ಯೇಸುಕ್ರಿಸ್ತನ ಜೀವನ ಸಂದೇಶ ಮತ್ತು ಮೌಲ್ಯಗಳನ್ನು ನೆನಪಿಸುವ ಕ್ರಿಸ್‌ಮಸ್ ಪವಿತ್ರ ದಿನ: ಪ್ರಧಾನಿ ಮೋದಿ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ (ಡಿಸೆಂಬರ್ 25) ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಕ್ರೈಸ್ತ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಈ ಸಂದರ್ಭದಲ್ಲಿ ಅವರು ಎಲ್ಲರಿಗೆ ಶುಭಾಶಯಗಳನ್ನು ಕೋರಿದರು. ಪ್ರಧಾನಿ ನಿವಾಸ 7, ಲೋಕ ಕಲ್ಯಾಣ ಮಾರ್ಗದಲ್ಲಿ ಅಲ್ಪಸಂಖ್ಯಾತ ಸಮಿತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, “ಕ್ರಿಸ್‌ಮಸ್ ಸಂದರ್ಭದಲ್ಲಿ ವಿಶ್ವದ ಜನರಿಗೆ ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ನನ್ನ ಶುಭಾಶಯಗಳು. ಇಂತಹ ವಿಶೇಷ ಮತ್ತು ಪವಿತ್ರ ದಿನದಂದು ನೀವೆಲ್ಲರೂ ನನ್ನ ನಿವಾಸಕ್ಕೆ ಬಂದಿರುವುದು ನನಗೆ ಸಂತೋಷವಾಗಿದೆ” […]
ಸ್ನೇಹಾಲಯ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಕ್ರಿಸ್ ಮಸ್ ಹಬ್ಬದ ಸಂಭ್ರಮ
ಮಂಜೇಶ್ವರ: ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಪ್ರಮುಖ ಸಂಸ್ಥೆಯಾದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ಡಿ. 21 ರಂದು ತನ್ನ ನಿವಾಸಿಗಳಿಗಾಗಿ ಕ್ರಿಸ್‌ಮಸ್ ಆಚರಣೆಯನ್ನು ಏರ್ಪಡಿಸಿತ್ತು. ನಿವಾಸಿಗಳು ಮತ್ತು ಸಿಬ್ಬಂದಿಗಳು ವರ್ಣರಂಜಿತ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಕ್ರಿಸ್ಮಸ್ ಹಬ್ಬಗಳು ನಮ್ಮ ನಿವಾಸಿಗಳ ಭಾವನಾತ್ಮಕ ಯೋಗಕ್ಷೇಮವನ್ನು ಬಲಪಡಿಸಲು ಅವಕಾಶವನ್ನು ನೀಡುತ್ತವೆ, ಇವು ತಮ್ಮ ಜೀವನವನ್ನು ನವೀಕೃತ ಭರವಸೆಯೊಂದಿಗೆ ಪುನರ್ನಿರ್ಮಿಸಲು ಸಹಾಯ ಮಾಡುತ್ತವೆ ಮತ್ತುಇದು ನಮಗೆ ಸಂತೋಷವನ್ನು ನೀಡುತ್ತದೆ ಎಂದು ಕೇಂದ್ರದ ನಿರ್ದೇಶಕ ಜೋಸೆಫ್ ಕ್ರಾಸ್ತಾ ಹೇಳಿದರು. ಸಿಬ್ಬಂದಿ […]
ಕೋವಿಡ್-19 ಹೊಸ ತಳಿ JN.1 ಹಾವಳಿ: ಹೊಸವರ್ಷ ಸಂಭ್ರಮಾಚರಣೆಗಳಿಗೆ ನಿಬಂಧನೆಗಳ ಸಾಧ್ಯತೆ; ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ನಿರ್ಧಾರ
