ದೇವಿಪ್ರಸಾದ್ ಸ್ಪೋರ್ಟ್ಸ್ ಸೆಂಟರ್ ನ ನೂತನ ಹಿರಿಯಡಕ ಶಾಖೆ ಶುಭಾರಂಭ

ಹಿರಿಯಡಕ: ದೇವಿಪ್ರಸಾದ ಸ್ಪೋರ್ಟ್ಸ್ ಸೆಂಟರ್ ಮುನಿಯಾಲು ಇದರ ನೂತನ ಶಾಖೆ ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿಯ ಕೀರ್ತಿ ಕಾಂಪ್ಲೆಕ್ಸ್ ನಲ್ಲಿ ಮಾ.1ರಂದು ಶುಭಾರಂಭಗೊಂಡಿದೆ.
ದೇವಿಪ್ರಸಾದ್ ಸ್ಪೋರ್ಟ್ಸ್ ಸೆಂಟರ್ ಹಿರಿಯಡಕ ಶಾಖೆಯನ್ನು ಈಚೆಗೆ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಉದ್ಘಾಟಿಸಿದರು.
ಗೋಪಿನಾಥ್ ಭಟ್ ಮುನಿಯಾಲು, ರತ್ನಾಕರ ದೇವಾಡಿಗ ಹಿರಿಯಡ್ಕ, ಉಮೇಶ್ ಶೆಟ್ಟಿ ಹಿರಿಯಡ್ಕ ಹಾಗೂ ಅರುಣ್ ಜತ್ತನ್ ಹಿರಿಯಡ್ಕ ಉಪಸ್ಥಿತರಿದ್ದರು.
ಈ ಸ್ಫೋರ್ಟ್ಸ್ ಸೆಂಟರ್ ನಲ್ಲಿ ಎಲ್ಲಾ ರೀತಿಯ ಕ್ರೀಡಾ ಸಾಮಗ್ರಿಗಳು, ಕ್ರೀಡಾ ಪಾರಿತೋಷಕಗಳು, ಸ್ಮರಣಿಕೆಗಳು, ಕ್ರೀಡಾ ಸಮವಸ್ತ್ರಗಳು, ಶೂಸ್ ಹಾಗೂ ಸನ್ಮಾನದ ಉಪಕರಣಗಳು ದೊರೆಯುತ್ತವೆ.