ಕುಂದಾಪುರ ಡಾ| ಬಿ. ಬಿ. ಹೆಗ್ಡೆ ಕಾಲೇಜು: ಬಿಕ್ಕಟ್ಟು ನಿರ್ವಹಣೆ ಹಾಗೂ ಆರೋಗ್ಯ ಜೀವನ ಶೈಲಿ ಮಾಹಿತಿ ಕಾರ್ಯಾಗಾರ

ಕುಂದಾಪುರ, ಮಾ.4 : ಆಧುನಿಕ ಜೀವನ ಶೈಲಿ, ಒತ್ತಡದ ಬದುಕು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಯುವ ಜನತೆ ಒತ್ತಡದ ಬದುಕಿನಿಂದ ಮುಕ್ತಿ ಪಡೆಯಲು ಪರಿಹಾರ ಮಾರ್ಗಗಳನ್ನು ಸೂಕ್ತ ಸಮಯದಲ್ಲಿ ಕಂಡುಕೊಳ್ಳಬೇಕು ಎಂದು ಬೆಂಗಳೂರು ನಿಮಾನ್ಸ್ ಆಸ್ಪತ್ರೆಯ ಸಂಪರ್ಕಾಧಿಕಾರಿ ದಿವಾಕರ್ ಹೇಳಿದರು. ಅವರು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ, ನಿಮಾನ್ಸ್ ಆಸ್ಪತ್ರೆ ಬೆಂಗಳೂರು, ಜನ-ಆರೋಗ್ಯ ಕೇಂದ್ರ, ಯುವ ಸ್ಪಂದನ ಕೇಂದ್ರ ಉಡುಪಿ, ಜೇಸಿಐ ಕುಂದಾಪುರ ಸಿಟಿ ಆಯೋಜಿಸಿದ ಬಿಕ್ಕಟ್ಟು ನಿರ್ವಹಣೆ […]

ಶಿಕ್ಷ ಪ್ರಭಾ ಸಂಸ್ಥೆ: ಮ್ಯಾಟ್ ಪರೀಕ್ಷೆಯಲ್ಲಿ ಸಾಧನೆ

ಕುಂದಾಪುರ: ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ವಿದ್ಯಾರ್ಥಿನಿ ಕೀರ್ತನ ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಷನ್ಸ್ ನಡೆಸಿದ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯು ಪ್ರಕಟಿಸಿದೆ.

ಪರ್ಲ್ ವುಡ್ ಕ್ರಾಫ್ಟ್ ಶೋ ರೂಂ ಉದ್ಘಾಟನೆ

ಹಿರಿಯಡ್ಕ: ಉಡುಪಿಯ ಪ್ರತಿಷ್ಠಿತ ಅಲಂಕಾರಿಕ ಹಾಗು ಗೃಹೋಪಯೊಗಿ ವಸ್ತುಗಳ ಸಂಸ್ಥೆ ಯಾದ ಪರ್ಲ್ ವುಡ್ ಕ್ರಾಫ್ಟ್ ಶೋ ರೂಂ ನ  ಉದ್ಘಾಟನೆ ಇತ್ತೀಚೆಗೆ  ಹಿರಿಯಡ್ಕದ ಮುತ್ತೂರು ಕ್ರಾಸ್ ಬಳಿಯ ಶೋರೂಂ ನಲ್ಲಿ ನಡೆಯಿತು. ಮಣಿಪಾಲದ ಮಾಹೆ ಯ ಸಹಕುಲಾಧಿಪತಿ ಡಾ. ಎಚ್ ಎಸ್ .ಬಲ್ಲಾಳ್  ಶೋಂರೂಂ ಉದ್ಘಾಟಿಸಿ ಶುಭ ಹಾರೈಸಿದರು. ಮಾಹೆಯ ವಿದ್ಯಾರ್ಥಿಗಳ ಕ್ಷೇಮಪಾಲನ ನಿರ್ದೇಶಕಿ ಗೀತಾಮಯ್ಯ, ಎಂ. ಐ.ಟಿ.ಯ ನಿರ್ದೇಶಕ ಡಾ. ಶ್ರೀಕಾಂತ್ ರಾವ್ , ಪಬ್ಲ ಗಾರ್ಡನ್ಸ್ ನ ಪ್ರವರ್ತಕ ಡಾ. ಸುರ್ಜಿತ್ ಸಿಂಗ್ ಪಬ್ಲ […]

