ಡಾ| ಬಿ.ಬಿ. ಹೆಗ್ಡೆ ಕಾಲೇಜು: ಡಿಜಿಟಲ್ ಮಾರ್ಕೆಟಿಂಗ್‍ ಉದ್ಯೋಗ – ಮಾಹಿತಿ ಕಾರ್ಯಕ್ರಮ

ಕುಂದಾಪುರ, ಮಾ.6: ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್‍ನಲ್ಲಿರುವ ಉದ್ಯೋಗ ಅವಕಾಶಗಳ ಮತ್ತು ಡಿಜಿಟಲ್ ಮಾರ್ಕೆಟ್‍ನ ಪ್ರಯೋಜನಗಳನ್ನು ಹುಬ್ಬಳ್ಳಿ ಜ್ಞಾನ ಸಂಸ್ಥೆಯ ಸ್ಥಾಪಕ ಮಯೂರ ಹತ್ವಾರ್ ತಿಳಿಸಿದರು.
ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಆಯೋಜನೆಯಲ್ಲಿ ಅಂತಿಮ ಬಿ.ಕಾಂ. ಹಾಗೂ ಬಿ.ಬಿ.ಎ. ವಿದ್ಯಾರ್ಥಿಗಳಿಗೆ ನಡೆಸಿದ “ಡಿಜಿಟಲ್ ಮಾರ್ಕೆಟ್‍ನ ಅವಕಾಶಗಳ” ಕುರಿತು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಫ್ರಿಲೆನ್ಸ್ ಸಲಹೆಗಾರ ಮತ್ತು ತರಬೇತುದಾರ ವರದರಾಜ್ ಕೆ. ಭಟ್, ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಜೇಶ್ ಶೆಟ್ಟಿ ವಕ್ವಾಡಿ ವಂದಿಸಿ, ವಾಣಿಜ್ಯ ಉಪನ್ಯಾಸಕ ಸಂತೋಷ್ ಎ. ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.