ಕಿನ್ನಿಗೋಳಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ವಾರ್ಷಿಕೋತ್ಸವ ಸಮಾರಂಭ

ಕಿನ್ನಿಗೋಳಿ: ನಾವು ಹಿಂದೂಗಳಾಗಿ ಒಗ್ಗಟ್ಟಾದಾಗ ಮಾತ್ರ ಸಶಕ್ತ ಸಮಾಜದ ಏಳಿಗೆ ಸಾಧ್ಯ. ನಮ್ಮೊಳಗಿನ ಜಾತಿ – ಪಂಗಂಡಗಳು ಸಾಮೂಹಿಕ ಪ್ರಗತಿಗೆ ತೊಡಕಾಗಬಾರದು ಎಂದು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಹೇಳಿದರು.

ಅವರು ಕಿನ್ನಿಗೋಳಿ ರಾಜರತ್ನಪುರ ಸರಾಫ್ ಅಣ್ಣಯ್ಯಾಚಾರ್ಯ ಸಭಾ ಭವನದಲ್ಲಿ ಕಿನ್ನಿಗೋಳಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಹಾಗೂ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಭಾಶಂಸನೆ ನೀಡಿ ಮಾತನಾಡಿದರು.

ಆನೆಗುಂದಿ ವೇದ ಪಾಠಶಾಲೆಯ ಪವನ್ ಶರ್ಮ್ ಅನುಗ್ರಹ ಸಂದೇಶ ನೀಡಿ, ಭಗವಂತ ಪ್ರೀತಿ ಪಾತ್ರರಾಗಲು ಮಾನವೀಯ ಮೌಲ್ಯಗಳ ಸತ್ಕಾರ್ಯಗಳನ್ನು ನಿರ್ವಹಿಸಲೇಬೇಕು ಎಂದರು.

ಮಂಗಳೂರು ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕೆ.ಎಲ್. ಹರೀಶ್, ಉದ್ಯಮಿ ಎಂ. ಶ್ರೀನಿವಾಸ ಆಚಾರ್ಯ, ಕಿನ್ನಿಗೋಳಿ ಜಿ ಎಸ್ ಬಿ ಅಸೋಸಿಯೇಶನ್ ಅಧ್ಯಕ್ಷ ರಾಜೇಶ್ ನಾಯಕ್, ಸಂಧ್ಯಾ ಲಕ್ಷ್ಮಣ ಆಚಾರ್ಯ, ಉದ್ಯಮಿ ಸೂರ್ಯಕುಮಾರ್ ಆಚಾರ್ಯ, ಸಂಘದ ಗೌರವಾಧ್ಯಕ್ಷ ಕೆ. ಎಸ್. ಉಮೇಶ್, ಸಭಾಭವನ ಸಮಿತಿಯ ಅಧ್ಯಕ್ಷ ಎಂ. ಪ್ರಥ್ವಿರಾಜ ಆಚಾರ್ಯ ಉಪಸ್ಥಿತರಿದ್ದರು.

ಸಾಧಕರಾದ ಕಾಷ್ಠ ಶಿಲ್ಪಿ ಕಲ್ಲಮುಂಡ್ಕೂರು ಹರೀಶ್ ಆಚಾರ್ಯ, ತಿಮ್ಮಪ್ಪಯ್ಯ ಆಚಾರ್ಯ, ಕೊಡೆತ್ತೂರು ಮಾಧವ ಆಚಾರ್ಯ, ರೂಪಾ ವಸುಂಧರ ಆಚಾರ್ಯ ಇವರನ್ನು ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಉದಯ ಕುಮಾರ್ ಆಚಾರ್ಯ ಸ್ವಾಗತಿಸಿದರು. ಪ್ರತಿಮಾ ಪ್ರಕಾಶ್ ಬಹುಮಾನ ವಿಜೇತರ ವಿವರ ವಾಚಿಸಿದರು. ದಿನೇಶ ಆಚಾರ್ಯ ಹಾಗೂ ಅನಿತಾ ಪ್ರಥ್ವಿರಾಜ್ ಆಚಾರ್ಯ ಸನ್ಮಾನ ಪತ್ರ ವಾಚಿಸಿದರು.
ಮಹಿಳಾ ವೃಂದದ ಅಧ್ಯಕ್ಷೆ ಶುಭಾ ಕೇಶವ ಆಚಾರ್ಯ ವಂದಿಸಿದರು. ಶೈಲಜಾ ಆಚಾರ್ಯ, ಕೀರ್ತನ್ ನಿರೂಪಿಸಿದರು.