ಉಚಿತ ಟಿಕೆಟ್‌ ಹಿಂದಿರುಗಿಸಿದ ಗವರ್ನರ್ : ಭಾರತ- ದ. ಆಫ್ರಿಕಾ ಕ್ರಿಕೆಟ್

ಕೋಲ್ಕತ್ತ,: ಪಶ್ಚಿಮ ಬಂಗಾಳ ಕ್ರಿಕೆಟ್ ಮಂಡಳಿಯು ಗವರ್ನರ್ ಅವರಿಗೆ ಟಿಕೆಟ್‌ಗಳನ್ನು ಒದಗಿಸಿತ್ತು.ಕಾಳಸಂತೆಯಲ್ಲಿ ಟಿಕೆಟ್ ಮಾರಾವಾಗುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಗವರ್ನರ್ ಈ ನಿರ್ಧಾರ ಕೈಗೊಂಡಿದ್ದಾರೆ.ಪಶ್ಚಿಮ ಬಂಗಾಳದ ಗವರ್ನರ್ ಸಿ. ವಿ. ಆನಂದ ಬೋಸ್ ಅವರು, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕ್ರಿಕೆಟ್ ವಿಶ್ವಕಪ್ ಪಂದ್ಯದ ನಾಲ್ಕು ಉಚಿತ ಟಿಕೆಟ್‌ಗಳನ್ನು ಶನಿವಾರ ಹಿಂದಿರುಗಿಸಿದ್ದಾರೆ ಎಂದು ರಾಜಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ರಾಜ್ಯಪಾಲರು ಕಾಂಪ್ಲಿಮೆಂಟರಿ ಟಿಕೆಟ್‌ಗಳನ್ನು ಸಿಎಬಿಗೆ ಹಿಂದಿರುಗಿಸಿದ್ದಾರೆ. ಅವರು ರಾಜಭವನದಲ್ಲಿ ಜನತಾ ಕ್ರೀಡಾಂಗಣವನ್ನು ತೆರೆಯಲು ನಿರ್ಧರಿಸಿದ್ದಾರೆ, ಅಲ್ಲಿ ಜನರು ದೊಡ್ಡ ಪರದೆಯಲ್ಲಿ ಪಂದ್ಯವನ್ನು ವೀಕ್ಷಿಸಬಹುದು’ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.ಪಂದ್ಯ ವೀಕ್ಷಿಸಲು ಮಧ್ಯಾಹ್ನ 12 ರಿಂದ 2ಗಂಟೆಯವರೆಗೆ ಮೊದಲು ಬಂದವರಿಗೆ ಆದ್ಯತೆ ಎಂಬ ನಿಯಮದ ಆಧಾರದ ಮೇಲೆ ಒಟ್ಟು 500 ಜನರಿಗೆ ಪ್ರವೇಶ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಕಾನೂನುಬಾಹಿರವಾಗಿ ಟಿಕೆಟ್ ಮಾರಾಟ ಮಾಡಿದ ಆರೋದಲ್ಲಿ ನವೆಂಬರ್ 1ರಿಂದ ಈವರೆಗೆ 19 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಇಂದಿನ ಪಂದ್ಯದ ಟಿಕೆಟ್‌ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಕುರಿತು ರಾಜಭವನದ ಕುಂದುಕೊರತೆ ಕೋಶಕ್ಕೆ ಹಲವಾರು ದೂರುಗಳು ಬಂದ ನಂತರ ಬೋಸ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.