Home Trending ಇವನೇ ನೋಡಿ ನಿಜವಾದ ಡ್ರೋನ್ ಮ್ಯಾನ್ : ಹಠ ಹಿಡಿದು ಡ್ರೋನ್ ಹಾರಿಸಿದ ಉಡುಪಿಯ ಈ...

ಇವನೇ ನೋಡಿ ನಿಜವಾದ ಡ್ರೋನ್ ಮ್ಯಾನ್ : ಹಠ ಹಿಡಿದು ಡ್ರೋನ್ ಹಾರಿಸಿದ ಉಡುಪಿಯ ಈ ಹುಡುಗನ ಕತೆ ಕೇಳಿ!

ನೋಡಿ ಇಲ್ಲಿದ್ದಾನೆ ನಮ್ಮ ನಡುವಿನ ಡ್ರೋನ್ ಮ್ಯಾನ್..ಈತ ತಯಾರಿಸಿದ ರೇಸಿಂಗ್ ಡ್ರೋನ್ ವೇಗ ಗಂಟೆಗೆ 180 ರಿಂದ 220 ಕಿ.ಮೀ ಹಾರಿ ಯಶಸ್ಸಿನ ಮುನ್ನುಡಿ ಬರೆಯಿತು.

ಹಾರುವ ಆಸೆ ಮಾನವನ ಅತಿ ಪುರಾತನ ಕನಸುಗಳಲ್ಲೊಂದು. ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಹಕ್ಕಿಗಳನ್ನು ಕಂಡಂದಿನಿಂದಲೇ ಮಾನವನ ಮನಸ್ಸಿನಲ್ಲಿ ಹಾರುವ ಆಸೆ ಕುಡಿಯೊಡೆದಿರಬೇಕು. ಹಾರಾಡುವ ಕನಸನ್ನು ಸುಲಭವಾಗಿ ನನಸಾಗಿಸುವ ಯಾವ ದಾರಿಯೂ ತೋಚದಾದಾಗ ದಂತಕತೆಗಳಲ್ಲಿ, ಕೇಳಲ್ಪಡುತ್ತವೆ. ಅದಕ್ಕೆ ಪರ್ಯಾಯ ವಸ್ತುವಾಗಿ ಬೆಳೆದದ್ದು ಇದೇ ಡ್ರೋನ್.

ಈಗ ಹೇಳ್ತೇವೆ ಕೇಳಿ ಡ್ರೋನ್ ತಯಾರಿಸಿದ ಉಡುಪಿಯ ಹದಿಹರೆಯದ ಹುಡುಗನ ಕಥೆ. ಇವನು ಮಾಡಿದ ಕಾರ್ಯ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ಇವನ ಹೆಸರು ಗ್ಲೆನ್ ರೆಬೆಲ್ಲೊ. ಉಡುಪಿ ಜಿಲ್ಲೆಯ ಮೂಡುಬೆಳ್ಳೆಯ ಹುಡುಗ. 2016 ರ ತನ್ನ ಹೈಸ್ಕೂಲ್ ಜೀವನದಲ್ಲೇ  ಡ್ರೊನ್ ತಯಾರಿಸಿ ಎಲ್ಲರನ್ನೂ  ಮಂತ್ರಮುಗ್ದ ಗೊಳಿಸಿದ್ದು ಇದೇ ಹುಡುಗ.

 

♦ ಅಂತೂ ರೆಡಿಯಾಯ್ತು ಡ್ರೋನ್ 

ತಾನು ಆಡುತ್ತಿದ್ದ ಆಟದ ವಸ್ತುಗಳ ಮೋಟಾರು ಬಳಸಿ ಬ್ಯಾಟರಿ ಸಿಕ್ಕಿಸಿ ಮೊದಲ ಡ್ರೋನ್ ತಯಾರಿಸಲು ಪ್ರಯತ್ನ ಪಟ್ಟಿದ್ದ ಗ್ಲೆನ್. ಆದರೆ ವಿಫಲನಾದ. ಆದರೆ ದೃತಿಗೆಡದೆ . ವಿಫಲತೆಗೆ ಕಾರಣ ಹುಡುಕತೊಡಗಿದ. ಯುಟ್ಯೂಬ್ ಸಹಕಾರ ಪಡೆದು ಪ್ರಯತ್ನಿಸಿ ಸಫಲನಾದ. ಆಗಷ್ಟೆ ಆತನಿಗೆ ಕೆಲವು ಜನರು ಬೆಂಬಲಕ್ಕೆ ನಿಂತರು. ಅಂತೂ ಈ ಹುಡುಗ ಮೊದಲ ಡ್ರೋನ್ ನಿರ್ಮಿಸಿಯೆ ಬಿಟ್ಟ.

ತನ್ನ ಸಂಬಂಧಿಗಳ ಜೊತೆ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಹಾರುವ ವಿಮಾನಗಳನ್ನು ನೋಡಿ ತಾನೊಬ್ಬ ಹಾರುವ ಯಾಂತ್ರಿಕ ಸಾಧನವನ್ನು ನಿರ್ಮಿಸಬೆಕೆಂದು ಹಠವಿಟ್ಟುಕೊಂಡಿದ್ದ ಗ್ಲೇನ್. ಅದಕ್ಕಾಗಿ ಮನೆಯವರಲ್ಲಿ ಅಣ್ಣಂದಿರ ಬಳಿ ಮಾಹಿತಿ ಪಡೆಯುತ್ತಿದ್ದ . ಆದರೆ ನಿರ್ಮಿಸಲು ಬೇಕಾದ ವಸ್ತುಗಳ ಮಾಹಿತಿ ಇವನಿಗಿರಲಿಲ್ಲ.

