ಮುಕ್ತಾಂಜಲಿ ನಾಟ್ಯ ಸಂಸ್ಥೆ ವತಿಯಿಂತ ಕ್ರಿಸ್ ಮಸ್ ಸಂಭ್ರಮಾಚರಣೆ

ಮಣಿಪಾಲ: ಮುಕ್ತಾಂಜಲಿ ನಾಟ್ಯ ಸಂಸ್ಥೆ, ಮದರ್ ಎಂಡ್ ಚೈಲ್ಡ್ ಟ್ಯಾಲೆಂಟ್ ಶೋ ಹಾಗೂ ರೋಟರಿ ಕ್ಲಬ್ ಮಣಿಪಾಲ್ ಹಿಲ್ಸ್ ವತಿಯಿಂದ ಕ್ರಿಸ್ ಮಸ್ ಹಬ್ಬದ ಆಚರಣೆಯ ಪ್ರಯುಕ್ತ ಕಿಡ್ಜೀ ಮಕ್ಕಳಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮವು ಕಾರ್ಯಕ್ರಮವು ಡಿ.23 ರಂದು ಮಣಿಪಾಲದ ಹೋಟೇಲ್ ಆಶ್ಲೇಷ್ ಇದರ ವಜ್ರ ಹಾಲ್ ನಲ್ಲಿ ನಡೆಯಿತು.

ಸಮಾರಂಭವನ್ನು ಬೆಲ್ ಒ ಸೀಲ್ ನ ನಿರ್ದೇಶಕಿ ಶ್ರೀಮತಿ ಸಪ್ನಾ ಜೆನಿಫರ್ ಸಾಲಿನ್ಸ್ ಉದ್ಘಾಟಿಸಿದರು.

ಹಾಡು ನೀ ಹಾಡು ರಿಯಾಲಿಟಿ ಶೋನ ಮಾರ್ಗದರ್ಶಕ ಕೃಪಾ ಪ್ರಸೀದ್ ಮತ್ತು ಭಾರತ ಗೌರವ ಪ್ರಶಸ್ತಿ ಪುರಸ್ಕೃತ ಶ್ರೀಮತಿ ದೀಪಿಕಾ ಆಚಾರ್ಯ ಇವರಿಂದ ಗೀತ ಗಾಯನ ನಡೆಯಿತು. ಸೆಲೀನ್ ಅಪ್ಪು ಮತ್ತು ತಂಡದವರಿಂದ ಕ್ಯಾರಲ್ ಸಂಗೀತ ನಡೆಯಿತು.

ಶ್ರೀಮತಿ ಸರಿತಾ ಸಂತೋಷ ಮತ್ತು ಶ್ರೀಮತಿ ದೀಪಾ ಭಂಡಾರಿ ನಿರೂಪಿಸಿದರು.