ಹಾಲಾಡಿಯಲ್ಲಿ ಶಾಲಿನಿ ಜಿ.ಶಂಕರ್ ಕನ್ವೆನ್ಶನ್ ಸೆಂಟರ್’ ಉದ್ಘಾಟನೆ

ಉಡುಪಿ: ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಅತ್ಯಾ ಧುನಿಕ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಹಾಗೂ ಸಂಪೂರ್ಣ ಹವಾ ನಿಯಂತ್ರಿತ ಸಭಾಭವನ ‘ಶಾಲಿನಿ ಜಿ.ಶಂಕರ್ ಕನ್ವೆನ್ಶನ್ ಸೆಂಟರ್’ ಇದರ ಉದ್ಘಾಟನೆ ಸೋಮವಾರ ನೆರವೇರಿತು. ಮಣಿಪಾಲ ಮಾಹೆಯ ಪ್ರೊಚಾನ್ಸೆಲರ್ ಡಾ.ಎಚ್.ಎಸ್. ಬಲ್ಲಾಳ್ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶವಾಗಿರುವ ಹಾಲಾಡಿ ಯಲ್ಲಿ ಉತ್ತಮ ಸೌಕರ್ಯಗಳನ್ನು ಒಳಗೊಂಡ ಹಾಲ್ ನಿರ್ಮಿಸುವ ಮೂಲಕ ಬಡ ಜನರಿಗೆ ಕಡಿಮೆ ದರದಲ್ಲಿ ಸಭಾಂಗಣವನ್ನು ಒದಗಿಸಿಕೊಡಲಾಗಿದೆ. ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಬಡವರು ಇದರ ಸದುಪಯೋಗ ಮಾಡಿ ಕೊಳ್ಳಬೇಕು. ಸಮಾಜದಲ್ಲಿ […]

ಫೆ.17: ಹಾಲಾಡಿಯಲ್ಲಿ ಹವಾನಿಯಂತ್ರಿತ ಸಭಾಭವನ  ‘ಶಾಲಿನಿ ಜಿ. ಶಂಕರ್ ಕನ್ವೆನ್ಷನ್ ಸೆಂಟರ್’ ಉದ್ಘಾಟನೆ

ಉಡುಪಿ: ಜಿ. ಶಂಕರ್ ಶ್ಯಾಮಿಲಿ ಸಮೂಹ ಸಂಸ್ಥೆಯ ವತಿಯಿಂದ  ಉಡುಪಿ ಜಿಲ್ಲೆಯ ಹಾಲಾಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಅತ್ಯಾಧುನಿಕ ಸೌಲಭ್ಯ ಹಾಗೂ ಸುಸಜ್ಜಿತವಾದ ಸಂಪೂರ್ಣ ಹವಾನಿಯಂತ್ರಿತ ಸಭಾಭವನ  ‘ಶಾಲಿನಿ ಜಿ. ಶಂಕರ್ ಕನ್ವೆನ್ಷನ್ ಸೆಂಟರ್’ ಫೆ.17ರಂದು ಉದ್ಘಾಟನೆಗೊಳ್ಳಲಿದೆ. ಜೊತೆಗೆ 1 ಸಾವಿರ ಆಸನ ವ್ಯವಸ್ಥೆ ಹೊಂದಿರುವ ‘ಓಪನ್ ಗಾರ್ಡನ್ ಸಭಾಂಗಣ’ದ ಪ್ರವೇಶೋತ್ಸವ ಸಮಾರಂಭ ಇದೇ ದಿನ ಅದ್ದೂರಿಯಾಗಿ ನಡೆಯಲಿದೆ.ಅಪರಾಹ್ನ ಗಂಟೆ 12:30ರಿಂದ ಭೋಜನ ವ್ಯವಸ್ಥೆ, ಸಾಯಂಕಾಲ ಗಂಟೆ 5 ರಿಂದ ಭಜನಾ ಕಾರ್ಯಕ್ರಮಗಳು, ಗಂಟೆ 7ರಿಂದ  ಪೆರ್ಡೂರು ಮೇಳದ ಕಲಾವಿದರಿಂದ […]