ಕಿವೀಸ್​ಗೆ ಬೃಹತ್​ ಟಾರ್ಗೆಟ್​ ನೀಡಿದ ಆಸೀಸ್​ : ಹಿಮದ ನಾಡಲ್ಲಿ ರನ್ ಗಳ ಸುರಿಮಳೆ

ಧರ್ಮಶಾಲಾ, ಹಿಮಾಚಲ ಪ್ರದೇಶ: ಏಕದಿನ ವಿಶ್ವಕಪ್‌ನಲ್ಲಿ (Cricket World Cup) ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ರನ್​ಗಳ ಮಳೆಯೇ ಸುರಿದಿದೆ. ಕಿವೀಸ್​ ಬೌಲರ್​ಗಳ ಬೆವರಿಳಿಸಿದ ಆಸೀಸ್​ ತಂಡ ನಿಗದಿತ 50 ಓವರ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು 388 ರನ್​ಗಳನ್ನು ಕಲೆ ಹಾಕುವ ಮೂಲಕ ಎದುರಾಳಿಗೆ ಬೃಹತ್ ಟಾರ್ಗೆಟ್​ ನೀಡಿದೆ.

ಕಿವೀಸ್​ ಬೌಲರ್​ಗಳ ಬೇವರಿಳಿಸಿದ ಆರಂಭಿಕರು: ಟಾಸ್​ ಗೆದ್ದು ನ್ಯೂಜಿಲೆಂಡ್​ ತಂಡ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಆದ್ರೆ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಡೇವಿಡ್ ವಾರ್ನರ್ ದಾಳಿಗೆ ಕಿವೀಸ್​ ಬೌಲರ್​ಗಳ ಬೆಂಡಾದರು. ಕೇವಲ 19 ಓವರ್​ಗಳಿಗೆ ಹೆಡ್​ ಮತ್ತು ವಾರ್ನರ್​ ಮೊದಲ ವಿಕೆಟ್‌ಗೆ 175 ರನ್ ಕಲೆ ಹಾಕಿದ್ದರು. ಭರ್ಜರಿ ಬ್ಯಾಟಿಂಗ್​ ಮಾಡಿದ್ದ ಟ್ರಾವಿಸ್ ಹೆಡ್ (67 ಎಸೆತಗಳಲ್ಲಿ 10 ಬೌಂಡರಿ, 7 ಸಿಕ್ಸರ್, 109 ರನ್​) ಶತಕ ಗಳಿಸಿ ಮಿಂಚಿದರು. ಡೇವಿಡ್ ವಾರ್ನರ್ (65 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್, 81 ರನ್​) ನಿರ್ಣಾಯಕ ಇನಿಂಗ್ಸ್ ಆಡಿದರು. ಆದರೆ ಕಿವೀಸ್ ಬೌಲರ್​ಗಳ ವಿರುದ್ಧ ಅಬ್ಬರಿಸಿ ವಾರ್ನರ್​ ಪೆವಿಲಿಯನ್​ಗೆ ಮರಳಿದ್ದರು.

ಬಳಿಕ ಬಂದ್​ ಬ್ಯಾಟ್ಸ್​ಮನ್​ಗಳು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲದೇ ಪೆವಿಲಿಯನ್​ ಹಾದಿ ಹಿಡಿದರು. ಒಟ್ನಲ್ಲಿ ನಿಗದಿತ 50 ಓವರ್​ಗಳಿಗೆ ಆಸೀಸ್​ ತಂಡ 10 ವಿಕೆಟ್​ಗಳ ನಷ್ಟಕ್ಕೆ 388 ರನ್​ಗಳನ್ನು ಕಲೆ ಹಾಕಿದೆ. ನ್ಯೂಜಿಲೆಂಡ್ ಬೌಲರ್‌ಗಳಾದ ಗ್ಲೆನ್ ಫಿಲಿಪ್ಸ್ ಮತ್ತು ಟ್ರೆಂಟ್ ಬೌಲ್ಟ್ ತಲಾ ಮೂರು ವಿಕೆಟ್​ಗಳು ಪಡೆದ್ರೆ, ಸ್ಯಾಂಟ್ನರ್ 2 ವಿಕೆಟ್ ಪಡೆದರು. ಜೇಮ್ಸ್ ನೀಶಮ್ ಮತ್ತು ಮ್ಯಾಟ್ ಹೆನ್ರಿ ತಲಾ ಒಂದೊಂದು ವಿಕೆಟ್​ ಕಬಳಿಸಿದರು. ನ್ಯೂಜಿಲೆಂಡ್​ ತಂಡ ಆಸೀಸ್​ ವಿರುದ್ಧ ಗೆಲ್ಲಲು 389 ರನ್​ಗಳ ಗುರಿ ತಲುಪಬೇಕಾಗಿದೆ.ಆರಂಭದಲ್ಲಿ ಆಕ್ರಮಣಕಾರಿ ಆಟವಾಡಿದ ಆಸೀಸ್ ತಂಡವನ್ನು ಕಿವೀಸ್ ಬೌಲರ್​ಗಳು ತಡೆಯಲು ಯತ್ನಿಸಿದ್ರೂ ಪ್ರಯೋಜನವಾಗಲಿಲ್ಲ. ನಿಗದಿತ 50 ಓವರ್​ಗಳಿಗೆ ಆಸ್ಟ್ರೇಲಿಯಾ ತಂಡ 10 ವಿಕೆಟ್​ಗಳ ನಷ್ಟಕ್ಕೆ 388 ರನ್​ಗಳನ್ನು ಕಲೆ ಹಾಕುವ ಮೂಲಕ ಎದುರಾಳಿ ನ್ಯೂಜಿಲೆಂಡ್​ ತಂಡಕ್ಕೆ ಬೃಹತ್​ ಟಾರ್ಗೆಟ್​ ನೀಡಿದ್ದಾರೆ.

ವಾರ್ನರ್​ ಬಳಿಕ ಬಂದ ಆಸೀಸ್ ಬ್ಯಾಟ್ಸ್​ಮನ್​ಗಳಲ್ಲಿ ಮಿಚೆಲ್ ಮಾರ್ಷ್ (36 ರನ್​) ಕೆಲಹೊತ್ತು ಹೋರಾಟ ನಡೆಸಿದರು. ಸ್ಟೀವ್ ಸ್ಮಿತ್ (18 ರನ್​) ಮತ್ತು ಲಬುಶಾನೆ (18 ರನ್​) ಹೆಚ್ಚು ರನ್ ಗಳಿಸಲಿಲ್ಲ. 40 ಓವರ್‌ಗಳ ಅಂತ್ಯಕ್ಕೆ ಆಸ್ಟ್ರೇಲಿಯಾ ಐದು ವಿಕೆಟ್‌ಗಳ ನಷ್ಟಕ್ಕೆ 292 ರನ್ ಗಳಿಸಿತು. ಗ್ಲೆನ್ ಮ್ಯಾಕ್ಸ್‌ವೆಲ್ (41 ರನ್​), ಇಂಗ್ಲಿಸ್ (38 ರನ್​) ಮತ್ತು ನಾಯಕ ಪ್ಯಾಟ್ ಕಮಿನ್ಸ್ (37 ರನ್​) ತಂಡದ ಸ್ಕೋರ್​ ಹೆಚ್ಚಿಸುವಲ್ಲಿ ಶ್ರಮ ವಹಿಸಿದರು.