ಬೆಂಗಳೂರು: ನೆರೆಯ ಕೇರಳ ರಾಜ್ಯದಲ್ಲಿ ಕೊರೋನಾದ ಹೊಸ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರದಂದು ತಾಂತ್ರಿಕ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಸಭೆ ಬಳಿಕ ರಾಜ್ಯ ಸರ್ಕಾರ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗಳಿಗೆ ಕಟ್ಟುನಿಟ್ಟಿನ ಕ್ರಮ ಶಿಫಾರಸು ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಕೇರಳದಲ್ಲಿ ಒಮಿಕ್ರಾನ್ ಹೊಸ ಉಪತಳಿ JN.1 ಪತ್ತೆಯಾದ ಬೆನ್ನಲ್ಲೇ ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶನಿವಾರ ತುರ್ತು ಸಭೆ ನಡೆಸಿ, ಪ್ರಾಥಮಿಕ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರ […]
ಮುಕ್ತಾಂಜಲಿ ನಾಟ್ಯ ಸಂಸ್ಥೆ ವತಿಯಿಂತ ಕ್ರಿಸ್ ಮಸ್ ಸಂಭ್ರಮಾಚರಣೆ
ಮಣಿಪಾಲ: ಮುಕ್ತಾಂಜಲಿ ನಾಟ್ಯ ಸಂಸ್ಥೆ, ಮದರ್ ಎಂಡ್ ಚೈಲ್ಡ್ ಟ್ಯಾಲೆಂಟ್ ಶೋ ಹಾಗೂ ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ವತಿಯಿಂದ ಕ್ರಿಸ್ ಮಸ್ ಹಬ್ಬದ ಆಚರಣೆಯ ಪ್ರಯುಕ್ತ ಕಿಡ್ಜೀ ಮಕ್ಕಳಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮವು ಕಾರ್ಯಕ್ರಮವು ಡಿ.23 ರಂದು ಮಣಿಪಾಲದ ಹೋಟೇಲ್ ಆಶ್ಲೇಷ್ ಇದರ ವಜ್ರ ಹಾಲ್ ನಲ್ಲಿ ನಡೆಯಿತು. ಸಮಾರಂಭವನ್ನು ಬೆಲ್ ಒ ಸೀಲ್ ನ ನಿರ್ದೇಶಕಿ ಶ್ರೀಮತಿ ಸಪ್ನಾ ಜೆನಿಫರ್ ಸಾಲಿನ್ಸ್ ಉದ್ಘಾಟಿಸಿದರು. ಹಾಡು ನೀ ಹಾಡು ರಿಯಾಲಿಟಿ ಶೋನ ಮಾರ್ಗದರ್ಶಕ ಕೃಪಾ ಪ್ರಸೀದ್ […]
ಡಿ.23 ರಂದು ಮುಕ್ತಾಂಜಲಿ ನಾಟ್ಯ ಸಂಸ್ಥೆ ವತಿಯಿಂದ ಕ್ರಿಸ್ ಮಸ್ ಸಂಭ್ರಮಾಚಣೆ
ಮಣಿಪಾಲ: ಮುಕ್ತಾಂಜಲಿ ನಾಟ್ಯ ಸಂಸ್ಥೆ, ಮದರ್ ಎಂಡ್ ಚೈಲ್ಡ್ ಟ್ಯಾಲೆಂಟ್ ಶೋ ಹಾಗೂ ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ವತಿಯಿಂದ ಕ್ರಿಸ್ ಮಸ್ ಹಬ್ಬದ ಆಚರಣೆಯ ಪ್ರಯುಕ್ತ ಕಿಡ್ಜೀ ಮಕ್ಕಳಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಡಿ.23 ರಂದು ಸಂಜೆ 5 ಗಂಟೆಗೆ ಮಣಿಪಾಲದ ಹೋಟೇಲ್ ಆಶ್ಲೇಶ್ ಇದರ ವಜ್ರ ಹಾಲಿನಲ್ಲಿ ನಡೆಯುವ ಸಮಾರಂಭವನ್ನು ಬೆಲ್ ಒ ಸೀಲ್ ನ ನಿರ್ದೇಶಕಿ ಶ್ರೀಮತಿ ಸಪ್ನಾ ಜೆನಿಫರ್ ಸಾಲಿನ್ಸ್ ಉದ್ಘಾಟಿಸಲಿದ್ದಾರೆ. ಹಾಡು ನೀ ಹಾಡು ರಿಯಾಲಿಟಿ ಶೋನ ಮಾರ್ಗದರ್ಶಕ […]