ಮುನಿಯಾಲು ಆಯುರ್ವೇದ ಸಂಸ್ಥೆಯ ಕ್ಯಾನ್ಸರ್ ಔಷಧಿ ಹಾಗೂ ಕ್ಯಾನ್ಸರ್ ಚಿಕಿತ್ಸಾ ಕ್ರಮಕ್ಕೆ ಅಮೇರಿಕಾದ ಪೇಟೆಂಟ್

ಉಡುಪಿ: ಮುನಿಯಾಲು ಆಯುರ್ವೇದ ಸಂಸ್ಥೆಯ ಅಧ್ಯಕ್ಷ ಡಾ.ಎಂ. ವಿಜಯಭಾನು ಶೆಟ್ಟಿಯವರು ಅಭಿವೃದ್ಧಿಪಡಿಸಿದ ಕ್ಯಾನ್ಸರ್ ಔಷಧಿ ಹಾಗೂ ಕ್ಯಾನ್ಸರ್ ಚಿಕಿತ್ಸಾ ಕ್ರಮಕ್ಕೆ ಎರಡು ಪ್ರತ್ಯೇಕ ಪೇಟೆಂಟ್‍ಗಳು ಅಮೆರಿಕಾದ ಡೈರೆಕ್ಟರ್ ಆಫ್ ಪೇಟೆಂಟ್ ಎಂಡ್ ಟ್ರೇಡ್‍ಮಾರ್ಕ್ ಆಫೀಸಿನಿಂದ ದೊರೆತಿದೆ. ಮುಂದಿನ ಇಪ್ಪತ್ತು ವರ್ಷಗಳ ಅವಧಿಗೆ ಸಲ್ಲುವ ಈ ಪೇಟೆಂಟ್ ಆಯುರ್ವೇದ ಇತಿಹಾಸದಲ್ಲಿ ಅಮೆರಿಕಾದಿಂದ ದೊರೆತ ಒಂದು ಅಪರೂಪದ ಮನ್ನಣೆ. ಆರು ನೂರಕ್ಕೂ ಹೆಚ್ಚು ಸಂಖ್ಯೆಯ, ವಿವಿಧ ಹಂತಗಳಲ್ಲಿ ಬಳಲುತ್ತಿದ್ದ ವಿವಿಧ ತರಹದ ಕ್ಯಾನ್ಸರ್ ರೋಗಿಗಳು ಈ ಔಷಧಿ ಮತ್ತು ಚಿಕಿತ್ಸಾ […]
ದೇವಿಪ್ರಸಾದ್ ಸ್ಪೋರ್ಟ್ಸ್ ಸೆಂಟರ್ ನ ನೂತನ ಹಿರಿಯಡಕ ಶಾಖೆ ಶುಭಾರಂಭ

ಹಿರಿಯಡಕ: ದೇವಿಪ್ರಸಾದ ಸ್ಪೋರ್ಟ್ಸ್ ಸೆಂಟರ್ ಮುನಿಯಾಲು ಇದರ ನೂತನ ಶಾಖೆ ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿಯ ಕೀರ್ತಿ ಕಾಂಪ್ಲೆಕ್ಸ್ ನಲ್ಲಿ ಮಾ.1ರಂದು ಶುಭಾರಂಭಗೊಂಡಿದೆ. ದೇವಿಪ್ರಸಾದ್ ಸ್ಪೋರ್ಟ್ಸ್ ಸೆಂಟರ್ ಹಿರಿಯಡಕ ಶಾಖೆಯನ್ನು ಈಚೆಗೆ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಉದ್ಘಾಟಿಸಿದರು. ಗೋಪಿನಾಥ್ ಭಟ್ ಮುನಿಯಾಲು, ರತ್ನಾಕರ ದೇವಾಡಿಗ ಹಿರಿಯಡ್ಕ, ಉಮೇಶ್ ಶೆಟ್ಟಿ ಹಿರಿಯಡ್ಕ ಹಾಗೂ ಅರುಣ್ ಜತ್ತನ್ ಹಿರಿಯಡ್ಕ ಉಪಸ್ಥಿತರಿದ್ದರು. ಈ ಸ್ಫೋರ್ಟ್ಸ್ ಸೆಂಟರ್ ನಲ್ಲಿ ಎಲ್ಲಾ ರೀತಿಯ ಕ್ರೀಡಾ ಸಾಮಗ್ರಿಗಳು, ಕ್ರೀಡಾ ಪಾರಿತೋಷಕಗಳು, ಸ್ಮರಣಿಕೆಗಳು, […]
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕುಂದಾಪುರವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಯುವಮೆರಿಡಿಯನ್ ಸಾಧನೆ ಶ್ಲಾಘನೀಯ: ಶೈನ್ ಶೆಟ್ಟಿ

