ಸ್ನೇಹಾಲಯ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಕ್ರಿಸ್ ಮಸ್ ಹಬ್ಬದ ಸಂಭ್ರಮ

ಮಂಜೇಶ್ವರ: ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ವ್ಯಕ್ತಿಗಳನ್ನು ನೋಡಿಕೊಳ್ಳುವ ಪ್ರಮುಖ ಸಂಸ್ಥೆಯಾದ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರವು ಡಿ. 21 ರಂದು ತನ್ನ ನಿವಾಸಿಗಳಿಗಾಗಿ ಕ್ರಿಸ್‌ಮಸ್‌ ಆಚರಣೆಯನ್ನು ಏರ್ಪಡಿಸಿತ್ತು. ನಿವಾಸಿಗಳು ಮತ್ತು ಸಿಬ್ಬಂದಿಗಳು ವರ್ಣರಂಜಿತ ಹಬ್ಬದ ಚಟುವಟಿಕೆಗಳಲ್ಲಿ ಭಾಗವಹಿಸಿದರು.

ಕ್ರಿಸ್ಮಸ್ ಹಬ್ಬಗಳು ನಮ್ಮ ನಿವಾಸಿಗಳ ಭಾವನಾತ್ಮಕ ಯೋಗಕ್ಷೇಮವನ್ನು ಬಲಪಡಿಸಲು ಅವಕಾಶವನ್ನು ನೀಡುತ್ತವೆ, ಇವು ತಮ್ಮ ಜೀವನವನ್ನು ನವೀಕೃತ ಭರವಸೆಯೊಂದಿಗೆ ಪುನರ್ನಿರ್ಮಿಸಲು ಸಹಾಯ ಮಾಡುತ್ತವೆ ಮತ್ತುಇದು ನಮಗೆ ಸಂತೋಷವನ್ನು ನೀಡುತ್ತದೆ ಎಂದು ಕೇಂದ್ರದ ನಿರ್ದೇಶಕ ಜೋಸೆಫ್‌ ಕ್ರಾಸ್ತಾ ಹೇಳಿದರು.

ಸಿಬ್ಬಂದಿ ಮತ್ತು ನಿವಾಸಿಗಳು ಪ್ರದರ್ಶಿಸಿದ ಆಕರ್ಷಕ ಕ್ರಿಸ್ಮಸ್ ಸ್ಕಿಟ್‌ನೊಂದಿಗೆ ಆಚರಣೆಯು ಪ್ರಾರಂಭವಾಯಿತು. ಕ್ರಿಸ್‌ಮಸ್ ಕ್ಯಾರೋಲ್‌ಗಳಿಗೆ ಹೆಸರುವಾಸಿಯಾದ ‘ಜಿಜಿ 100’ ತಂಡದಿಂದ ಮಧುರವಾದ ಕ್ರಿಸ್‌ಮಸ್ ಗೀತೆಗಳನ್ನು ಸಾದರಪಡಿಸಲಾಯಿತು.

ಅರ್ಬನ್‌ ಗ್ರೂವ್‌ ತಮ್ಮ ಆಕರ್ಷಕ ನೃತ್ಯ ಪ್ರದರ್ಶನಗಳೊಂದಿಗೆ ಹಬ್ಬದ ಉತ್ಸಾಹವನ್ನು ಇಮ್ಮಡಿಗೊಳಿಸಿದರು. ಹಿಪ್-ಹಾಪ್, ಸಮಕಾಲೀನ ಮತ್ತು ಜಾಝ್‌ ನೃತ್ಯ ವಿಧಗಳನ್ನು ಬೆಸೆಯುವ ವಿಶಿಷ್ಟ ನೃತ್ಯ ಸಂಯೋಜನೆಯು ಪ್ರೇಕ್ಷಕರ ಮನರಂಜಿಸಿತು.

ದಾನಿಗಳ ಹಾಗೂ ಸ್ವಯಂ ಸೇವಕರ ಬೆಂಬಲದಿಂದ ಕಾರ್ಯಕ್ರಮ ನೆರವೇರಿದ್ದು, ಅವರಿಗೆಲ್ಲಾ ಕೃತಜ್ಞತೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ರಶೀದ್ ವಿಟ್ಲ, ಸ್ಥಾಪಕರು, ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ) ಮಂಗಳೂರು; ಯೋಗೀಶ್ ವಿ.ಸಾಲಿಯಾನ್, ಮಾಲಿಕರು, ಅಮ್ಮಾ ಎಲೆಕ್ಟ್ರಾನಿಕ್ಸ್ ತೊಕ್ಕೊಟ್ಟು ಮತ್ತು ಟೈಟಸ್ ನೊರೊನ್ಹಾ, ಮಾಲಿಕರು, ರಾಹುಲ್‌ ಜಾಹೀರಾತು ಸಂಸ್ಥೆ, ಮಂಗಳೂರು ಉಪಸ್ಥಿತರಿದ್ದರು.

ಗೌರವ ಅತಿಥಿಗಳಾಗಿ ಜಿಯಾನ್ ಲವಿನಾ ಮೊಂತೇರೊ, ಅಧ್ಯಕ್ಷರು,ಮಂಜೇಶ್ವರ ಗ್ರಾಮ ಪಂಚಾಯತ್; ಸ್ಟ್ಯಾನಿ ಬೆಳಾ, ನಿರ್ಮಾಣ ನಿರ್ದೇಶಕರು, ದಾಯ್ಜಿವರ್ಲ್ಡ್ ಟಿವಿ; ರೆ.ಸಿರಿಲ್ ಡಿಸೋಜಾ, ಸ್ನೇಹಾಲಯದ ಚಾಪ್ಲಿನ್; ಸ್ಟ್ಯಾನಿ ಫೆರ್ನಾಂಡಿಸ್ ಮತ್ತು ವಿದ್ಯಾ ಫೆರ್ನಾಂಡಿಸ್, ಬಹ್ರೇಯ್ನ್, ವಿನ್ಸೆಂಟ್‌ ಜೆರೋಮ್ ಡಿಸಿಲ್ವಾ ಮತ್ತು ಸಿಲ್ವಿಯಾ ರೀಟಾ ಡಿಸಿಲ್ವಾ ಹಾಗೂ ಡೆನ್ಜಿಲ್ ಮೊನಿಸ್ ಮತ್ತು ಮರಿಟಾ ಮೊನಿಸ್ (ಕುವೇಯ್ಟ್) ಉಪಸ್ಥಿತರಿದ್ದರು.