗೊಂದಲ ಬಗೆಹರಿಸಿ ಗೆಲ್ಲುವುದು ನನ್ನ ಜವಾಬ್ದಾರಿ, ನಾವು ಎಲ್ಲಾ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.