ಉಡುಪಿ: ನ.1 ರಂದು ಅದಿತಿ ಗ್ಯಾಲರಿಯಲ್ಲಿ ವಸಂತ ಕಲಾ ಚಿತ್ರಕಲಾ ಪ್ರದರ್ಶನ
ಉಡುಪಿ: ಬದುಕೆಂಬುದನ್ನು ಕಲೆಯಾಗಿ ತಿಳಿದು, ಕಲೆಯ ಬದುಕನ್ನೇ ಬಾಳಿದವರು ಉಡುಪಿಯ ವಸಂತಲಕ್ಷ್ಮೀ ಹೆಬ್ಬಾರ್ (1960-2022) ಅವರು. ಕಾಲೇಜು ದಿನಗಳಿಂದಲೇ ಶಾಸ್ತ್ರೀಯ ಸಂಗೀತ, ನೃತ್ಯ, ಯಕ್ಷಗಾನಗಳಲ್ಲಿ ಪರಿಣತಿ ಸಾಧಿಸಿದ ಇವರು ಯಾವ ಗುರುವಿನ ಆಶ್ರಯವಿಲ್ಲದೇ ಚಿತ್ರ ಕಲೆಗೂ ಕೈಯ್ಯಾಡಿಸಿದರು. ಖ್ಯಾತ ಸಂಗೀತ ಕಲಾವಿದೆ ಪುತ್ರಿ ರಂಜನಿಯ ಅಕಾಲ ಮೃತ್ಯುವಿನ ಬಳಿಕ (2013) ವಸಂತಲಕ್ಷ್ಮೀ ಯವರು ದುಃಖದ ಮಡುವಿನಿಂದ ಮರೆಯಾಗಲು ಸಾಧನವಾಗಿ ಆಯ್ದುಕೊಂಡದ್ದು ಚಿತ್ರಕಲೆ. ಆಯಿಲ್, ಅಕ್ರಿಲಿಕ್, ಪೆನ್ಸಿಲ್ ಡ್ರಾಯಿಂಗ್ ಮಾಧ್ಯಮಗಳನ್ನು ಬ್ರಷ್- ನೈಫ್ – ಸ್ಕ್ಯಾಲ್ಪೆಲ್ ಸಾಧನಗಳನ್ನು ಬಳಸಿ […]
ಬಣ್ಣದ ಬೆರಗಿನ ಯುವ ಕಲಾಕಾರ: ಇದು ಸುಳ್ಯದ ಕೌಶಿಕ್ ಅವರ ಚಮತ್ಕಾರ!
ಇವರ ಕೈಯಲ್ಲಿ ಮೂಡಿದ ಚಿತ್ರಗಳನ್ನು ನೋಡುತ್ತಿದ್ದರೆ ಆ ಚಿತ್ರದಲ್ಲಿರುವ ವ್ಯಕ್ತಿಗಳೇ ಕಣ್ಣೆದುರು ನಿಜಕ್ಕೂ ಬಂದಂತನ್ನಿಸುತ್ತದೆ.ಇಷ್ಟು ಚೆಂದ ಚಿತ್ರವನ್ನು ಕೈಯಲ್ಲಿ ಬಿಡಿಸಿದ್ದಾ ಎನ್ನುವ ಅಚ್ಚರಿ ಕೂಡ ನಮ್ಮಲ್ಲಿ ಹುಟ್ಟುತ್ತದೆ. ಇಂತಹ ಅಪೂರ್ವ ಚಿತ್ರ ಬರೆಯುವ ಈ ಕಲಾಕಾರನ ಹೆಸರು ಕೌಶಿಕ್ ಕೆ. ಎಂ. ಸುಳ್ಯ ತಾಲೂಕಿನ ಪಂಜ ನಿವಾಸಿವಾಗಿರುವ ಕೌಶಿಕ್ ಅವರು ಬಿಡಿಸುವ ಚಿತ್ರಗಳು ತಮ್ಮ ಅಪೂರ್ವ ಕಲಾವಂತಿಕೆಯಿಂದ,ಕಲಾತ್ಮಕ ನೋಟದಿಂದ ಗಮನಸೆಳೆಯುತ್ತದೆ. ಅಂದ ಹಾಗೆ ಕೌಶಿಕ್, ಚಿತ್ರಕಲೆಯನ್ನು ಅಭ್ಯಾಸ ಮಾಡಲು ತರಗತಿಗಳಿಗೆ ಹೋದವರಲ್ಲ, ಬಣ್ಣಗಳೊಡನೆ ಆಟವಾಡುತ್ತ ಚಿತ್ರಕಲೆಯನ್ನು ಅಭ್ಯಾಸ […]
ಕಲ್ಪನೆಗೆ ಬಣ್ಣ ತುಂಬುವ ಕಾರ್ಕಳದ ಬಣ್ಣದ ಹುಡುಗಿ ಸ್ವಾತಿ ಶೆಣೈ ಚಿತ್ರಗಳು ಇಲ್ಲಿವೆ ನೋಡಿ
ಇವರು ಬಿಡಿಸೋ ಪ್ರತೀ ಚಿತ್ರಗಳು ಸರಳ ಮತ್ತು ಸಹಜತೆಯಿಂದ ಗಮನಸೆಳೆಯುತ್ತದೆ. ಒಂದು ರೀತಿಯ ಕಲಾತ್ಮಕ ನೋಟಗಳಿಂದ ಖುಷಿಕೊಡುವಂತಿರುತ್ತದೆ. ಇವರ ಹೆಸರು ಸ್ವಾತಿ ಶೆಣೈ, ಊರು ಕಾರ್ಕಳ. ಮಂಡಲ ಆರ್ಟ್, ಬಾಟಲ್ ಆರ್ಟ್, ಲಿಡ್ ಆರ್ಟ್ ಮೊದಲಾದ ಕಲಾಕೃತಿಗಳು ಇವರ ಕೈಯಲ್ಲಿ ಆಗಾಗ ಅರಳುತ್ತವೆ. “ನಂಗೆ ಬಾಲ್ಯದಿಂದಲೂ ಚಿತ್ರಕಲೆ ಎಂದರೆ ಅಪಾರ ಆಸಕ್ತಿ.ನಂಗೆ ಚಿತ್ರಕಲೆಗೆ ಗುರುಗಳಿಲ್ಲ. ಸ್ವಯಂ ಆಸಕ್ತಿಯಿಂದಲೇ, ಪ್ರೀತಿಯಿಂದ ಚಿತ್ರ ಬಿಡಿಸಲು ನಾನು ಶುರುಮಾಡಿದೆ.ನನ್ನ ಸ್ವಂತ ಆಲೋಚನೆ ಮತ್ತು ಕಲ್ಪನೆಗಳಿಂದ ಚಿತ್ರಗಳನ್ನು ಅರಳಿಸಿದೆ. ಚಿತ್ರಕಲೆ ನನ್ನ […]
ಕಣ್ಣು ಕೊರೈಸುವ ಮೋಹಕ ಚಿತ್ರ ಬಿಡಿಸ್ತಾಳೆ ಉಂಚಳ್ಳಿ ಅನ್ನೋ ಜಲಪಾತದೂರಿನ ಈ ಹುಡುಗಿ:
ಇವರು ಬಿಡಿಸಿದ ಕಲಾಕೃತಿಗಳನ್ನು ನೋಡುತ್ತಿದ್ದರೆ ಬೆರಗಿನಿಂದ ಅಬ್ಬಾ ಎನ್ನುವ ಉದ್ಗಾರ ಮೂಡುತ್ತದೆ. ಪ್ರತಿಭೆ ಇದ್ದರೆ, ಸಾಧಿಸುವ ಮನಸ್ಸಿದ್ದರೆ, ಒಂದು ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಮನುಷ್ಯ ಏನೆನೆಲ್ಲಾ ಸಾಧಿಸಬಹುದಲ್ಲವೇ ಅನ್ನೋ ಅಚ್ಚರಿ ಮೂಡುತ್ತದೆ. ಇವರು ಜಲಪಾತದ ಜಿಲ್ಲೆಯಾದ ಉತ್ತರ ಕನ್ನಡದ ಉಂಚಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಸಿ೦ಧು ಭಟ್. ಗ್ರಾಮೀಣ ಭಾಗದ ಸೊಗಡು, ಶೈಲಿ, ಚೆಂದ, ಬೆರಗು ಎಲ್ಲವೂ ಇವರ ಕಲಾಕೃತಿಯಲ್ಲಿ ಕಾಡುತ್ತದೆ. ಸಿಂಧುಗೆ ಚಿತ್ರಕಲೆಯ ಕುರಿತು ಇಷ್ಟೊಂದು ಆಸಕ್ತಿ ಮೂಡಿದ್ದು ಹೇಗೆ?ಮತ್ತೆ ಬೇರೆ ಯಾವ ಯಾವ ಆಸಕ್ತಿ […]
ಮಣಿಪಾಲದ ಈ ಯುವ ಕಲಾವಿದೆಯ ಕೈಯಲ್ಲಿ ಕಸವೂ ರಸವಾಗುತ್ತೆ: ಇವರಿಗೆ ಪಾಟ್ ಪೈಂಟಿಂಗ್,ಬಾಟಲ್ ಪೈಂಟಿಂಗ್ ಮಾಡೋದಂದ್ರೆ ನೀರು ಕುಡಿದಷ್ಟೇ “ಸುಲಭ”
ಪಾಟ್ ಪೈಂಟಿಂಗ್, ಬಾಟಲ್ ಆರ್ಟ್ ಮಾಡೋದು ಅಂದ್ರೆ ಮಣಿಪಾಲದ ಈ ಯುವ ಕಲಾವಿದೆಗೆ ನೀರು ಕುಡಿದಷ್ಟೇ ಸುಲಭ, ಇವರ ಹೆಸರೂ ಕೂಡ ಸುಲಭ. ಹೌದು ಇವರು ಸುಲಭ ಭಟ್. ಮಣ್ಣಿನ ಪಾಟ್ ಗಳು, ವೇಸ್ಟ್ ಬಾಟಲ್‌ಗಳನ್ನು ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿ ಮನೆಯಲ್ಲಿಟ್ಟರೆ ಅದರ ಚಂದಾನೇ ಬೇರೆ. ಇಂತಹ ಮಣ್ಣಿನ ಪಾಟ್‌ಗಳಿಗೆ ರಂಗು ಬಳಿದು ಅದನ್ನು ಅಂದಗಾಣಿಸುವುದು ಇವರ ನೆಚ್ಚಿನ ಹವ್ಯಾಸ. ಸಹಜ ಮತ್ತು ಸರಳವಾಗಿ ಕಾಣುವ ಇವರ ಕಲಾಕೃತಿಗಳು ಸುಂದರ ಮನೆಗೆ ಇನ್ನಷ್ಟು ಆಪ್ತವಾಗಿಸುತ್ತದೆ. “ಲಾಕ್‌ಡೌನ್ ಟೈಮ್‌ನಲ್ಲಿ […]