ಕಿವೀಸ್ಗೆ ಬೃಹತ್ ಟಾರ್ಗೆಟ್ ನೀಡಿದ ಆಸೀಸ್ : ಹಿಮದ ನಾಡಲ್ಲಿ ರನ್ ಗಳ ಸುರಿಮಳೆ

ಧರ್ಮಶಾಲಾ, ಹಿಮಾಚಲ ಪ್ರದೇಶ: ಏಕದಿನ ವಿಶ್ವಕಪ್‌ನಲ್ಲಿ (Cricket World Cup) ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ರನ್ಗಳ ಮಳೆಯೇ ಸುರಿದಿದೆ. ಕಿವೀಸ್ ಬೌಲರ್ಗಳ ಬೆವರಿಳಿಸಿದ ಆಸೀಸ್ ತಂಡ ನಿಗದಿತ 50 ಓವರ್ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 388 ರನ್ಗಳನ್ನು ಕಲೆ ಹಾಕುವ ಮೂಲಕ ಎದುರಾಳಿಗೆ ಬೃಹತ್ ಟಾರ್ಗೆಟ್ ನೀಡಿದೆ. ಕಿವೀಸ್ ಬೌಲರ್ಗಳ ಬೇವರಿಳಿಸಿದ ಆರಂಭಿಕರು: ಟಾಸ್ ಗೆದ್ದು ನ್ಯೂಜಿಲೆಂಡ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದ್ರೆ ಆರಂಭಿಕರಾದ […]
ಬಾಬರ್, ಶಕೀಲ್ ಅರ್ಧಶತಕ; ಹರಿಣಗಳಿಗೆ 271 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದ ಪಾಕಿಸ್ತಾನ : ವಿಶ್ವಕಪ್ ಕ್ರಿಕೆಟ್

ಚೆನ್ನೈ (ತಮಿಳುನಾಡು): ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ ತಂಡವು ಬಾಬರ್ ಆಜಂ ಮತ್ತು ಸೌದ್ ಶಕೀಲ್ ಅವರ ಅರ್ಧಶತಕದ ನೆರವಿನಿಂದ 46.3 ಓವರ್ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 270 ರನ್ ಗಳಿಸಿತು.ಚೆನ್ನೈನ ಚೆಪಾಕ್ ಪಿಚ್ನಲ್ಲಿ ಇಂದು ತಬ್ರೈಜ್ ಶಮ್ಸಿ ಅವರ ಸ್ಪಿನ್ ದಾಳಿಯ ನಡುವೆಯೂ ಪಾಕಿಸ್ತಾನ ಹರಿಣಗಳಿಗೆ 271 ರನ್ ಗುರಿ ನೀಡಿತು. ಮೈದಾನಕ್ಕಿಳಿದ ಪಾಕ್ ಆರಂಭಿಕರಿಗೆ ಮಾರ್ಕೊ ಜಾನ್ಸೆನ್ ಕಾಡಿದರು. ಕಳೆದೆರಡು ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ಅಬ್ದುಲ್ಲಾ ಶಫೀಕ್ ಕೇವಲ 9 ರನ್ಗೆ […]
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಂಗ್ಲರ ಪಡೆ : ಇದು ವಿಶ್ವಕಪ್ ಟೂರ್ನಿಯ ಅತ್ಯಂತ ಮಹತ್ವದ ಪಂದ್ಯ

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಭಾಗವಾಗಿ ಇಂದು ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಶ್ ಬಟ್ಲರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಲಂಕಾ ಆಟಗಾರರಿಗೆ ಬೌಲಿಂಗ್ ಮಾಡುವಂತೆ ಆಹ್ವಾನ ನೀಡಿದ್ದಾರೆ. ಉಭಯ ತಂಡಗಳು ತಲಾ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿರುವುದರಿಂದ ಇಂದಿನ ಕಾದಾಟ ಉಭಯ ತಂಡಗಳಿಗೂ ಬಹಳ ಮಹತ್ವದ್ದಾಗಿದೆ. ಎರಡೂ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿವೆ.ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು ಟಾಸ್ ಗೆದ್ದ ಆಂಗ್ಲರು […]
ಮಥೀಷ ಪತಿರಾಣ ಸ್ಥಾನಕ್ಕೆ ಅನುಭವಿ ಆಲ್‌ರೌಂಡರ್ ಏಂಜಿಲೊ ಮ್ಯಾಥ್ಯೂಸ್ : ವಿಶ್ವಕಪ್ 2023

ಹೈದರಾಬಾದ್: ಭುಜದ ಗಾಯಕ್ಕೆ ತುತ್ತಾಗಿರುವ ಶ್ರೀಲಂಕಾದ ವೇಗಿ ಮಥೀಷ ಪಥಿರಾಣ ಪಂದ್ಯಗಳಿಂದ ಹೊರಗುಳಿದಿದ್ದು, ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಅನುಭವಿ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ತಂಡ ಸೇರಿಕೊಂಡಿದ್ದಾರೆ.ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಫಾರ್ಮ್ನಿಂದ ಕಂಗೆಟ್ಟಿರುವ ಶ್ರೀಲಂಕಾಗೆ ಆಟಗಾರರ ಗಾಯದ ಸಮಸ್ಸೆ ಕೂಡ ಜೋರಾಗಿ ಕಾಡುತ್ತಿದೆ.ಭುಜದಗಾಯಕ್ಕೆ ತುತ್ತಾಗಿರುವ ಶ್ರೀಲಂಕಾದ ವೇಗಿ ಮಥೀಷ ಪತಿರಾಣ ಸ್ಥಾನಕ್ಕೆ ಬದಲಿ ಆಟಗಾರನಾಗಿ ಅನುಭವಿ ಆಲ್‌ರೌಂಡರ್ ಆಯ್ಕೆಯಾಗಿದ್ದಾರೆ. 36 ವರ್ಷದ ಮ್ಯಾಥ್ಯೂಸ್ಗೆ ಇದು ನಾಲ್ಕನೇ ವಿಶ್ವಕಪ್ ಆಗಿದೆ. ಶ್ರೀಲಂಕಾ ಪರ 221 ಪಂದ್ಯಗಳನ್ನು ಆಡಿರುವ ಅವರು […]
ಸೆಮಿ-ಫೈನಲ್ಗೆ ತಂಡಕ್ಕೆ ಸೇರಿಸಿಕೊಳ್ಳುವ ಚಿಂತನೆ : ಮುಂದಿನ ಎರಡು ಪಂದ್ಯಗಳಿಗೆ ಹಾರ್ದಿಕ್ ಪಾಂಡ್ಯ ಅಲಭ್ಯ

ಹೈದರಾಬಾದ್ : ಆಲ್‌ರೌಂಡರ್ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಅವರು ಮುಂದಿನ ಎರಡು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ.ಪುಣೆಯಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದ ವೇಳೆ ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆ ಪಾದದ ಗಾಯಕ್ಕೆ ತುತ್ತಾದ ಹಾರ್ದಿಕ್ ಪಾಂಡ್ಯ ಚೇತರಿಸಿಕೊಳ್ಳಲು ಇನ್ನಷ್ಟೂ ದಿನಗಳು ಬೇಕಾಗಬಹುದು ಎಂಬ ಮಾಹಿತಿಯನ್ನು ಮೂಲಗಳು ನೀಡಿವೆ. ಪುಣೆಯ ಎಮ್ಸಿಎ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ […]