ಉಡುಪಿ: ಇನ್ಮುಂದೆ ರಸ್ತೆ ಪಕ್ಕ ಮೀನು ಮಾರಾಟ ಮಾಡುವಂತಿಲ್ಲ

ಉಡುಪಿ: ಉಡುಪಿ ನಗರದಲ್ಲಿ ರಸ್ತೆ ಪಕ್ಕದಲ್ಲಿ ಮೀನು ಮಾರಾಟ ಮಾಡುವುದನ್ನು ನಿಷೇಧಿಸಿ ನಗರಸಭೆ ಸುತ್ತೋಲೆ ಹೊರಡಿಸಿದೆ. ಹೀಗಾಗಿ ಇನ್ಮುಂದೆ ನಿಗದಿತ ಸ್ಥಳ ಹೊರತುಪಡಿಸಿ ರಸ್ತೆ ಪಕ್ಕ ಯಾರು ಮೀನು ಮಾರಾಟ ಮಾಡುವಂತಿಲ್ಲ. ನಗರದ ಪ್ರಮುಖ ರಸ್ತೆಗಳಲ್ಲಿ ಮೀನುಗಾರ ಮಹಿಳೆಯರು ಕುಳಿತು ಮೀನು ಮಾರಾಟ ಮಾಡುವುದು ಬಹಳ ಹಿಂದಿನ ಪದ್ಧತಿಯಾಗಿದೆ. ಆದರೆ ಇದರಿಂದ ತೊಂದರೆಯಾಗುತ್ತಿದೆ ಸಾರ್ವಜನಿಕರಿಂದ ನಗರಸಭೆಗೆ ದೂರು ಸಲ್ಲಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಈ ಕ್ರಮಕೈಗೊಂಡಿದೆ. ಕೆಲವು ಯುವಕರು ವಾಹನಗಳಲ್ಲಿ ಮೀನು ತುಂಬಿಕೊಂಡು ಬಂದು ನಗರದಲ್ಲಿ ಸಂಚರಿಸುತ್ತಾ […]

ಉಡುಪಿ ಜಿಲ್ಲೆಗೆ ಗರಿಷ್ಠ ಪ್ರಮಾಣದ ನೆರೆ ಪರಿಹಾರ ಕೊಡಿ: ಮಾಜಿ ಸಚಿವ ಸೊರಕೆ ಆಗ್ರಹ

ಉಡುಪಿ: ಜಿಲ್ಲೆಯಲ್ಲಿ ನೆರೆಯಿಂದ ದೊಡ್ಡಮಟ್ಟದ ಹಾನಿ ಸಂಭವಿಸಿದ್ದು, ರಾಜ್ಯ ಸರ್ಕಾರ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆಗ್ರಹಿಸಿದರು. ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದ ಉಡುಪಿ ಜಿಲ್ಲೆಗೆ ದೊಡ್ಡ ಆಘಾತ ಆಗಿದೆ. ಸಾವಿರಾರು ಕುಟುಂಬಗಳ ಸ್ಥಿತಿ ಅತಂತ್ರವಾಗಿದೆ. ನೂರಾರು ಮಂದಿಯ ಮನೆಗಳಿಗೆ ಹಾನಿಯಾದರೆ, ಇನ್ನೂ ಹಲವಾರ ಮನೆಗಳಿಗೆ ನೀರು ನುಗ್ಗಿದ್ದು, ಇದರಿಂದ ವಿವಿಧ ರೀತಿಯ ಉಪಕರಣಗಳು, ದಿನಬಳಕೆ ವಸ್ತುಗಳು ಹಾಳಾಗಿವೆ. ನೂರಾರು ಎಕರೆ ಬೆಳೆ ಹಾನಿ ಉಂಟಾಗಿದೆ. ಹಾಗಾಗಿ […]

ಹೊಸ ಕಂಪ್ಯೂಟರ್ ಖರೀದಿಸುವವರಿಗೆ ಉಡುಪಿಯ Gizmo ಕಂಪ್ಯೂಟರ್ ನಲ್ಲಿದೆ ದಿ ಬೆಸ್ಟ್ ಆಫರ್

ಕಂಪ್ಯೂಟರ್ ಬಗ್ಗೆ ಒಂಚೂರಾದ್ರೂ ಜ್ಞಾನವಿಲ್ಲದಿದ್ದರೆ ವಿವಿಧ ಕ್ಷೇತ್ರಗಳಲ್ಲಿ ಮುನ್ನುಗ್ಗುಲು ಸಾಧ್ಯವೇ  ಇಲ್ಲ ಎನ್ನುವ ಜಮಾನ ಇದು. ನೀವು ಯಾವುದೇ ಕೆಲಸಕ್ಕೆ ಸೇರಿ ನಿಮಗೆ ಕಂಪ್ಯೂಟರ್ ನಾಲೆಡ್ಜ್ ಇರಲೇಬೇಕು. ಈ ಕೊರೋನಾ ಕಾಲದಲ್ಲಂತೂ ಆನ್ ಲೈನ್ ಅವಲಂಬನೆ ಜಾಸ್ತಿಯಾಗಿ ಕಂಪ್ಯೂಟರ್ ಅನಿವಾರ್ಯ ಎನ್ನುವಂತಾಗಿದೆ. ಮಕ್ಕಳಿಗೂ ಆನ್ ಲೈನ್ ಪಾಠಗಳೂ ಶುರುವಾಗಿ ಪಿಸಿ, ಅಥವಾ ಲ್ಯಾಪ್ ಟಾಪ್ ಬೇಕೇ ಬೇಕಾಗಿದೆ.  ಉಡುಪಿ-ಮಣಿಪಾಲದಲ್ಲಿ ಈಗಾಗಲೇ ಪ್ರಸಿದ್ದಿ ಪಡೆದಿರುವ Gizmo ಕಂಪ್ಯೂಟರ್ ನಲ್ಲಿ ಹೊಸ ಕಂಪ್ಯೂಟರ್ ಪಿಸಿ ಖರೀದಿಸುವವರಿಗೆ ಬೆಸ್ಟ್ ಆಫರ್ ಮತ್ತು […]

ರೈಲ್ವೆ ಖಾಸಗೀಕರಣ ವಿರೋಧಿಸಿ ಉಡುಪಿಯಲ್ಲಿ ನಡೀತು ಪ್ರತಿಭಟನೆ: ರೈಲ್ವೆ ಖಾಸಗೀಕರಣಕ್ಕೆ ವ್ಯಾಪಕ ವಿರೋಧ

ಉಡುಪಿ: ರೈಲ್ವೆ ಖಾಸಗೀಕರಣವನ್ನು ವಿರೋಧಿಸಿ ಸಿಐಟಿಯು ಉಡುಪಿ ತಾಲ್ಲೂಕು ಸಮಿತಿಯ ವತಿಯಿಂದ ಇಂದ್ರಾಳಿಯ ರೈಲ್ವೆ ನಿಲ್ದಾಣದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರವು ದೇಶದ ಸಾರ್ವಜನಿಕ ಸಂಪತ್ತುಗಳನ್ನು ಸದ್ದಿಲ್ಲದೆ ಖಾಸಗಿ ಕಂಪೆನಿಗಳಿಗೆ ಹಾಗೂ ವಿದೇಶಿ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವ ಕೆಲಸಕ್ಕೆ ಕೈಹಾಕಿದೆ. ಈಗಾಗಲೇ ಕಲ್ಲಿದ್ದಲು ಗಣಿ, ರಕ್ಷಣಾ ವಲಯ, ವಿದ್ಯುಚ್ಛಕ್ತಿ ನಿಗಮ, ಎಪಿಎಂಸಿ ಮಾರುಕಟ್ಟೆಗಳನ್ನು ಖಾಸಗೀಕರಣಗೊಳಿಸಿದ್ದಾರೆ. ಇದೀಗ ದೇಶದ ಅತೀ ದೊಡ್ಡ ಸಾರಿಗೆ ಸಂಪರ್ಕವಾದ ರೈಲ್ವೆಯನ್ನು ಖಾಸಗೀಕರಣಗೊಳಿಸಲು ಹೊರಟಿದೆ. ಅದರ ಭಾಗವಾಗಿ ದೇಶದ 109 ರೈಲ್ವೆ […]

ಉಡುಪಿಯಲ್ಲಿ ಕೊರೊನಾಗೆ ಮೊದಲ ಬಲಿ: ಮುಂಬೈನಿಂದ ಆಗಮಿಸಿದ್ದ 54 ವರ್ಷದ ವ್ಯಕ್ತಿ ಮಣಿಪಾಲ ಕೆಎಂಸಿಯಲ್ಲಿ ಸಾವು

ಉಡುಪಿ: ಕ್ವಾರಂಟೈನ್ ನಲ್ಲಿ ಇದ್ದ 54 ವರ್ಷದ ವ್ಯಕ್ತಿ ಮೇ 14ರಂದು ಮೃತಪಟ್ಟಿದ್ದು, ಇಂದು ಬಂದ ಕೊರೊನಾ ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ.‌ ಜಗದೀಶ್ ತಿಳಿಸಿದ್ದಾರೆ. ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಅವರು, ಮೃತ ವ್ಯಕ್ತಿ ಮುಂಬೈನಿಂದ ಕುಂದಾಪುರಕ್ಕೆ ಆಗಮಿಸಿದ್ದು, ಇವರನ್ನು ಕುಂದಾಪುರದ ಕಲ್ಯಾಣ ಮಂಟಪವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಮೇ 13ರಂದು ವ್ಯಕ್ತಿಗೆ ಹೃದಯಾಘಾತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲಿಗೆ ಕುಂದಾಪುರದ ಆಸ್ಪತ್ರೆಗೆ ಹಾಗೂ ಬಳಿಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲು […]