ಇವನೇ ನೋಡಿ ನಿಜವಾದ ಡ್ರೋನ್ ಮ್ಯಾನ್ : ಹಠ ಹಿಡಿದು ಡ್ರೋನ್ ಹಾರಿಸಿದ ಉಡುಪಿಯ ಈ ಹುಡುಗನ ಕತೆ ಕೇಳಿ!

ಹಾರುವ ಆಸೆ ಮಾನವನ ಅತಿ ಪುರಾತನ ಕನಸುಗಳಲ್ಲೊಂದು. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳನ್ನು ಕಂಡಂದಿನಿಂದಲೇ ಮಾನವನ ಮನಸ್ಸಿನಲ್ಲಿ ಹಾರುವ ಆಸೆ ಕುಡಿಯೊಡೆದಿರಬೇಕು. ಹಾರಾಡುವ ಕನಸನ್ನು ಸುಲಭವಾಗಿ ನನಸಾಗಿಸುವ ಯಾವ ದಾರಿಯೂ ತೋಚದಾದಾಗ ದಂತಕತೆಗಳಲ್ಲಿ, ಕೇಳಲ್ಪಡುತ್ತವೆ. ಅದಕ್ಕೆ ಪರ್ಯಾಯ ವಸ್ತುವಾಗಿ ಬೆಳೆದದ್ದು ಇದೇ ಡ್ರೋನ್. ಈಗ ಹೇಳ್ತೇವೆ ಕೇಳಿ ಡ್ರೋನ್ ತಯಾರಿಸಿದ ಉಡುಪಿಯ ಹದಿಹರೆಯದ ಹುಡುಗನ ಕಥೆ. ಇವನು ಮಾಡಿದ ಕಾರ್ಯ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಇವನ ಹೆಸರು ಗ್ಲೆನ್ ರೆಬೆಲ್ಲೊ. ಉಡುಪಿ ಜಿಲ್ಲೆಯ ಮೂಡುಬೆಳ್ಳೆಯ ಹುಡುಗ. 2016 […]

ಕಾರ್ಕಳ:ನಿಸರ್ಗ ಪ್ರಿಯರ ಮನಸ್ಸು ಕುಣಿಯುವಂತೆ ಅರಳಿದಳು ಬ್ರಹ್ಮ ಕಮಲ

ಕಾರ್ಕಳ:ಮಳೆಗಾಲಕ್ಕೆ ಬ್ರಹ್ಮ ಕಮಲ ಅರಳುವುದನ್ನು ನೋಡೋದೇ ಚೆಂದ. ಆ ಹೂವಿನ ಚಂದಕ್ಕೆ ಮರುಳಾಗದವರಿಲ್ಲ.ಆಕಾಶದಲ್ಲಿ ಚಂದ್ರ ಮೂಡಿದಂತೆ ಗಿಡದಲ್ಲಿ ಇರುಳು ಮೂಡುವ ಬ್ರಹ್ಮ ಕಮಲ ಕಾರ್ಕಳದ  ಹಿರಿಯಂಗಡಿ ಸಮೀಪವಿರುವ ಈಶ್ವರೀಯ ಬ್ರಹ್ಮ ಕುಮಾರಿ ಕೇಂದ್ರದ ಪರಿಸರದಲ್ಲಿ ರಾಶಿ ರಾಶಿ ಸಂಖ್ಯೆಯಲ್ಲಿ ಅರಳಿದ ಚಿತ್ರವನ್ನು ಉಡುಪಿXPRESS ಗೆ ಕಳುಹಿಸಿಕೊಟ್ಟಿದ್ದಾರೆ ಶಿವ ಎಡ್ವಟೈಸರ್ಸ್ ನ ಮಾಲಕ ವರದರಾಯ ಪ್ರಭು

ಇಲ್ಲಿನ ವಿದ್ಯಾರ್ಥಿಗಳಿಗೆ ಪರಿಸರವೆಂದರೆ ಭಾರೀ “ಸ್ನೇಹ” ಎಳೆಯ ಕಂಗಳಿಗೆ ಪರಿಸರ ಪಾಠ ಮಾಡ್ತಿದೆ ಸುಳ್ಯದ ಸ್ನೇಹ ಶಾಲೆ

