ಸ್ವಾವಲಂಬನೆಗಾಗಿ ಖಾದಿ-ಕೈಮಗ್ಗ ವಸ್ತ್ರಗಳನ್ನೇ ಹೆಚ್ಚಾಗಿ ಬಳಸಿ: ಅನೀಲ್ ಹೆಗ್ಡೆ ಕರೆ

ಕಿನ್ನಿಗೋಳಿ: ಎಪ್ಪತ್ತೈದನೇ ಸ್ವಾತಂತ್ರೋತ್ಸವದ ಸಂಭ್ರಮದೊಂದಿಗೆ ದ. ಕನ್ನಡ ಮತ್ತು ಉಡುಪಿ ಜಿಲ್ಲೆಯ ನೇಕಾರರಿಗಾಗಿ ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ರಾಜ್ಯ ಸಭಾ ಸದಸ್ಯ ಅನೀಲ್ ಹೆಗ್ಡೆ‌ ಮತ್ತು ಕದಿಕೆ ಟ್ರಸ್ಟ್ ಇವರ ನಬಾರ್ಡ್ ಬೆಂಬಲದೊಂದಿಗೆ ಕೈ ಮಗ್ಗ ಸಪ್ತಾಹ ದಿನಾಚರಣೆ ಆಚರಿಸಲಾಯಿತು. ಖುದ್ದು ಖಾದಿ ಪ್ರಚಾರಕರಾಗಿರುವ ಅನೀಲ್ ಹೆಗ್ಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಸ್ವಾವಲಂಬನೆಗಾಗಿ ಖಾದಿ, ಕೈಮಗ್ಗ ವಸ್ತ್ರಗಳನ್ನೇ ಹೆಚ್ಚಾಗಿ ಬಳಸಿ ಎಂದು ಕರೆ ಕೊಟ್ಟರು. ಈ ಸಂದರ್ಭದಲ್ಲಿ ನಡೆದ ಹಿರಿಯ ನೇಕಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ತಾಳಿಪಾಡಿ ನೇಕಾರ […]

ಕಿನ್ನಿಗೋಳಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ವಾರ್ಷಿಕೋತ್ಸವ ಸಮಾರಂಭ

ಕಿನ್ನಿಗೋಳಿ: ನಾವು ಹಿಂದೂಗಳಾಗಿ ಒಗ್ಗಟ್ಟಾದಾಗ ಮಾತ್ರ ಸಶಕ್ತ ಸಮಾಜದ ಏಳಿಗೆ ಸಾಧ್ಯ. ನಮ್ಮೊಳಗಿನ ಜಾತಿ – ಪಂಗಂಡಗಳು ಸಾಮೂಹಿಕ ಪ್ರಗತಿಗೆ ತೊಡಕಾಗಬಾರದು ಎಂದು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಹೇಳಿದರು. ಅವರು ಕಿನ್ನಿಗೋಳಿ ರಾಜರತ್ನಪುರ ಸರಾಫ್ ಅಣ್ಣಯ್ಯಾಚಾರ್ಯ ಸಭಾ ಭವನದಲ್ಲಿ ಕಿನ್ನಿಗೋಳಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಭಾಶಂಸನೆ ನೀಡಿ ಮಾತನಾಡಿದರು. ಆನೆಗುಂದಿ ವೇದ ಪಾಠಶಾಲೆಯ ಪವನ್ ಶರ್ಮ್ ಅನುಗ್ರಹ […]

