ಉಡುಪಿ ಸೀರೆಗಳ ಪುನರುಜ್ಜೀವನಕ್ಕೆ ಅಡಿಕೆಯ ಸ್ಪರ್ಶ: ಅಡಿಕೆಯ ನೈಸರ್ಗಿಕ ಬಣ್ಣದಿಂದ ತಯಾರಿಸಿದ ಉಡುಪಿ ಸೀರೆ ಬಿಡುಗಡೆ

ಕಿನ್ನಿಗೋಳಿ: ಕದಿಕೆ ಟ್ರಸ್ಟ್ ನ ಮಾರ್ಗದರ್ಶನದಲ್ಲಿ ತಯಾರಾದ ಅಡಿಕೆ ಮತ್ತು ಇತರ ನೈಸರ್ಗಿಕ ಬಣ್ಣ ಉಪಯೋಗಿಸಿ ತಯಾರಿಸಿದ ಉಡುಪಿ ಸೀರೆಗಳನ್ನು ಸೋಮವಾರದಂದು ತಾಳಿಪಾಡಿ ನೇಕಾರರ ಸೊಸೈಟಿ ಆವರಣದಲ್ಲಿ ಬಿಡುಗಡೆ ಮಾಡಲಾಯಿತು. 2018ರಲ್ಲಿ ಉಡುಪಿ ಸೀರೆ ಪುನರುಜ್ಜೀವನವನ್ನು ಪ್ರಾರಂಭಿಸಿದ ಕದಿಕೆ ಟ್ರಸ್ಟ್, ಎನ್‌ಜಿಒ ಸಾಮಾಜಿಕ ಮಾಧ್ಯಮ ಪ್ರಚಾರ, ನಬಾರ್ಡ್ ಬೆಂಬಲದೊಂದಿಗೆ ತರಬೇತಿ ಮತ್ತು ಇತರ ಕ್ರಮಗಳಂತಹ ಬಹುಮುಖಿ ವಿಧಾನಗಳೊಂದಿಗೆ ಎರಡು ಜಿಲ್ಲೆಗಳಲ್ಲಿ ನೇಯ್ಗೆಯನ್ನು ಅಳಿವಿನಿಂದ ಮರಳಿ ತಂದಿದೆ. ಉಡುಪಿ ಸೀರೆಯನ್ನು ಹೆಚ್ಚು ಪರಿಸರ ಸ್ನೇಹಿ ಮತ್ತು ಆಕರ್ಷಕವಾಗಿಸುವ ಉಪಕ್ರಮವಾಗಿ […]

ನಟ ಸುದೀಪ್ ರಿಂದ ಕಟೀಲು ದೇವಳಕ್ಕೆ ಭೇಟಿ

ಕಿನ್ನಿಗೋಳಿ: ಇಲ್ಲಿನ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕನ್ನಡ ಚಿತ್ರ ನಟ ಕಿಚ್ಚ ಸುದೀಪ್ ಭಾನುವಾರದಂದು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪತ್ನಿ ಪ್ರಿಯಾ ಜೊತೆ ಆಗಮಿಸಿದ್ದ ಸುದೀಪ್, ದೇವಳದಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಕಟೀಲು ಮತ್ತು ಮುಲ್ಕಿಯಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುದೀಪ್ ಜಿಲ್ಲೆಗಾಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ದೇವಸ್ಥಾನದ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಉಪಸಿತರಿದ್ದರು.

