ಡಿ.23 ರಂದು ಮುಕ್ತಾಂಜಲಿ ನಾಟ್ಯ ಸಂಸ್ಥೆ ವತಿಯಿಂದ ಕ್ರಿಸ್ ಮಸ್ ಸಂಭ್ರಮಾಚಣೆ

ಮಣಿಪಾಲ: ಮುಕ್ತಾಂಜಲಿ ನಾಟ್ಯ ಸಂಸ್ಥೆ, ಮದರ್ ಎಂಡ್ ಚೈಲ್ಡ್ ಟ್ಯಾಲೆಂಟ್ ಶೋ ಹಾಗೂ ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ವತಿಯಿಂದ ಕ್ರಿಸ್ ಮಸ್ ಹಬ್ಬದ ಆಚರಣೆಯ ಪ್ರಯುಕ್ತ ಕಿಡ್ಜೀ ಮಕ್ಕಳಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಡಿ.23 ರಂದು ಸಂಜೆ 5 ಗಂಟೆಗೆ ಮಣಿಪಾಲದ ಹೋಟೇಲ್ ಆಶ್ಲೇಶ್ ಇದರ ವಜ್ರ ಹಾಲಿನಲ್ಲಿ ನಡೆಯುವ ಸಮಾರಂಭವನ್ನು ಬೆಲ್ ಒ ಸೀಲ್ ನ ನಿರ್ದೇಶಕಿ ಶ್ರೀಮತಿ ಸಪ್ನಾ ಜೆನಿಫರ್ ಸಾಲಿನ್ಸ್ ಉದ್ಘಾಟಿಸಲಿದ್ದಾರೆ.

ಹಾಡು ನೀ ಹಾಡು ರಿಯಾಲಿಟಿ ಶೋನ ಮಾರ್ಗದರ್ಶಕ ಕೃಪಾ ಪ್ರಸೀದ್ ಮತ್ತು ಭಾರತ ಗೌರವ ಪ್ರಶಸ್ತಿ ಪುರಸ್ಕೃತ ಶ್ರೀಮತಿ ದೀಪಿಕಾ ಆಚಾರ್ಯ ಇವರಿಂದ ಗೀತ ಗಾಯನ ಕಾರ್ಯಕ್ರಮವು ಜರುಗಲಿದ್ದು, ಸೆಲೀನ್ ಅಪ್ಪು ಮತ್ತು ತಂಡದವರಿಂದ ಕ್ಯಾರಲ್ ಸಂಗೀತ ನಡೆಯಲಿದೆ. ಶ್ರೀಮತಿ ಸರಿತಾ ಸಂತೋಷ ಮತ್ತು ಶ್ರೀಮತಿ ದೀಪಾ ಭಂಡಾರಿ ನಿರೂಪಣೆ ಮಾಡಲಿದ್ದಾರೆ ಎಂದು ಸಂಸ್ಥೆಯು ತಿಳಿಸಿದೆ.