ಕ್ರಿಶ್ಚಿಯನ್ ರೈತರೋರ್ವರಿಗೆ ಕೃಪೆ ತೋರಿದ  ನಾಗದೇವ..!  ಕಿನ್ನಿಗೋಳಿಯಲ್ಲೊಂದು ಅಚ್ಚರಿಯ ಘಟನೆ

ಮಂಗಳೂರು: ನೀರಿಲ್ಲದೆ ಒಣಗಿ ಹೋಗಿದ್ದ ಕ್ರಿಶ್ಚಿಯನ್ ರೈತರೋರ್ವರ ಕೃಷಿ ತೋಟಕ್ಕೆ ನಾಗದೇವ ಕೃಪೆ ತೋರಿದ್ದಾನೆ. ಈ ಅಚ್ಚರಿಯ ಘಟನೆ ನಡೆದಿದ್ದು, ಮಂಗಳೂರು ತಾಲೂಕಿನ ಕಿನ್ನಿಗೋಳಿ ಬಳಿಯ ನಿಡ್ಡೋಡಿಯ ಗುಂಡೆಲ್ ಎಂಬಲ್ಲಿ. ಇಲ್ಲಿನ ನಿವಾಸಿ ವಿಕ್ಟರ್ ಡಿಸಿಲ್ವರ ಕೃಷಿ ತೋಟಕ್ಕೆ ಈ ಬಾರಿ ಮಳೆ ಇಲ್ಲದೆ ನೀರಿನ ಅಭಾವ ಎದುರಾಗಿತ್ತು. ಹೀಗಾಗಿ ಅವರು ಕಳೆದ ಕೆಲವು ಸಮಯದಿಂದ ತಮ್ಮ ಏಳು ಎಕರೆ ವ್ಯಾಪ್ತಿಯ ಅಡಿಕೆ ತೋಟಗಳ ಮಧ್ಯೆ ನಾಲ್ಕು ಕಡೆ ಕೊಳವೆ ಬಾವಿ ತೋಡಿಸಿದ್ದಾರೆ. ಅದರೆ ನೀರು ಸಿಕ್ಕಿರಲಿಲ್ಲ. […]

ಇತಿಹಾಸ ಪ್ರಸಿದ್ಧ ಐಕಳ ಬಾವ “ಕಾಂತಾಬಾರೆ-ಬೂದಾಬಾರೆ” ಜೋಡುಕರೆ ಕಂಬಳ ಕೂಟದ ಫಲಿತಾoಶ

ಇತಿಹಾಸ ಪ್ರಸಿದ್ಧ ಐಕಳ ಬಾವ “ಕಾಂತಾಬಾರೆ – ಬೂದಾಬಾರೆ” ಜೋಡುಕರೆ ಕಂಬಳ ಕೂಟದ ಫಲಿತಾoಶ: ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 3 ಜೊತೆ, ಅಡ್ಡಹಲಗೆ: 6 ಜೊತೆ, ಹಗ್ಗ ಹಿರಿಯ: 17 ಜೊತೆ, ನೇಗಿಲು ಹಿರಿಯ: 20 ಜೊತೆ, ಹಗ್ಗ ಕಿರಿಯ: 9 ಜೊತೆ, ನೇಗಿಲು ಕಿರಿಯ: 69 ಜೊತೆ. ಒಟ್ಟು ಕೋಣಗಳ ಸಂಖ್ಯೆ: 124 ಜೊತೆ ಕನೆಹಲಗೆ: ಬೇಲಾಡಿ ಬಾವ ಅಶೋಕ್ ಶೆಟ್ಟಿ, ಓಡಿಸಿದವರು: ನಾರಾವಿ ಯುವರಾಜ ಜೈನ್ (6.5 ಕೋಲು ನಿಶಾನೆಗೆ ನೀರು […]

ಜ.26 ರಿಂದ ಐಕಳ ಕಾಂತಾಬಾರೆ– ಬೂದಾಬಾರೆ ಕಂಬಳ್ಳೋತ್ಸವ

ಕಿನ್ನಿಗೋಳಿ: ಐಕಳಬಾವ ಕಾಂತಾಬಾರೆ ಬೂದಾಬಾರೆ ಜೋಡುಕರೆ ಕಂಬಳೋತ್ಸವ ಶನಿವಾರ ಬೆಳಿಗ್ಗೆ 11ಕ್ಕೆ ಐಕಳ ಮಂಜೊಟ್ಟಿ ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು. ಅಂತರರಾಷ್ಟ್ರೀಯ ವಾಸ್ತು ಜೋತಿಷಿ ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಲಿದ್ದು, ₹20 ಲಕ್ಷ ಅನುದಾನದ ಪ್ರೇಕ್ಷಕ ಗ್ಯಾಲರಿಗೆ ಸಂಸದ ನಳಿನ್‌ಕುಮಾರ್ ಕಟೀಲ್‌ ಭೂಮಿಪೂಜೆ ನೆರವೇರಿಸುವರು. ಕಂಬಳ ಕರೆಗಳನ್ನು ಯುಪಿಸಿಎಲ್‌ ಅದಾನಿ ಸಂಸ್ಥೆಯ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ ಉದ್ಘಾಟಿಸುವರು. ಐಕಳ ಬಾವ ಯಜಮಾನರಾದ ದೋಗಣ್ಣ ಸಿ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು. ಜನಪ್ರತಿನಿಧಿಗಳ ಸಹಿತ ಇತರ ಗಣ್ಯರು ಪಾಲ್ಗೊಳ್ಳುವರು. […]