ಕಿನ್ನಿಗೋಳಿ: ಪಾದಾಚಾರಿ ಮಹಿಳೆಗೆ ಗುದ್ದಿದ ಕಾರು; ಗಂಭೀರ ಗಾಯ

ಕಿನ್ನಿಗೋಳಿ: ದಾರಿಯಲ್ಲಿ ನಡೆದುಕೊಂದು ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಕಾರೊಂದು ಗುದ್ದಿದ್ದು, ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ. ಗಾಯಗೊಂಡ ಮಹಿಳೆಯನ್ನು ಕೆಮ್ರಾಲ್ ಮನೋಲಿ ಬಲ್ಲೆ ನಿವಾಸಿ ಜಯಂತಿ ಶೆಟ್ಟಿ ಎಂದು ಗುರುತಿಸಲಾಗಿದೆ. ಗುರುವಾರದಂದು ಕಿನ್ನಿಗೋಳಿ ಚರ್ಚ್ ಬಳಿ ಸಂತೆ ಮಾರುಕಟ್ಟೆ ನಡೆಯುತ್ತಿದ್ದು, ಜಯಂತಿ ಶೆಟ್ಟಿ ಎಂಬವರು ತರಕಾರಿ ಹಿಡಿದುಕೊಂಡು ನಡೆದು ಬರುತ್ತಿದ್ದ ಸಂದರ್ಭದಲ್ಲಿ ಕಿನ್ನಿಗೋಳಿ ಪೇಟೆಯಿಂದ ಮೂರುಕಾವೇರಿ ಕಡೆಗೆ ವೇಗವಾಗಿ ತೆರಳುತ್ತಿದ್ದ ಬ್ರೀಜಾ ಕಾರು ಮಹಿಳೆಗೆ ಗುದ್ದಿದ್ದು, ಮಹಿಳೆಯು ಎತ್ತಿ ಎಸೆಯಲ್ಪಟ್ಟಿರುವುದರಿಂದ  ಗಂಭೀರ ಗಾಯಗಳಾಗಿವೆ. ಕಾರು ಪಕ್ಕದ ಕಟ್ಟೆಗೆ ಡಿಕ್ಕಿ […]

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

ಕಿನ್ನಿಗೋಳಿ: ಇಲ್ಲಿನ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಸೆ.26 ರಿಂದ ಅ.5ರ ವರೆಗೆ ಜರಗಲಿದ್ದು ಪ್ರತೀ ದಿನ ಬೆಳಿಗ್ಗೆ 9:30 ರಿಂದ ಸರಸ್ವತಿ ಸದನದಲ್ಲಿ ಭಜನೆ, ಸಂಜೆ 5:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, 7:30 ರಿಂದ ಯಕ್ಷಗಾನ ಬಯಲಾಟ ಪ್ರದರ್ಶನ ಜರಗಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ಮತ್ತು ಅನುವಂಶಿಕ ಮೊಕ್ತೇಸರ ಕೆ. ವಾಸುದೇವ ಅಸ್ರಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಿನ್ನಿಗೋಳಿ: ಮೂರುಕಾವೇರಿ ಬಳಿ ಖಾಸಗಿ ಬಸ್ ಗೆ ಲಾರಿ ಢಿಕ್ಕಿ; ಪ್ರಯಾಣಿಕರು ಸುರಕ್ಷಿತ

ಕಿನ್ನಿಗೋಳಿ: ಇಲ್ಲಿಗೆ ಸಮೀಪದ ಮೂರುಕಾವೇರಿ ಎಂಬಲ್ಲಿ ಮೂಡಬಿದ್ರೆ ಮಾರ್ಗವನ್ನು ಕಟೀಲು ಮಾರ್ಗಕ್ಕೆ ಸಂಪರ್ಕಿಸುವ ಅಡ್ಡರಸ್ತೆಯ ಬಳಿ ಕಟೀಲು ಮಾರ್ಗಕ್ಕೆ ಸಾಗುತ್ತಿದ್ದ ಲಾರಿಯೊಂದಕ್ಕೆ ಕಿನ್ನಿಗೋಳಿ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಒಂದು ಢಿಕ್ಕಿ ಹೊಡೆದಿದೆ. ಬಸ್ಸಿನ ಎದುರುಗಡೆ ಗಾಜು ಪುಡಿಯಾಗಿದ್ದರೂ, ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.