ನಮಗೋಸ್ಕರ ಶುದ್ದ ಗಾಳಿ, ನೀರು, ಬದುಕು ನೀಡುವ ಪರಿಸರವನ್ನು ಕಾಪಾಡದಿದ್ದರೆ ನಮಗೆ ಬದುಕೇ ಇಲ್ಲ. ನಮಗೆ ಎಲ್ಲದ್ದಕ್ಕೂ ಪರಿಸರ ಬೇಕು. ಆದರೆ ಪರಿಸರವನ್ನು ಪ್ರೀತಿಸುವುದರಲ್ಲಿ ನಾವು ಹಿಂದೇಟು ಹಾಕುತ್ತಿದ್ದೇವೆ. ಅದರಲ್ಲೂ ಪರಿಸರ ಶಿಕ್ಷಣ ಕೊಡಬೇಕಾದ ಶಿಕ್ಷಣ ಸಂಸ್ಥೆಗಳು, ಪರಿಸರ ದಿನಕ್ಕೊಮ್ಮೆ ಗಿಡ ನೆಟ್ಟು ಆಮೇಲೆ ಪರಿಸರ ಪ್ರೀತಿಯನ್ನೇ ಮರೆತುಬಿಡುತ್ತವೆ. ಆದರೆ ಇಲ್ಲೊಂದು ಅಪರೂಪದ ಶಿಕ್ಷಣ ಸಂಸ್ಥೆ ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡಿದೆ. ಆ ಮೂಲಕ ಪರಿಸರ ರಕ್ಷಣೆಗೆ ಸತತ ಹೆಗಲು ಕೊಡುತ್ತಲೇ ಇದೆ. ಈ ಶಾಲೆ […]

ಉದ್ಯಾವರದ ಈ ಕಲಾಸಿರಿ, ವಿವಿಧ ಪ್ರತಿಭೆಗಳ ಗರಿ: ಭರತನಾಟ್ಯ, ಯಕ್ಷಗಾನ ಕಲಾವಿದೆ ಕೀರ್ತನಾ ಕತೆ ಕೇಳಿ

ಇದು ಉಡುಪಿ XPRESS “ಬಣ್ಣದ ಕನಸುಗಾರರು” ಸರಣಿಯ  9ನೇ ಕಂತು. ಈ ಸರಣಿಯಲ್ಲಿ  ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು  ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ಈ ಸಂಚಿಕೆಯಲ್ಲಿ ಯಕ್ಷರಂಗದಲ್ಲಿ ಮತ್ತು ಭರತನಾಟ್ಯ ರಂಗದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಯುವಕಲಾವಿದೆ ಕೀರ್ತನಾ ಉದ್ಯಾವರ ಅವರ ಯಶೋಗಾಥೆ. ಇವರು ಭರತನಾಟ್ಯದ ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ […]

ಯಕ್ಷರಂಗದಲ್ಲಿ ಅರಳುತ್ತಾರೆ, ವಿದ್ಯಾರ್ಥಿಗಳನ್ನೂ ಅರಳಿಸ್ತಾರೆ: ಬನ್ನಂಜೆ ಸಂಜೀವ ಸುವರ್ಣರ ಶಿಷ್ಯ ಶೈಲೇಶ್ ತೀರ್ಥಹಳ್ಳಿ ಕತೆಯಿದು!

ಇದು ಉಡುಪಿ XPRESS “ಬಣ್ಣದ ಕನಸುಗಾರರು” ಸರಣಿಯ  8ನೇ ಕಂತು. ಈ ಸರಣಿಯಲ್ಲಿ  ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು  ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ಈ ಸಂಚಿಕೆಯಲ್ಲಿ ಯಕ್ಷರಂಗದಲ್ಲಿ ತಾವೂ ಅರಳುತ್ತ, ವಿದ್ಯಾರ್ಥಿಗಳನ್ನೂ ಅರಳಿಸುವ ಬನ್ನಂಜೆ ಸಂಜೀವ ಸುವರ್ಣರ ಶಿಷ್ಯ ಶೈಲೇಶ್ ತೀರ್ಥಹಳ್ಳಿ  ಅವರ ಕತೆ. ಯಕ್ಷಗಾನ ನೋಡುವ, ಆರಾಧಿಸುವ, ಆನಂದಿಸುವ, ಪ್ರೀತಿಸುವ ಕಲಾಭಿಮಾನಿಗಳಿಗೆ ನಮ್ಮಲ್ಲೇನೂ […]