♦ ಹುಡುಗನ ಡ್ರೋನ್ ವಿಡಿಯೋ ನೋಡಿ

♦ ಹಾರಿತು ಡ್ರೋನ್, ನನಸಾಯ್ತು ಕನಸು:  ಯೂಟ್ಯೂಬ್ ನಲ್ಲಿ ಸ್ನೇಹಿತರನ್ನು ಸಂಪರ್ಕಿಸಿ ಯುನೈಟೆಡ್‌‌ ಕಿಂಗ್ಡಮ್ ನ ಹವ್ಯಾಸಿ ಡ್ರೋನ್ ಹಾರಾಟಗಾರ Ashcarter ಜೊತೆ ಮಾಹಿತಿ ಪಡೆದುಕೊಂಡು ಬೇಕಾದ ವಸ್ತುಗಳನ್ನು  ಅನಿಲ್ ಡಿಸೋಜ ಪೆರ್ನಾಲ್ ಅವರಿಂದ ತರಿಸಿಕೊಂಡು ಡ್ರೋನ್ ತಯಾರಿಸಿದ. ಈತ ತಯಾರಿಸಿದ ರೇಸಿಂಗ್ ಡ್ರೋನ್ ವೇಗ ಗಂಟೆಗೆ 180 ರಿಂದ 220 ಕಿ.ಮೀ ಹಾರಿ ಯಶಸ್ಸಿನ ಮುನ್ನುಡಿ ಬರೆಯಿತು.

ಇದೀಗ ತಾನು ತನ್ನ ಚಿಕ್ಕ ವಯಸ್ಸಿನಲ್ಲಿ ಮಾಡಿದ್ದ 22 ಡ್ರೊನ್ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾನೆ ಗ್ಲೇನ್. ವೀಡಿಯೋ, ರೇಸಿಂಗ್ ಡ್ರೋನುಗಳ ಜೊತೆಗೆ ವಸ್ತುಗಳ ಸಾಗಾಟ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಕಸ್ಟಮೈಸ್ಡ್ ಡ್ರೋನ್ ಗಳನ್ನೂ ಗ್ಲೆನ್ ತಯಾರಿಸಿ ಕೊಡುತ್ತಾನೆ.

ಈ ಡ್ರೋನ್ ಬೇಡಿಕೆಯೂ ಇದೆ.ಡ್ರೋಣ್ ರಿಪೇರಿ ಮಾಡುವುದನ್ನು ಕಲಿತ್ತಿದ್ದಾನೆ. ತನ್ನ ಶಿಕ್ಷಣಕ್ಕೆ ಬೇಕಾಗುವ ಹಣವನ್ನು ಡ್ರೊನ್ ಮೂಲಕವೇ ಸಂಪಾದಿಸುತ್ತಿದ್ದಾನೆ . ಇತ್ತೀಚೆಗೆ ದ್ವಿತೀಯ ಪಿಯುಸಿ ಯಲ್ಲಿ  ಶೇ.72 ಅಂಕ ಗಳಿಸಿ ಪ್ರಥಮ ಶ್ರೇಣಿ ಯಲ್ಲಿ ಪಾಸಾಗಿದ್ದಾನೆ. ಇದೀಗ ಇವನ ಡ್ರೋಣ್ ಗೆ ಸಿನಿಮಾ ಕ್ಷೇತ್ರದಿಂದಲೂ ಬೇಡಿಕೆ ಬರುತ್ತಿದೆ.

ರೇಸಿಂಗ್ ಡ್ರೋನ್

ಪ್ರತಿಷ್ಠಿತ ಸಂಸ್ಥೆ Army Yachting Node & Yachting Association of India ಮುಂಬೈಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ Sail India ಸ್ಪರ್ಧೆಗೆ ಬಳಸಿದ ಡ್ರೊನ್ ಗ್ಲೇನ್ ತಯಾರಿಸಿದ್ದೇ.
ಮಗನ ಸಾಧನೆಗೆ ಅಮ್ಮ ಗ್ಲ್ಯಾಡಿಸ್ ರೆಬೆಲ್ಲೋ  ಹೆಮ್ಮೆ ಪಡುತ್ತಾರೆ.. ಮುಂದೇನು ಮಾಡುವ ಆಸೆ ಎಂದು ಕೇಳಿದರೆ  ಮಣಿಪಾಲದಲ್ಲಿ ಏರೋನಾಟಿಕ್ಸ್ ಇಂಜಿನಿಯರಿಂಗ್ ಕಲಿಯುವ ಆಸೆ ಇದೆ. ಉನ್ನತ ತಂತ್ರಜ್ಞಾನ ವನ್ನು ಬಳಸಿ ಹೆಚ್ಚು ಮಾಹಿತಿ ತಂತ್ರಜ್ಞಾನ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಹೇಳುತ್ತಾನೆ ಗ್ಲೆನ್.ಇವನ ಬದುಕಿನ ನಿಮ್ಮೆಲ್ಲರ ಹಾರೈಕೆಗಳಿರಲಿ.

♣ ರಾಮ್ ಅಜೆಕಾರ್
error: Content is protected !!