ಕುಂದಾಪುರ: ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕುಂದಾಪುರವನ್ನು ಉನ್ನತ ದರ್ಜೆಗೇರಿಸುವ ಮೂಲಕ ರಾಷ್ಟ್ರ ಮತ್ತು ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಲ್ಲಿ ಯುವಮೆರಿಡಿಯನ್ ಮುಖ್ಯಸ್ಥರಾದ ಉದಯಕುಮಾರ್ ಶೆಟ್ಟಿ ಹಾಗೂ ವಿನಯಕುಮಾರ್ ಶೆಟ್ಟಿ ಕಾರ್ಯ ಶ್ಲಾಘನೀಯ ಎಂದು ಸೀಸನ್ 7 ಬಿಗ್ ಬಾಸ್ ನ ವಿಜೇತ ಶೈನ್ ಶೆಟ್ಟಿ ಹೇಳಿದರು. ಅವರು ಮಾರ್ಚ್ 7ರಂದು ಸಂಜೆ ಯುವಮೆರಿಡಿಯನ್ ಸ್ವಿಮ್ ಸ್ಲೈಡ್ ಎಂಡ್ ಸ್ಪ್ಲಾಶ್ ಅಮ್ಯೂಸ್‍ಮೆಂಟ್ ಪಾರ್ಕ್ ಉದ್ಘಾಟಿಸಿ ಮಾತನಾಡಿದರು. ಹಲವು ವಿಶಿಷ್ಟ ಸೇವೆಗಳ ಮೂಲಕ ಕುಂದಾಪುರದ ಹೆಸರನ್ನು ಉತ್ತುಂಗಕ್ಕೇರಿಸಿದ ಉದಯಕುಮಾರ್ ಶೆಟ್ಟಿ ಹಾಗೂ ವಿನಯ […]
ಡಾ| ಬಿ.ಬಿ. ಹೆಗ್ಡೆ ಕಾಲೇಜು: ಡಿಜಿಟಲ್ ಮಾರ್ಕೆಟಿಂಗ್ ಉದ್ಯೋಗ – ಮಾಹಿತಿ ಕಾರ್ಯಕ್ರಮ

ಕುಂದಾಪುರ, ಮಾ.6: ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್‍ನಲ್ಲಿರುವ ಉದ್ಯೋಗ ಅವಕಾಶಗಳ ಮತ್ತು ಡಿಜಿಟಲ್ ಮಾರ್ಕೆಟ್‍ನ ಪ್ರಯೋಜನಗಳನ್ನು ಹುಬ್ಬಳ್ಳಿ ಜ್ಞಾನ ಸಂಸ್ಥೆಯ ಸ್ಥಾಪಕ ಮಯೂರ ಹತ್ವಾರ್ ತಿಳಿಸಿದರು. ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಆಯೋಜನೆಯಲ್ಲಿ ಅಂತಿಮ ಬಿ.ಕಾಂ. ಹಾಗೂ ಬಿ.ಬಿ.ಎ. ವಿದ್ಯಾರ್ಥಿಗಳಿಗೆ ನಡೆಸಿದ “ಡಿಜಿಟಲ್ ಮಾರ್ಕೆಟ್‍ನ ಅವಕಾಶಗಳ” ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಫ್ರಿಲೆನ್ಸ್ ಸಲಹೆಗಾರ ಮತ್ತು […]
ಮಾ.7: ಯುವ ಮೆರಿಡಿಯನ್ ಅಮ್ಯೂಸ್ ಮೆಂಟ್ ಪಾರ್ಕ್ ಲೋಕಾರ್ಪಣೆ

ಕೋಟೇಶ್ವರ: ಯುವ ಮೆರಿಡಿಯನ್ ಗ್ರೂಪ್ ನ ಆಧುನಿಕ ಅಮ್ಯೂಸ್ ಮೆಂಟ್ ಪಾರ್ಕ್ ಅನ್ನು ಮಾ.7ರಂದು ಕೋಟೇಶ್ವರದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಮಾ.7 ರಂದು ಸಂಜೆ 4:30 ರಿಂದ ನಡೆಯುವ ಸಮಾರಂಭದಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ, ದೀಪಿಕಾದಾಸ್, ವಾಸುಕಿ ವೈಭವ್, ಭೂಮಿ ಶೆಟ್ಟಿ, ಅನೀಶ್ ಶೆಟ್ಟಿ, ಭಾಗವಹಿಸಲಿದ್ದು, ಗಣೇಶ್ ಕುದ್ರೋಳಿ ಅವರಿಂದ ಜಾದೂ ಪ್ರದರ್ಶನ ಜರಗಲಿದೆ. ಗಮನಸೆಳೆಯುವ ಆತಿಥ್ಯ: ಯುವ ಮೆರಿಡಿಯನ್ ಗ್ರೂಪ್ ಈಗಾಗಲೇ ಪ್ರವಾಸಿಗರಿಗೆ ಅದ್ಬುತ ಸೇವೆ ನೀಡುತ್ತಿದ್ದು ವಿದೇಶದ ಪ್ರವಾಸಿಗರನ್ನೂ ಸೆಳೆಯುತ್ತಿದೆ.ಯುವ ಮೇರಿಡಿಯನ್ ಬೇ ರೆಸಾರ್ಟ್ […]